ಚಿಕ್ಕಮಗಳೂರು : ರಸ್ತೆಯಲ್ಲಿ ಸಾರ್ವಜನಿಕರು ಹೋಗುವ ವೇಳೆ ಕಿರಿ ಕಿರಿ ಮಾಡುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸಿನಿಮೀಯ ಶೈಲಿಯಲ್ಲಿ ಸೆರೆ ಹಿಡಿದು ಆಸ್ವತ್ರೆಗೆ ದಾಖಲು ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಮಾನಸಿಕ ಅಸ್ವಸ್ಥೆಯೊಬ್ಬಳು ಹಲವಾರು ದಿನಗಳಿಂದ ರಸ್ತೆಯಲ್ಲಿ ಸಾರ್ವಜನಿಕರಿಗೆ ಕಿರಿ ಕಿರಿ ಮಾಡುತ್ತಿದ್ದಳು. ಇದನ್ನು ಗಮನಿಸಿದ ಮಲೆನಾಡು ಕ್ರೈಸ್ಥರ ಅಭಿವೃದ್ದಿ ಸಂಘದ ಅಧ್ಯಕ್ಷ ರೂಬೆನ್ ಮೊಸರ್, ನಗರದ ಕೆಎಸ್ಆರ್ಟಿಸಿ ಬಸ್ ನಿಲ್ಡಾಣದ ಮುಂಭಾಗದಲ್ಲಿ ಸೆರೆ ಈಕೆಯನ್ನು ಸೆರೆ ಹಿಡಿದು ಆಸ್ವತ್ರೆಗೆ ದಾಖಲು ಮಾಡಿದ್ದಾರೆ.

ಕಳೆದ ಕೆಲ ದಿನಗಳಿಂದ ಈಕೆ ರಸ್ತೆಯಲ್ಲಿ ಹೋಗುವ ಬರುವ ವಾಹನಗಳಿಗೆ ಅಡ್ಡ ನಿಲ್ಲುವುದು, ಮೈ ಮೇಲೆ ಅರೆಬರೆ ವಸ್ತ್ರ ಧರಿಸಿ ಸಾರ್ಜಜನಿಕರಿಗೆ ಮುಜುಗರ ಆಗುವ ರೀತಿಯಲ್ಲಿ ವರ್ತನೆ ಮಾಡುವುದು, ನೃತ್ಯ ಮಾಡುವುದು ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಳಂತೆ.
ಈಕೆಯ ಪರಿಸ್ಥಿತಿಯನ್ನು ನೋಡಿ ಕೆಲವರು ಕಳವಳ ವ್ಯಕ್ತಪಡಿಸಿದ್ದೂ ಇದೆ. ಈಕೆಯನ್ನು ಉತ್ತಮ ಸ್ಥಿತಿಗೆ ತಂದು ಆರೋಗ್ಯವಂತಳಾಗಿ ಮಾಡಬೇಕು ಎಂದು ಮಲೆನಾಡು ಕ್ರೈಸ್ಥರ ಅಭಿವೃದ್ದಿ ಸಂಘದ ಸದಸ್ಯರು ಈಕೆ ಇರುವ ಜಾಗದ ಮಾಹಿತಿ ಪಡೆದಿದ್ದಾರೆ. ಬಳಿಕ ಜಿಲ್ಲಾ ಎಸ್ಪಿ ಹಾಗೂ ಜಿಲ್ಲಾ ಸರ್ಜನ್ ಅವರ ಗಮನಕ್ಕೆ ತಂದು ಈಕೆಯನ್ನು ಸೆರೆ ಹಿಡಿದಿದ್ದಾರೆ. ನಂತರ ಆಸ್ವತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.