ETV Bharat / state

ಲಾಕ್​ಡೌನ್ ನಿಯಮ ಉಲ್ಲಂಘನೆ ಆರೋಪ: ಮಂಗಳೂರು ತಾ.ಪಂ. ಅಧ್ಯಕ್ಷನ ಕಾರ್​ ಸೀಜ್​​

ಕೊರೊನಾ ಹರಡುವಿಕೆ ತಡೆಗಟ್ಟಲು ರಾಜ್ಯದಲ್ಲಿ ಲಾಕ್​ಡೌನ್​ ಘೋಷಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ಮಂಗಳೂರು ತಾಲೂಕು ಪಂಚಾಯತ್​ ಅಧ್ಯಕ್ಷನ ಕಾರನ್ನು ನಿಯಮ ಉಲ್ಲಂಘನೆ ಆರೋಪದ ಮೇಲೆ ಬಣಕಲ್​ ಪೊಲೀಸರು ಸೀಜ್​ ಮಾಡಿದ್ದಾರೆ.

mangaluru-taluk-panchayat-president-vehicle-seized
ಮಂಗಳೂರು ತಾ.ಪಂ ಅಧ್ಯಕ್ಷನ ಕಾರ್​ ಸೀಜ್​​
author img

By

Published : Apr 18, 2020, 3:33 PM IST

ಚಿಕ್ಕಮಗಳೂರು: ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಮಂಗಳೂರು ತಾಲೂಕು ಪಂಚಾಯತ್​ ಅಧ್ಯಕ್ಷನ ಕಾರನ್ನು ಸೀಜ್​ ಮಾಡಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್​ನಲ್ಲಿ ನಡೆದಿದೆ.

mangaluru-taluk-panchayat-president-vehicle-seized
ಲಾಕ್​ಡೌನ್ ನಿಯಮ ಉಲ್ಲಂಘಟನೆ

ಕೊಟ್ಟಿಗೆಹಾರದಿಂದ ಬಣಕಲ್​ಗೆ ಬಂದು ಹಿಂದಿರುಗಿದ್ದ ನಂತರ ಕಾರನ್ನು ಸೀಜ್​ ಮಾಡಲಾಗಿದೆ. ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡಿ ಸಂಚಾರ ಮಾಡಿದ್ದಲ್ಲದೆ ಪೊಲೀಸರು ತಪಾಸಣೆಗಾಗಿ ಕಾರನ್ನು ತಡೆದ ವೇಳೆ ನಿಲ್ಲಿಸದೆ ಸಂಚಾರ ಮಾಡಿದ ಆರೋಪ ಕೇಳಿ ಬಂದಿದೆ.

ಮಂಗಳೂರು ತಾ.ಪಂ ಅಧ್ಯಕ್ಷನ ಕಾರ್​ ಸೀಜ್​​

ಅಲ್ಲದೆ ಕಾರಲ್ಲಿ ನಾಲ್ಕೈದು ಜನ ಇದ್ದುದಾಗಿ ಪೊಲೀಸ್​ ಮೂಲಗಳು ಮಾಹಿತಿ ನೀಡಿವೆ. ಸದ್ಯ ಸರ್ಕಾರದ ಆದೇಶ ಉಲ್ಲಂಘಿಸಲಾಗಿದೆ ಎಂದು ಬಣಕಲ್​ ಪೊಲೀಸರು ಕಾರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.