ETV Bharat / state

ಕೊರೊನಾ ಕುರಿತು ಫೇಸ್‌ಬುಕ್‌ ಖಾತೆಯಲ್ಲಿ ಅನುಭವ ಹಂಚಿಕೊಂಡ ಸಚಿವ ಸಿ.ಟಿ.ರವಿ

ಕೊರೊನಾ ಸೋಂಕಿತರಾಗಿದ್ದ ಸಚಿವ ಸಿ.ಟಿ.ರವಿ, ಈ ಬಗ್ಗೆ ತಮ್ಮ ಅನುಭವವನ್ನು ಫೇಸ್​ಬುಕ್ ಖಾತೆಯಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.

ಸಚಿವ ಸಿ.ಟಿ. ರವಿ
ಸಚಿವ ಸಿ.ಟಿ. ರವಿ
author img

By

Published : Jul 22, 2020, 5:20 PM IST

ಚಿಕ್ಕಮಗಳೂರು: ಕೊರೊನಾ ವೈರಸ್​ ಕುರಿತು ಜನತೆಯಲ್ಲಿ ಭಯ ಬೇಡ, ಬದಲಿಗೆ ಜಾಗೃತಿ ಇರಲಿ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಸಚಿವರು ತಮ್ಮ ಅನುಭವವನ್ನು ಫೇಸ್‌ಬುಕ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.

ಕೊರೊನಾ ಹೆಮ್ಮಾರಿಯೇ? ಅನ್ನೋದು ಬಹಳ ಜನರನ್ನು ಕಾಡುತ್ತಿರುವ ಪ್ರಶ್ನೆ. ನನ್ನ ಲೆಕ್ಕದಲ್ಲಿ ಅಲ್ಲ. ಹೆಮ್ಮಾರಿ ಎಂದರೆ ಎಲ್ಲವನ್ನೂ ನುಂಗಿ ಹಾಕುವವಳು. ಎದುರು ಬಂದವರನ್ನು ಯಮಪುರಿಗಟ್ಟಿ ಆಪೋಶನ ತೆಗೆದುಕೊಳ್ಳುವವಳು. ದೇಶದಲ್ಲಿ ರೋಗಿಗಳ ಸಂಖ್ಯೆ ಈಗ 10,77,618 ಇದೆ. ಈ ಪೈಕಿ ನಿಧನರಾದವರು 26,816 ಮಂದಿ. ಗುಣಮುಖರಾದವರ ಸಂಖ್ಯೆ 6,77,423. ಹಾಗಾದರೆ, ರೋಗಿಗಳಲ್ಲಿ ಶೇ. 97ರಷ್ಟು ಜನ ಗುಣಮುಖರಾಗಿದ್ದಾರೆ. ಈ ಅಂಕಿಅಂಶಗಳನ್ನು ನೋಡಿದಾಗ ಇದು ಹೆಮ್ಮಾರಿ ಅಲ್ಲ ಅನ್ನೋದು ತಿಳಿಯುತ್ತದೆ.

ಕೊರೊನಾ ಹೆಮ್ಮಾರಿ ಹೇಗಾದಾಳು?, ಯಾರು ಭಯ ಬೀಳಬೇಕಾದ ಅವಶ್ಯಕತೆಯೇ ಇಲ್ಲ. ನನ್ನ ಶಾಸಕ ಮಿತ್ರರಲ್ಲಿ ಕೆಲವರಿಗೆ ಪಾಸಿಟಿವ್ ಇದೆಯೆಂದು ತಿಳಿದುಬಂದಾಗ ಜುಲೈ 6ನೇ ತಾರೀಖು ಚಿಕ್ಕಮಗಳೂರಿನಲ್ಲಿ ಪರೀಕ್ಷೆಗೆ ಒಳಗಾದೆ. ರಿಸಲ್ಟ್ ನೆಗೆಟಿವ್ ಬಂದಾಗ ರಿಲ್ಯಾಕ್ಸ್ ಮೂಡ್​​ನಲ್ಲಿ ಬೆಂಗಳೂರಿಗೆ ಬಂದೆ. ವಿವಿಧ ಸಭೆಗಳಲ್ಲಿ ಅದ್ರಲ್ಲಿ ಸಂಪುಟ ಸಭೆಯು ಸೇರಿ ಸಕ್ರಿಯವಾಗಿ ಭಾಗವಹಿಸಿದೆ. ಶುಕ್ರವಾರ ಬೆಳಗ್ಗೆ ಸಿಎಂ ಮನೆಯಲ್ಲಿದ್ದ ಹಲವರಿಗೆ ಸೋಂಕು ಬಂದಿದೆ ಅನ್ನೋ ಸುದ್ದಿ ಬಂತು. ಅದಕ್ಕಾಗಿ ಮುಖ್ಯಮಂತ್ರಿಗಳು ಹೋಮ್​ ಕ್ವಾರಂಟೈನ್​ ಸುದ್ದಿ ಕೇಳಿ, ಏನಾದರೂ ಆಗಲಿ ನಾನು ಮತ್ತೊಮ್ಮೆ ಟೆಸ್ಟ್ ಮಾಡಿಸಿಕೊಂಡು ಬಿಡೋಣ ಎಂದು ಬೆಂಗಳೂರಿನಲ್ಲಿ ಟೆಸ್ಟ್ ಮಾಡಿಸಿದೆ. ಶನಿವಾರ ಬೆಳಗ್ಗೆ ಪಾಸಿಟಿವ್ ರಿಪೋರ್ಟ್ ಬಂತು. ನಂಬಲು ಸಾಧ್ಯವಾಗದೆ ಇನ್ನೊಮ್ಮೆ ಪರೀಕ್ಷೆ ಮಾಡಿಸಿದೆ, ಆಗಲೂ ಪಾಸಿಟಿವ್ ಬಂತು.

ನಿಯಮಿತ ವ್ಯಾಯಾಮ ಮಾಡಿ, ಯೋಗಾಭ್ಯಾಸವಿದ್ದರೆ ಇನ್ನೂ ಉತ್ತಮ. ಶ್ವಾಸಕೋಶಕ್ಕೆ ಶಕ್ತಿ ಕೊಡುವ ಪ್ರಾಣಾಯಾಮ ಮಾಡಿ, ಆಹಾರ ಸೇವನೆಯಲ್ಲಿ ಎಚ್ಚರವಿರಲಿ. ತಣ್ಣನೆಯ ಆಹಾರ ಬೇಡ, ಫ್ರಿಡ್ಜ್‌ನಲ್ಲಿದ್ದ ಆಹಾರ ಬೇಡವೇ ಬೇಡ. ಬಿಸಿ ಬಿಸಿ ಆಹಾರ ಹಿತಮಿತವಾಗಿರಲಿ, ಅಜೀರ್ಣ ಆಗುವಂತೆ ಆಹಾರ ಸ್ವೀಕರಿಸಬೇಡಿ, ಅತಿಯಾದ ಎಣ್ಣೆಯೂ ಒಳ್ಳೆಯದಲ್ಲ, ಕರಿದ ಆಹಾರ ಸದ್ಯಕ್ಕೆ ಬೇಡ. ದಿನಕ್ಕೆರಡು ಬಾರಿ ನೆಲನೆಲ್ಲಿ ಅಥವಾ ಅಮೃತಬಳ್ಳಿ, ಕಾಳುಮೆಣಸು ಹಾಕಿದ ಕಷಾಯ ಸೇವಿಸಿ, ಅನಗತ್ಯ ಔಷಧಿ ಸ್ವೀಕರಿಸಲು ಹೋಗದಿರಿ. ಸಹಜವಾಗಿದ್ದರೆ ಯಾವುದೇ ಔಷಧಿಯ ಅವಶ್ಯಕತೆ ಇಲ್ಲ. ಕೆಲವೊಮ್ಮೆ ಔಷಧಿಯೇ ಅತಿಯಾಗಿ ಆರೋಗ್ಯ ಕೆಡಿಸಬಹುದು. ವಾತ, ಪಿತ್ತ, ಕಫ, ಸಮಚಿತ್ತದಲ್ಲಿ ಇದ್ದರೆ ನೀವು ಆರೋಗ್ಯವಾಗಿದ್ದೀರಿ ಎಂದು ಅರ್ಥ. ಹೆಚ್ಚು ಬಿಸಿ ನೀರು ಕುಡಿಯಿರಿ. ನಾನು ಪ್ರತಿ ಗಂಟೆಗೊಂದು ದೊಡ್ಡ ಲೋಟದಲ್ಲಿ ನೀರು ಕುಡಿಯುತ್ತಿದ್ದೆ, ರಾತ್ರಿ ವೇಳೆ ಎರಡು ಗಂಟೆಗೊಮ್ಮೆ ಒಂದು ಲೋಟ ನೀರು ಕುಡಿಯುತ್ತಿದ್ದೆ. ಯಾವುದು ಅತಿಯಾಗದಂತೆ ಎಚ್ಚರ ವಹಿಸಿ ಎಂದು ಸಲಹೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.