ಚಿಕ್ಕಮಗಳೂರು: ವಿದ್ಯುತ್ ಶಾಕ್ ತಗುಲಿ ಲೈನ್ ಮ್ಯಾನ್ ಮೃತಪಟ್ಟಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಮಾದಪುರ ಗ್ರಾಮದ ಸಮೀಪ ನಡೆದಿದೆ.
ಕಲ್ಲೇಶ್ (25) ಮೃತ ವ್ಯಕ್ತಿ. ಪವರ್ ಲೈನ್ ಆಫ್ ಮಾಡಿದ್ದಾರೆ ಎಂದು ಕಂಬ ಏರಿ ವಿದ್ಯುತ್ ಲೈನ್ ಸರಿ ಮಾಡುತ್ತಿದ್ದರು. ಆದರೆ ಏಕಾಏಕಿ ಲೈನ್ನಲ್ಲಿ ವಿದ್ಯುತ್ ಬಂದಿರುವುದರಿಂದ ಶಾಕ್ ಹೊಡೆದು ಮೃತಪಟ್ಟಿದ್ದಾರೆ.
ಓದಿ: ಇಟ್ಟಿಗೆ ಸಾಗಣೆ ಟ್ರ್ಯಾಕ್ಟರ್ ಪಲ್ಟಿ: ಗಾಯಗೊಂಡವರನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ
ಕಡೂರು ರೂರಲ್ ಸಬ್ ಡಿವಿಜನ್ನಲ್ಲಿ ಕಲ್ಲೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಘಟನೆ ಬಗ್ಗೆ ತಿಳಿದ ಕೂಡಲೇ ತಾಲೂಕಿನ ಯಗಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.