ETV Bharat / state

ಸರ್ಕಾರದ ನಿಯಮದ ಅನ್ವಯ ರಂಜಾನ್ ಆಚರಿಸಿ: ಸಚಿವ ಸಿ.ಟಿ. ರವಿ ಮನವಿ - ಚಿಕ್ಕಮಗಳೂರು

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಂಜಾನ್ ಮಾಸಾಚರಣೆ ಆಚರಿಸುವ ಕುರಿತು ಜಿಲ್ಲೆಯ ವಿವಿಧ ತಾಲೂಕುಗಳ ಮುಸ್ಲಿಂ ಸಮುದಾಯದ ಮುಖಂಡರುಗಳೊಂದಿಗೆ ಸಚಿವ ಸಿ.ಟಿ. ರವಿ ಪೂರ್ವಭಾವಿ ಸಭೆ ನಡೆಸಿದರು.

minister c t ravi
ಸಚಿವ ಸಿ.ಟಿ. ರವಿ
author img

By

Published : May 18, 2020, 9:22 PM IST

ಚಿಕ್ಕಮಗಳೂರು: ಕೊರೊನಾ ಸೋಂಕು ದೇಶವ್ಯಾಪಿ ಹರಡಿದ್ದು, ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ನಿಯಮ ಹಾಗೂ ನಿರ್ದೇಶನಗಳನ್ನು ಪಾಲಿಸುವ ಮೂಲಕ ರಂಜಾನ್ ಮಾಸಾಚರಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.

ರಂಜಾನ್ ಮಾಸವು ಉಪವಾಸ ಇರುವ ಮೂಲಕ ಆತ್ಮನಿವೇದನೆ ಮಾಡಿಕೊಳ್ಳುವ ಸಮಯ. ಆದರೆ, ಕೊರೊನಾ ಸೋಂಕು ಎಲ್ಲೆಡೆ ವ್ಯಾಪಿಸಿ ಜನರ ಸಂಭ್ರಮವನ್ನು ಕಸಿದಿದೆ. ಹಾಗಾಗಿ ಸರ್ಕಾರ ನಮ್ಮೆಲ್ಲರ ಸುರಕ್ಷತೆ ದೃಷ್ಟಿಯಿಂದಾಗಿ ದೇವಾಲಯ, ಮಸೀದಿ, ಚರ್ಚುಗಳಲ್ಲಿ ಉತ್ಸವ, ಪ್ರಾರ್ಥನೆ ಮಾಡುವುದನ್ನು ನಿರ್ಬಂಧಿಸಿದೆ. ಇಲ್ಲಿ ಜನರ ನಂಬಿಕೆಗೆ ತೊಂದರೆ ಮಾಡುವ ಉದ್ದೇಶವಿಲ್ಲ. ಜಿಲ್ಲೆಯ ಎಲ್ಲ ಸಮುದಾಯದವರ ಸಹಕಾರದಿಂದಾಗಿ ಜಿಲ್ಲೆ ಈವರೆಗೂ ಹಸಿರು ವಲಯದಲ್ಲೇ ಉಳಿಯಲು ಸಾಧ್ಯವಾಗಿದೆ ಎಂದರು.

ಕೊರೊನಾ ಸೋಂಕು ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಇತ್ತೀಚೆಗೆ ನಮ್ಮ ನೆರೆಯ ಹಾಸನ, ಶಿವಮೊಗ್ಗದಲ್ಲಿಯೂ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ನಮ್ಮ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬರದೇ ಹಸಿರು ವಲಯದಲ್ಲಿ ಗುರ್ತಿಸಿಕೊಂಡಿದೆ. ಇದಕ್ಕೆ ಎಲ್ಲ ಸಮುದಾಯ, ಜಿಲ್ಲೆಯ ಜನತೆ ಸಹಕಾರವೇ ಕಾರಣ. ಸೋಂಕಿನ ಬಗ್ಗೆ ಜನತೆ ಭಯಪಡುವುದು ಬೇಡ. ಇದರಿಂದ ಸಾವಿನ ಪ್ರಮಾಣ ಕಡಿಮೆ. ಆದರೆ, ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ವೇಗದ ಪ್ರಮಾಣ ಹೆಚ್ಚಾಗಿದೆ ಎಂದು ಸಿ.ಟಿ. ರವಿ ತಿಳಿಸಿದರು.

ಈ ಬಾರಿಯ ರಂಜಾನ್ ಮಾಸಾಚರಣೆಯನ್ನ ಮುಸಲ್ಮಾನ ಬಾಂಧವರು ಇಂದಿನ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಸ್ವಯಂ ನಿರ್ಧಾರ ಕೈಗೊಂಡು ಆಚರಿಸಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಅನುಮತಿ ನಿರ್ದೇಶನದಂತೆ ರಂಜಾನ್ ಆಚರಣೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಆಚರಣೆಗೆ ಅನುಮತಿ ಸಿಕ್ಕಲ್ಲಿ ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಆಚರಿಸಬೇಕು. ಅನುಮತಿ ನೀಡದಿದ್ದಲ್ಲಿ ಮನೆಯಲ್ಲೇ ಪ್ರಾರ್ಥಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸಹಕರಿಸುವಂತೆ ಮುಸ್ಲಿಂ ಮುಖಂಡರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.