ETV Bharat / state

ಕೋವಿಡ್ ವರದಿ ಗೊಂದಲ: ಕೊರೊನಾ ವಾರಿಯರ್​​ಗೆ ಫೋನ್​ ಮಾಡಿ ನಿಂದಿಸಿದ ವ್ಯಕ್ತಿ!

ಸಹೋದರನ ಕೋವಿಡ್​​​ ಟೆಸ್ಟ್ ಗೊಂದಲ ಕುರಿತು ವಿಚಾರಿಸಲು ಕರೆ ಮಾಡಿದ್ದ ವ್ಯಕ್ತಿವೋರ್ವ ಕೊರೊನಾ ವಾರಿಯರ್​​ಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಉದ್ದೇಶ ಪೂರ್ವಕವಾಗಿ ಪಾಸಿಟಿವ್ ವರದಿ ನೀಡಿದ್ದೀರಿ ಎಂದು ಆರೊಪಿಸಿ ಏಕವಚನದಲ್ಲಿಯೇ ನಿಂದಿಸಿರುವ ಆಡಿಯೋ ಈಗ ವೈರಲ್ ಆಗುತ್ತಿದೆ.

Man slams corona warriors on phone for covid test issue
ಕೋವಿಡ್ ವರದಿ ಗೊಂದಲ: ಕೊರೊನಾ ವಾರಿಯರ್​​ಗೆ ಅವಾಚ್ಯ ಪದ ಬಳಿಸಿ ನಿಂದಿಸಿದ ವ್ಯಕ್ತಿ
author img

By

Published : Aug 27, 2020, 6:01 PM IST

ಚಿಕ್ಕಮಗಳೂರು: ಕೊರೊನಾ ಸಂಕಷ್ಟದ ಕಾಲದಲ್ಲೂ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್​​​ಗೆ ವ್ಯಕ್ತಿವೋರ್ವ ಅವಾಚ್ಯ ಪದಗಳಿಂದ ನಿಂದಿಸಿರುವ ಘಟನೆ ಬೆಳಕಿಗೆ ಬಂದಿದೆ.

ಸಹೋದರನ ಕೊರೊನಾ ಪರೀಕ್ಷೆಯ ಗೊಂದಲ ಕುರಿತು ವಿಚಾರಿಸುವ ನೆಪದಲ್ಲಿ ಕರೆ ಮಾಡಿದ್ದ ವ್ಯಕ್ತಿ, ಮಹಿಳಾ ಹೆಲ್ತ್​ ಇನ್ಸ್​ಪೆಕ್ಟರ್​ಗೆ ಏಕವಚನದಲ್ಲೇ ನಿಂದಿಸಿದ್ದಾನೆ.

ಕೊರೊನಾ ವಾರಿಯರ್​ಗೆ ನಿಂದಿಸಿದ ವ್ಯಕ್ತಿ

ಇದೀಗ ಈ ಆಡಿಯೋ ಜನರ ಮೊಬೈಲ್​ಗಳಲ್ಲಿ ಹರಿದಾಡುತ್ತಿದೆ. ಈ ರೀತಿ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಧಮ್ಕಿ ಹಾಕಿರುವುದು ಅಜ್ಜಂಪುರ ತಾಲೂಕಿನ ಅಣ್ಣೆ ಗ್ರಾಮದ ವ್ಯಕ್ತಿ ಎಂದು ತಿಳಿದುಬಂದಿದೆ.

ವೀರೇಶ್ ಸಹೋದರನಿಗೆ ಕೊರೊನಾ ದೃಢವಾಗಿತ್ತು. ಆದರೆ ಆರೋಗ್ಯಾಧಿಕಾರಿಗಳು ಉದ್ದೇಶ ಪೂರ್ವಕವಾಗಿ ಕೊರೊನಾ ಪಾಸಿಟಿವ್ ವರದಿ ನೀಡಿದ್ದಾರೆಂದು ಆರೋಪಿಸಿ ಮಹಿಳಾ ಅಧಿಕಾರಿಗೆ ನಿಂದಿಸಿದ್ದಾನೆ. ಕೊರೊನಾ ವಾರಿಯರ್​​ಗೆ ಈ ರೀತಿ ಅವಾಚ್ಯ ಶಬ್ಧ ಬಳಸಿರುವುದಕ್ಕೆ ಸೂಕ್ತ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರಿಂದ ಆಗ್ರಹ ಕೇಳಿಬರುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.