ETV Bharat / state

ಅಭ್ಯರ್ಥಿಗಳನ್ನು ನೆಚ್ಚಿಕೊಂಡು ನಾವು ಚುನಾವಣೆ ಮಾಡಲ್ಲ: ಸಚಿವ ಸಿ.ಟಿ. ರವಿ - ಚಿಕ್ಕಮಗಳೂರಿನ ಸುಭಾಷ್​ಚಂದ್ರ ಬೋಸ್ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ

ಬಿಜೆಪಿ ಪಕ್ಷ ಅಭ್ಯರ್ಥಿಗಳ ಆಧಾರದ ಮೇಲೆ ಚುನಾವಣೆ ಮಾಡಲ್ಲ. ಪಕ್ಷ ಸಂಘಟನೆ ಮೇಲೆ ಚುನಾವಣೆ ನಡೆಯುತ್ತೆ ಎಂದು ಸಚಿವ ಸಿ.ಟಿ. ರವಿ ಹೇಳಿದರು. ಕಾಂಗ್ರೆಸ್​ನಲ್ಲಿ ಅಭ್ಯರ್ಥಿಯೇ ಎಲ್ಲವನ್ನು ಮಾಡಿಕೊಳ್ಳಬೇಕಾದ ಸ್ಥಿತಿ ಇದೆ ಎಂದು ಸಿ.ಟಿ ರವಿ ಟಾಂಗ್ ನೀಡಿದರು.

ಸಚಿವ ಸಿ.ಟಿ. ರವಿ
author img

By

Published : Nov 1, 2019, 11:09 PM IST

ಚಿಕ್ಕಮಗಳೂರು: ಬಿಜೆಪಿ ಪಕ್ಷ ಅಭ್ಯರ್ಥಿಗಳ ಆಧಾರದ ಮೇಲೆ ಚುನಾವಣೆ ಮಾಡಲ್ಲ. ನಮ್ಮದು ಸಂಘಟನೆ ಮೇಲೆ ಚುನಾವಣೆ ನಡೆಯುತ್ತೆ ಎಂದು ಸಚಿವ ಸಿ.ಟಿ. ರವಿ ಹೇಳಿದರು. ಕಾಂಗ್ರೆಸ್​ನಲ್ಲಿ ಅಭ್ಯರ್ಥಿಯೇ ಎಲ್ಲವನ್ನು ಮಾಡಿಕೊಳ್ಳಬೇಕಾದ ಸ್ಥಿತಿ ಇದೆ ಎಂದು ಸಿ.ಟಿ ರವಿ ಕೈ ಪಾಳಯಕ್ಕೆ ಟಾಂಗ್ ನೀಡಿದರು.

ನಗರದ ನೇತಾಜಿ ಸುಭಾಷ್​ಚಂದ್ರ ಬೋಸ್ ಮೈದಾನದಲ್ಲಿ 64ನೇ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವ ಸಿ.ಟಿ. ರವಿ, ಕನ್ನಡ ಧ್ವಜವನ್ನು ಯಾವತ್ತೂ ಹಾರಿಸಿಲ್ಲ. ಹಾರಿಸಿರುವ ಉದಾಹರಣೆಯೇ ನನಗೆ ಗೊತ್ತಿಲ್ಲ ಎಂದರು.

ಇನ್ನು ಚುನಾವಣೆಯ ನೀತಿ ಸಂಹಿತೆ ಘೋಷಣೆ ಆಗಿಲ್ಲ. ಅದು ಸುಪ್ರೀಂಕೋರ್ಟ್ ಅಂಗಳದಲ್ಲಿದ್ದು, ನಾವು ನಾಮಪತ್ರ ಹಾಕುವ ಮುಂಚೆ ಅಭ್ಯರ್ಥಿಯನ್ನು ಘೋಷಣೆ ಮಾಡ್ತೇವೆ ಎಂದರು.

64ನೇ ಕನ್ನಡ ರಾಜ್ಯೋತ್ಸವ

Intro:Kn_ckm_01_Ct Ravi Rajostava_av_7202347
Body:ಚಿಕ್ಕಮಗಳೂರು : -

ಚಿಕ್ಕಮಗಳೂರು ಜಿಲ್ಲೆಯಲ್ಲಿ 64 ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಕನ್ನಡ ಬಾವುಟವಿಲ್ಲದೆ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದ್ದು ಕನ್ನಡ ರಾಜ್ಯೋತ್ಸವದಂದು ರಾಷ್ಟ್ರಧ್ವಜ ಮಾತ್ರ ಹಾರಾಟ ಮಾಡಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಸಚಿವ ಸಿ.ಟಿ.ರವಿ ಧ್ವಜಾರೋಹಣ ನೆರವೇರಿಸಿದರು.ನಂತರ ಮಾತನಾಡಿ ಕನ್ನಡ ಬಾವುಟ‌ ಕಳೆದ ಭಾರಿಯೂ ಹಾರಿಸಿಲ್ಲ, ಹಾಗಾಗಿ ಈ ಭಾರಿಯೂ ಹಾರಿಸಿಲ್ಲ ನಾನು ನೋಡಿದ ಹಾಗೇ ಯಾವತ್ತು ಕನ್ನಡ ಧ್ವಜ ಹಾರಿಸಿಲ್ಲ. ಹಾರಿಸಿರುವ ಉದಾಹರಣೆಯೇ ನನಗೆ ಗೊತ್ತಿಲ್ಲ ಸರ್ಕಾರದ ಆದೇಶದ ಬಗ್ಗೆ ನನಗೆ ಗೊತ್ತಿಲ್ಲ. ಇದುವರೆಗೂ ಇತಿಹಾಸ ನೋಡಿದ್ರೆ ಕನ್ನಡ ಧ್ವಜ ಹಾರಿಸಿಲ್ಲ, ಒಂದೇ ದ್ವಜ ಹಾರಿಸಿರೋದು ನಾನು ನೋಡಿರುವುದು ಬಾವುಟ ಕಟ್ಟುವುದು ಬೇರೆ, ಹಾರಿಸುವುದು ಬೇರೆ ಸರ್ಕಾರ ನಾಡಧ್ವಜ ಹಾರಿಸಬೇಡಿ ಎಂದು ಆದೇಶ ಮಾಡಿರುವುದು ನನಗೆ ಗೊತ್ತಿಲ್ಲ ಯಾವ ಆದೇಶವೂ ನನಗೆ ಗೊತ್ತಿಲ್ಲ, ನಾನು ನಾಡಿಗೆ ಒಂದೇ ಧ್ವಜ ಅಂತಾ ಹೇಳಿಲ್ಲ ಸಾಂಸ್ಕೃತಿಕವಾಗಿ ನಾನು ಕನ್ನಡ ಧ್ವಜವನ್ನು ಒಪ್ಪಿಕೊಂಡಿದ್ದೇನೆ ನಾನು ಕನ್ನಡ ಧ್ವಜವನ್ನು ಹಿಡಿದು ಕುಣಿದಿದ್ದೇನೆ ಎಂದೂ ಹೇಳಿದರು. ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಹಿನ್ನೆಲೆ ಕಾಂಗ್ರೆಸ್ ಗೆ ಸಚಿವ ಸಿ ಟಿ ರವಿ ಟಾಂಗ್ ಕೊಟ್ಟಿದು ಇನ್ನು ಚುನಾವಣೆಯ ನೀತಿ ಸಂಹಿತೆ ಘೋಷಣೆ ಆಗಿಲ್ಲ ಅದು ಸುಪ್ರಿಂ ಅಂಗಳದಲ್ಲಿ ಇದೆ ನಾವು ನಾಮಪತ್ರ ಹಾಕುವ ಮುಂಚೆ ಅಭ್ಯರ್ಥಿಯನ್ನು ಘೋಷಣೆ ಮಾಡ್ತೇವೆ ನಾವು ಅಭ್ಯರ್ಥಿಗಳ ಆಧಾರದ ಮೇಲೆ ಚುನಾವಣೆ ಮಾಡಲ್ಲ ನಮ್ಮದು ಕೇಡರ್ ಬೇಸಡ್ ಪಾರ್ಟಿ ಸಂಘಟನೆ ಮೇಲೆ ಚುನಾವಣೆ ನಡೆಯುತ್ತೆ, ಅಭ್ಯರ್ಥಿ ಅದಕ್ಕೆ ಸಹಾಯಕ ಆಗ್ತಾನೆ ಕಾಂಗ್ರೆಸ್ ನವರ ಹಾಗೆ ಅಭ್ಯರ್ಥಿಗಳನ್ನು ನೆಚ್ಚಿಕೊಂಡು ಚುನಾವಣೆ ಮಾಡಲ್ಲ ಕಾಂಗ್ರೆಸ್ ನದ್ದು ಅಭ್ಯರ್ಥಿಯೇ ಎಲ್ಲವನ್ನೂ ಮಾಡಿಕೊಳ್ಳಬೇಕಾದ ಸ್ಥಿತಿ ಇದ್ದು ಈಗಾಗಲೇ ಪಕ್ಷದ ಒಳಗೆ ಚುನಾವಣೆಯ ಬಗ್ಗೆ ಚರ್ಚಿಸಿದ್ದೇವೆ ಎಂದೂ ಚಿಕ್ಕಮಗಳೂರಿನಲ್ಲಿ ಹೇಳಿದರು....

Conclusion:ರಾಜಕುಮಾರ್....
ಈಟಿವಿ ಭಾರತ್...
ಚಿಕ್ಕಮಗಳೂರು..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.