ಚಿಕ್ಕಮಗಳೂರು : ಪತ್ನಿ ಆಸ್ಪತ್ರೆಗೆ ಸೇರಿದ ಸುದ್ದಿ ಕೇಳುತ್ತಲೇ ಪತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಶನಿವಾರ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಜಯಮ್ಮ (60) ಎಂಬುವರನ್ನು ಅವರ ಕುಟುಂಬಸ್ಥರು ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.
ಈ ವಿಷಯ ತಿಳಿದಂತಹ ಇವರ ಪತಿ ನಿವೃತ್ತ ASI ಬಸವರಾಜ್ (68)ಗೆ ಕೂಡಲೇ ಹೃದಯಾಘಾತವಾಗಿದೆ. ಅವರನ್ನು ಸರ್ಕಾರಿ ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಅಮ್ಮನ ಜೀವ ಮೊದಲು ಹೋಗುವುದೆಂದು ತಿಳಿದ ಮಕ್ಕಳಿಗೆ ತಂದೆಯ ಸಾವು ಆಘಾತಕಾರಿಯಾಗಿದೆ.
ಇವತ್ತು ಕೊರೊನಾ ಸೋಂಕಿಗೆ ತುತ್ತಾಗಿದ್ದ ತಾಯಿಯೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಗಂಡ-ಹೆಂಡತಿ ಇಬ್ಬರ ಸಾವು ಕಂಡು ಅವರ ಆಪ್ತ ವಲಯದಲ್ಲಿ ದು:ಖ ಮಡುಗಟ್ಟಿದೆ.