ETV Bharat / state

ರಸ್ತೆ ಅಗಲೀಕರಣಕ್ಕೆ ಭಾರಿ ಸ್ಫೋಟಕ ಬಳಕೆ: ಮುಳ್ಳಯ್ಯನಗಿರಿಯಲ್ಲಿ ಪರಿಸರ ನಾಶ

ಮುಳ್ಳಯ್ಯನಗಿರಿ ಸಾಲಿನ ರಸ್ತೆಗಳ ಕಾಮಗಾರಿ ಭರದಿಂದ ಸಾಗಿದ್ದು, ರಸ್ತೆ ಅಗಲೀಕರಣಕ್ಕೆ ಭಾರಿ ಸ್ಫೋಟಕಗಳನ್ನು ಬಳಸಿ ಪರಿಸರ ನಾಶ ಮಾಡುತ್ತಿದ್ದಾರೆ ಎಂದು ಪರಿಸರವಾದಿಗಳು ಆರೋಪ ಮಾಡುತ್ತಿದ್ದಾರೆ.

ಮುಳ್ಳಯ್ಯನಗಿರಿ
author img

By

Published : May 25, 2019, 4:22 PM IST

ಚಿಕ್ಕಮಗಳೂರು: ಜಿಲ್ಲೆಯ ಮುಳ್ಳಯ್ಯನಗಿರಿಯಲ್ಲಿ ರಸ್ತೆ ಅಗಲೀಕರಣಕ್ಕೆ ಭಾರಿ ಸ್ಫೋಟಕಗಳನ್ನು ಬಳಸಿ ಪರಿಸರ ನಾಶ ಮಾಡುತ್ತಿದ್ದಾರೆ ಎಂದು ಪರಿಸರವಾದಿಗಳು ಆರೋಪ ಮಾಡುತ್ತಿದ್ದಾರೆ.

ರಾಜ್ಯದಲ್ಲೇ ಅತೀ ಎತ್ತರದ ಬೆಟ್ಟ ಪ್ರದೇಶವೆಂದು ಮುಳ್ಳಯ್ಯನಗಿರಿ ಖ್ಯಾತಿ ಪಡೆದಿದೆ. ಹಿಮಾಲಯ ಪರ್ವತ ಶ್ರೇಣಿಗಿಂತಲೂ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಗಳು ಹಳೆಯದಾಗಿವೆ. ಪಶ್ಚಿಮಘಟ್ಟ ವ್ಯಾಪ್ತಿಯ ಮುಳ್ಳಯ್ಯನಗಿರಿ ಸಾಲಿನ ರಸ್ತೆಗಳ ಕಾಮಗಾರಿ ಭರದಿಂದ ಸಾಗಿದ್ದು, ರಸ್ತೆ ಅಗಲೀಕರಣ, ಕಲ್ವರ್ಟ್‍ಗಳ ನಿರ್ಮಾಣ, ಮೋರಿ, ತಡೆಗೋಡೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ರಸ್ತೆಗಳ ಅಗಲೀಕರಣಕ್ಕೆ ಸ್ಫೋಟಕಗಳನ್ನು ಬಳಸುತ್ತಿರುವುದು ಅಲ್ಲಿನ ಸೂಕ್ಷ್ಮ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಪರಿಸರವಾದಿಗಳು ಆರೋಪ ಮಾಡಿದ್ದಾರೆ.

ಇಲ್ಲಿನ ಶೋಲಾ ಕಾಡಿನ ಹುಲ್ಲುಗಾವಲು ವೈಶಿಷ್ಟ್ಯತೆಯಿಂದ ಕೂಡಿದ್ದು, ವಿನಾಶದ ಅಂಚಿನಲ್ಲಿರುವ ಹುಲಿ, ಚಿರತೆ ಸೇರಿದಂತೆ ಅನೇಕ ಪ್ರಾಣಿ, ಪಕ್ಷಿಗಳು, ಸರೀಸೃಪಗಳ ಆವಾಸಸ್ಥಾನವೂ ಇದಾಗಿದೆ. ನದಿಗಳ ಹಾಗೂ ಉಪನದಿಗಳ ಜನ್ಮ ಸ್ಥಳವೂ ಇಲ್ಲಿದೆ ಹಾಗೂ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವೂ ಕೂಡ ಇದಾಗಿದೆ. ಬೆಟ್ಟ ಶ್ರೇಣಿಗಳು ಮಳೆ ಮೋಡಗಳನ್ನು ತನ್ನತ್ತ ಸೆಳೆದು ಮಳೆ ಬೀಳುವಂತಹ ಪ್ರಕ್ರಿಯೆಗೆ ಕಾರಣವಾಗಿವೆ. ಇಂತಹ ಗಿರಿ ಪ್ರದೇಶದಲ್ಲಿ ಅದರಲ್ಲೂ ಸೂಕ್ಷ್ಮ, ಅತೀ ಸೂಕ್ಷ್ಮ ಜೀವ ಸಂಕುಲವನ್ನು ಹೊಂದಿರುವ ಇಲ್ಲಿ ಕಲ್ಲು ಕ್ವಾರಿಗಳಿಗೆ ಬಳಸುವ ಸ್ಫೋಟಕಗಳನ್ನು ಇಟ್ಟು ನೂರಾರು ಕಡೆ ಬೆಟ್ಟಗಳಲ್ಲಿರುವ ಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಮನ ಬಂದಂತೆ ಅವೈಜ್ಞಾನಿಕ ರಸ್ತೆ ಕಾಮಗಾರಿ ಮಾಡುತ್ತಿರುವುದರಿಂದ ನೂರಾರು ಮರಗಿಡಗಳನ್ನು, ಹುಲ್ಲುಗಾವಲನ್ನು ನಾಶಪಡಿಸಲಾಗುತ್ತಿದೆ ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

Intro:R_Kn_Ckm_04_25_Mullaiah giri_Rajkumar_Ckm_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿರುವ ಮುಳ್ಳಯ್ಯನಗಿರಿಯಲ್ಲಿ ರಸ್ತೆ ಅಗಲೀಕರಣಕ್ಕೆ ಭಾರೀ ಸ್ಪೋಟಕಗಳ ಬಳಕೆ, ಪರಿಸರ ನಾಶ, ಮಾಡುತ್ತಿದ್ದಾರೆ ಎಂದೂ ಪರಿಸರವಾದಿಗಳು ಆರೋಪ ಮಾಡಿದ್ದಾರೆ. ಪಶ್ಚಿಮಘಟ್ಟ ವ್ಯಾಪ್ತಿಯ ಮುಳ್ಳಯ್ಯನಗಿರಿ ಸಾಲಿನ ರಸ್ತೆಗಳ ಕಾಮಗಾರಿ ಬರದಿಂದ ಸಾಗಿದ್ದು, ರಸ್ತೆ ಅಗಲೀಕರಣ, ಕಲ್ವರ್ಟ್‍ಗಳ ನಿರ್ಮಾಣ, ಮೋರಿ, ತಡೆಗೋಡೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ರಸ್ತೆಗಳ ಅಗಲೀಕರಣಕ್ಕೆ ಸ್ಪೋಟಕಗಳನ್ನು ಬಳಸುತ್ತಿರುವುದರಿಂದ ಅಲ್ಲಿನ ಸೂಕ್ಷ್ಮ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದೂ ಪರಿಸರವಾದಿಗಳು ಆರೋಪ ಮಾಡಿದ್ದಾರೆ. ರಾಜ್ಯದಲ್ಲೇ ಅತೀ ಎತ್ತರದ ಬೆಟ್ಟ ಪ್ರದೇಶವೆಂದು ಮುಳ್ಳಯ್ಯನಗಿರಿ ಖ್ಯಾತಿ ಪಡೆದಿದೆ. ಇಲ್ಲಿನ ಶೋಲಾ ಕಾಡು, ಹುಲ್ಲುಗಾವಲು ವೈಶಿಷ್ಟ್ಯತೆಯಿಂದ ಕೂಡಿದ್ದು, ವಿನಾಶದ ಅಂಚಿನಲ್ಲಿರುವ ಹುಲಿ, ಚಿರತೆ ಸೇರಿದಂತೆ ಅನೇಕ ಪಕ್ಷಿಗಳು, ಸರಿಸೃಪಗಳ ಆವಾಸಸ್ಥಾನವೂ ಇದಾಗಿದೆ. ನದಿಗಳ ಹಾಗೂ ಉಪನದಿಗಳ ಜನ್ಮ ಸ್ಥಳವೂ ಇಲ್ಲಿದೆ. ಅತಿ ಹೆಚ್ಚು ಮಳೆಬೀಳುವ ಪ್ರದೇಶವೂ ಕೂಡ ಇದಾಗಿದೆ. ಬೆಟ್ಟಶ್ರೇಣಿಗಳು ಮಳೆ ಮೋಡಗಳನ್ನು ತನ್ನತ್ತ ಸೆಳೆದು ಮಳೆ ಬೀಳುವಂತಹ ಪ್ರಕ್ರಿಯೆಗೆ ಕಾರಣವಾಗಿವೆ. ಇಂತಹ ಗಿರಿಪ್ರದೇಶದಲ್ಲಿ ಅದರಲ್ಲೂ ಸೂಕ್ಷ್ಮ ಅತೀಸೂಕ್ಷ್ಮ ಜೀವ ಸಂಕುಲವನ್ನು ಹೊಂದಿರುವ ಇಲ್ಲಿ ಕಲ್ಲು ಕ್ವಾರಿಗಳಿಗೆ ಬಳಸುವ ಸ್ಪೋಟಕಗಳನ್ನು ಇಟ್ಟು ನೂರಾರು ಕಡೆ ಬೆಟ್ಟಗಳ ನೈಸರ್ಗಿಕ ಬಂಡೆಗಳನ್ನು ಸ್ಪೋಟಿಸಲಾಗುತ್ತಿದೆ. ಹಿಮಾಲಯ ಪರ್ವತ ಶ್ರೇಣಿಗಿಂತಲೂ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಗಳು ಹಳೆಯದಾಗಿವೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಮನ ಬಂದಂತೆ ಅವೈಜ್ಞಾನಿಕ ರಸ್ತೆ ಕಾಮಗಾರಿ ಮಾಡುತ್ತ, ಅಗಲೀಕರಣ, ನೂರಾರು ಮರಗಿಡಗಳನ್ನು, ಹುಲ್ಲುಗಾವಲನ್ನು ನಾಶಪಡಿಸಲಾಗುತ್ತಿದೆ ಎಂದೂ ಪರಿಸರವಾದಿಗಳು ಕಳವಳ ವ್ಯಕ್ತಪಡಿಸಿದ್ದಾರೆ.....Conclusion:ರಾಜಕುಮಾರ್....
ಈಟಿವಿ ಭಾರತ್....
ಚಿಕ್ಕಮಗಳೂರು....

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.