ಚಿಕ್ಕಮಗಳೂರು : ಪ್ರೇಮಿಗಳ ದಿನದಂದು ಯುವಕ-ಯುವತಿ ಸಾರ್ವಜನಿಕವಾಗಿ ಲವ್ವಿಡವ್ವಿ ನಡೆಸುತ್ತಿದ್ದ ವೇಳೆ ಬಹಿರಂಗವಾಗಿ ಸಾರ್ವಜನಿಕರಿಗೆ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬಸ್ ನಿಲ್ದಾಣದಲ್ಲಿ ಕೂತು ಜೋಡಿ ಅಸಭ್ಯ ವರ್ತನೆ ತೋರಿದ್ದು, ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮನೆ ಬಳಿ ಇರುವ ಬಸ್ ಸ್ಟಾಪ್ನಲ್ಲಿ ಇಬ್ಬರು ಪ್ರೇಮಿಗಳು ಅಸಭ್ಯ ವರ್ತನೆ ತೋರಿದ್ದಾರೆ.
ಈ ಪ್ರೇಮಿಗಳ ಅಸಭ್ಯ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಇಬ್ಬರಿಗೂ ಬುದ್ಧಿ ಮಾತು ಹೇಳಿ ಕಳುಹಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ : ಸಾವಿನಲ್ಲೂ ಸಾರ್ಥಕತೆ.. ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡ ನರ್ಸ್ ಗಾನವಿ ದೇಹದಾನ..