ETV Bharat / state

'ಮಾಯದಂತ ಮಳೆ ಬಂತಣ್ಣ'.. ಕೋಡಿ ಬಿದ್ದ ಮದಗದ ಕೆರೆ - ಮದಗದ ಕೆರೆ

ಈ ಕೆರೆಯಿಂದ ಐದಾರು ಕಿ.ಮೀ. ದೂರದಲ್ಲಿನ 2000 ಎಕರೆ ವಿಸ್ತೀರ್ಣದ ಅಯ್ಯನ ಕೆರೆ ಇದೆ. ಪಶ್ಚಿಮಘಟ್ಟದ ದಟ್ಟ ಕಾನನದ ಮುಳ್ಳಯ್ಯನಗಿರಿ, ದತ್ತಪೀಠ ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದ ಈ ಕೆರೆಗೆ ನೀರು ಹರಿದು ಬಂದು ಕೆರೆ ತುಂಬಿದೆ. ಇಷ್ಟು ಬೇಗ ಮದಗದ ಕೆರೆ ತುಂಬಿರುವುದು ಕಡೂರಿನ ಜನತೆಗೆ ಹರುಷವನ್ನುಂಟು ಮಾಡಿದೆ..

madagada kere overflows
ಮದಗದ ಕೆರೆ
author img

By

Published : Jul 28, 2021, 10:08 PM IST

ಚಿಕ್ಕಮಗಳೂರು : ಕಳೆದ ಹಲವಾರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿರುವ ಮದಗದ ಕೆರೆ ಕೋಡಿ ಬಿದ್ದಿದೆ.

6 ಸಾವಿರ ಕಾರ್ಮಿಕರು, 3 ಸಾವಿರ ಕುಡುಗೋಲಿನಿಂದ ನಿರ್ಮಿಸಿದ ಮದಗದ ಕೆರೆ ಶತಮಾನಗಳಿಂದಲೂ ಜನರ ನಂಬಿಕೆ ಹುಸಿಯಾಗಿಸಿಲ್ಲ. ಆ ಕಾಲದಿಂದಲೂ ರಾಜ್ಯದಲ್ಲಿ ಎಂಥದ್ದೇ ಬರಗಾಲವಿದ್ದರೂ ಈ ಕೆರೆ ಪ್ರತಿ ವರ್ಷ ಕೋಡಿ ಬೀಳುವುದು ನಿಂತಿಲ್ಲ.

ಕೋಡಿ ಬಿದ್ದ ಮದಗದ ಕೆರೆ: ಹರ್ಷ ವ್ಯಕ್ತಪಡಿಸಿದ ಕಡೂರಿನ ಜನತೆ

'ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ' ಎಂಬುದು ಪ್ರಸಿದ್ಧ ಜನಪದ ಗೀತೆ. ಮಲೆನಾಡಿನಲ್ಲಿ ಮಾಯದಂತ ಮಳೆ ಬಂದಿದ್ದು, ಮದಗದ ಕೆರೆ ಕೋಡಿ ಬಿದ್ದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಈ ಮದಗದ ಕೆರೆಯ ವಿಸ್ತೀರ್ಣ 2036 ಎಕರೆಗೂ ಅಧಿಕ.

ಮದಗದ ಕೆರೆಯಲ್ಲಿ ಮೈದುಂಬಿ ಹರಿಯುವ ನೀರು ಮಾರಿ ಕಣಿವೆವರೆಗೂ ಹರಿಯತ್ತದೆ. ಈ ಕೆರೆ ತುಂಬಿರುವುದರಿಂದ ಸುತ್ತಮುತ್ತಲಿನ ಸಾವಿರಾರು ಎಕರೆ ನೀರಾವರಿ ಸೌಲಭ್ಯ ಒದಗಿಸುವುದರ ಜತೆಗೆ ಕುಡಿಯುವ ನೀರಿನ ಬವಣೆ ಇಲ್ಲದಂತಾಗಿದೆ.

ಈ ಕೆರೆಯಿಂದ ಐದಾರು ಕಿ.ಮೀ. ದೂರದಲ್ಲಿನ 2000 ಎಕರೆ ವಿಸ್ತೀರ್ಣದ ಅಯ್ಯನ ಕೆರೆ ಇದೆ. ಪಶ್ಚಿಮಘಟ್ಟದ ದಟ್ಟ ಕಾನನದ ಮುಳ್ಳಯ್ಯನಗಿರಿ, ದತ್ತಪೀಠ ಭಾಗದಲ್ಲಿ ಸುರಿದ ಧಾರಾಕಾರ ಮಳೆಯಿಂದ ಈ ಕೆರೆಗೆ ನೀರು ಹರಿದು ಬಂದು ಕೆರೆ ತುಂಬಿದೆ. ಇಷ್ಟು ಬೇಗ ಮದಗದ ಕೆರೆ ತುಂಬಿರುವುದು ಕಡೂರಿನ ಜನತೆಗೆ ಹರುಷವನ್ನುಂಟು ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.