ಚಿಕ್ಕಮಗಳೂರು: ಇಂದು ನೂತನವಾಗಿ ಆಯ್ಕೆಯಾಗಿರುವ ಎಲ್ಲ ಸಚಿವರಿಗೂ ನಾನು ಶುಭಾಶಯ ಕೋರುತ್ತೇನೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹೇಳಿದ್ದಾರೆ.
ಯೋಗ್ಯತೆ ಇರುವವರು ಹಾಗೂ ಅನುಭವ ಇರುವವರು ಬಹಳ ಜನ ಇದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೂ ಅವಕಾಶ ಸಿಗಲಿ ಎಂದು ಹಾರೈಸುತ್ತೇನೆ. ಹೆಚ್ಚು ಜನ ಆಕಾಂಕ್ಷಿಗಳು, ಅರ್ಹರು ಇದ್ದಾಗ ಅಸಮಾಧಾನ ಸ್ವಾಭಾವಿಕ. ಮುಂಚೆ ಕೆಲವರಿಗೆ ಮಾತು ನೀಡಿದ ಕಾರಣಕ್ಕೆ ಅದನ್ನು ಈಡೇರಿಸುವ ಕೆಲಸ ಇನ್ನೂ ಬಾಕಿ ಇದೆ.
ಓದಿ:ಬಿಎಸ್ವೈ ಕ್ಯಾಬಿನೆಟ್ ಸೇರಿದ ಏಳು ಸಚಿವರು... ಪ್ರತಿಜ್ಞಾವಿಧಿ ಸ್ವೀಕಾರದ ಸಂಪೂರ್ಣ ವಿಡಿಯೋ!
ಸಚಿವ ಸ್ಥಾನವನ್ನು ಯಾರಿಗೆ ಕೊಡಬೇಕು, ಯಾರಿಗೆ ಬಿಡಬೇಕು ಎಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ. ಯೋಗ್ಯತೆ ಇದ್ದವರು ತುಂಬಾ ಜನ ಇದ್ದಾಗ, ಆಕಾಂಕ್ಷಿಗಳು ಸ್ವಾಭಾವಿಕವಾಗಿ ಹೆಚ್ಚಾಗಿರುತ್ತಾರೆ. ಇದೇ ಸಂದರ್ಭದಲ್ಲಿ ಶಾಸಕ ಯತ್ನಾಳ್ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ಸಿ ಟಿ ರವಿ ಹಿಂದೇಟು ಹಾಕಿದರು.