ಚಿಕ್ಕಮಗಳೂರು: ನಗರದ ಕಾಳಿದಾಸ ನಗರದ ವೃತ್ತದ ಪಕ್ಕದಲ್ಲಿರುವ ಕೆಂಪನಹಳ್ಳಿಯಲ್ಲಿ ರಾತ್ರೋ ರಾತ್ರಿ ಕಳ್ಳರು ಮನೆ ಮುಂದೆ ನಿಲ್ಲಿಸಿದ ಮಾರುತಿ 800 ಕಾರನ್ನು ಕಳ್ಳತನ ಮಾಡಿದ್ದಾರೆ. ಕಳ್ಳತನದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಕೆಂಪನಹಳ್ಳಿಯ ನೂತನ್ ಎಂಬುವರು ತಮ್ಮ ಮನೆಯ ಮುಂಭಾಗದಲ್ಲಿ ರಾತ್ರಿ ಕಾರು ನಿಲ್ಲಿಸಿದ್ದರು. ಆದರೆ ಬೆಳಗ್ಗೆ ಎದ್ದು ಹೊರ ಬಂದಾಗ ಕಾರು ಇಲ್ಲದಿರುವುದನ್ನು ನೋಡಿ ಗಾಬರಿಯಾಗಿಗೊಂಡಿದ್ದಾರೆ. ಬಳಿಕ ಸಿಸಿ ಟಿವಿ ಯನ್ನು ಪರಿಶೀಲನೆ ಮಾಡಿದಾಗ ಕಳ್ಳತನದ ದೃಶ್ಯ ಸೆರೆಯಾಗಿದೆ. ಕಳೆದ ರಾತ್ರಿ ಸುಮಾರು 12.30ರ ವೇಳೆಗೆ ಮೂರು ಜನ ಕಳ್ಳರು ಕಾರನ್ನು ಕಳ್ಳತನ ಮಾಡಿದ್ದರೆ ಎನ್ನಲಾಗಿದೆ.
ಈ ಕುರಿತು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.