ಚಿಕ್ಕಮಗಳೂರು: ಕತ್ತೆ ಹಾಲನ್ನು ಮಕ್ಕಳಿಗೆ ಕುಡಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತಿದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಾಗಿದೆ.
ಮಧ್ಯ ಭಾರತದಿಂದ ಚಿಕ್ಕಮಗಳೂರಿಗೆ 20 ಜನರು ಬಂದಿದ್ದು, ಕತ್ತೆ ಹಾಲಿನ ಮಾರಾಟದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇವರು ನಗರದ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳಿ ಕತ್ತೆ ಹಾಲಿನ ಮಹತ್ವದ ಬಗ್ಗೆ ಜನರಿಗೆ ತಿಳಿಸುತ್ತಿದ್ದಾರೆ. ಬೇಕಾದವರು ಸ್ಥಳದಲ್ಲೇ ಕತ್ತೆ ಹಾಲನ್ನು ಮಕ್ಕಳಿಗೆ ಕುಡಿಸುತ್ತಿದ್ದಾರೆ.
ಹಸು - ಎಮ್ಮೆ ಹಾಲಿಗೆ ಒಂದು ಲೀಟರ್ಗೆ ಡೈರಿಯಲ್ಲಿ 45 ರೂಪಾಯಿ ಇದೆ. ಆದರೆ, ಒಂದು ಒಳಲೆ ಕತ್ತೆ ಹಾಲಿಗೆ 50 ರೂಪಾಯಿ ಇದೆ. ಒಂದು ಲೀಟರ್ಗೆ ಬರೋಬ್ಬರಿ 5 ಸಾವಿರ ರೂ ಆಗುತ್ತದೆ. ಹೆಚ್ಚಿನ ಬೆಲೆ ಇದ್ದರೂ ಜನರು ಬಿಡದೇ ಮಕ್ಕಳಿಗೆ ಹಾಲು ಕುಡಿಸುತ್ತಿದ್ದಾರೆ. ಒಂದು ದಿನಕ್ಕೆ ಇವರು 800- 1000 ರೂ. ಗಳವರೆಗೆ ಸಂಪಾದನೆ ಮಾಡುತ್ತಿದ್ದಾರೆ.
ಕೊರೊನಾ ಭಯ ಇರೋದ್ರಿಂದ ಕತ್ತೆ ಹಾಲಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕತ್ತೆಗಳು ಅಂದ್ರೆ ಕೇರ್ ಮಾಡದ ಜನ, ಇದೀಗ ಕೈಗೆಟುಕದ ಕತ್ತೆ ಹಾಲಿಗೆ ಮುಗಿ ಬೀಳುತ್ತಿದ್ದಾರೆ.