ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ವಿರುದದ್ಧ ಸಚಿವ ಸಿ ಟಿ ರವಿ ಕಿಡಿ ಕಾರಿದ್ದಾರೆ.
ಇನ್ನೊಂದು ಕ್ಷೇತ್ರ ಹುಡುಕಿಕೊಂಡು ಗೆಲ್ಲುವ ಸ್ಥಿತಿ ಸಿದ್ದರಾಮಯ್ಯ ಅವರಿಗೆ ಯಾಕೆ ಬಂತು ಅಂತಾ ಕೇಳುವ ಮೂಲಕ ಚಾಮುಂಡೇಶ್ವರಿ ಸೋಲಿನ ರಿಯಾಲಿಟಿಯನ್ನು ಸಚಿವ ಸಿ ಟಿ ರವಿ ಕೆದಕಿದ್ದಾರೆ. ನಾನು ಸಿದ್ದರಾಮಯ್ಯ ದಡ್ಡ ಅಂತಾ ಹೇಳುವಷ್ಟು ದೊಡ್ಡವನಲ್ಲ. ಮೂರ್ಖರು ಮಾತ್ರ ನಾನೊಬ್ನೇ ಬುದ್ಧಿವಂತ ಅನ್ಕೋತ್ತಾರೆ. ಸಿದ್ದರಾಮಯ್ಯ ಯಾವ ಸಾಲಿಗೆ ಸೇರ್ತಾರೆಂಬುದು ಜನರಿಗೆ ಬಿಟ್ಟದ್ದು. ಪ್ರೀತಿ ಇಲ್ಲದಿದ್ದರೆ ಜನ ನನ್ನನ್ನು 4 ಬಾರಿ ಗೆಲ್ಲಿಸುತ್ತಿರಲಿಲ್ಲ.
ಸಿದ್ದರಾಮಯ್ಯಗೆ ಜನರ ಪ್ರೀತಿ ಇದ್ಯಾ? ಜನ ಚಾಮುಂಡೇಶ್ವರಿಯಲ್ಲಿ ಯಾಕೆ ಸೋಲಿಸಿದರು. ಅದನ್ನು ಅರ್ಥೈಸಿಕೊಂಡರೇ ಈ ರೀತಿಯ ಮಾತನ್ನು ಅವರು ಮುಂದುವರೆಸಲ್ಲ. ಪ್ರೀತಿ ಸಂಪಾದಿಸಿದ್ದಕ್ಕೆ ಚಿಕ್ಕಮಗಳೂರು ಜನ ನನ್ನನ್ನು ಗೆಲ್ಲಿಸಿದ್ದಾರೆ. ಚಾಮುಂಡೇಶ್ವರಿಯಲ್ಲಿ ನಿಮ್ಮನ್ನು ಸೋಲಿಸಿದ್ದಾರೆ. ಸಿ ಟಿ ರವಿ ಯಾಕೆ ಗೆದ್ದಿದ್ದಾರೆ ಅನ್ನೋದು ನಿಮ್ಮಗೆ ಅರ್ಥವಾಗುತ್ತದೆ ಎಂದು ಚಿಕ್ಕಮಗಳೂರಿನಲ್ಲಿ ಸಚಿವ ಸಿ ಟಿ ರವಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು.