ETV Bharat / state

ಚಿರತೆ ದಾಳಿ: ನಾಲ್ಕು ಕುರಿ ಸಾವು - ಚಿಕ್ಕಮಗಳೂರು ಅರಣ್ಯ ಇಲಾಖೆ

ಚಿಕ್ಕಮಗಳೂರು ತಾಲೂಕಿನ ಜಡಗನಹಳ್ಳಿಯ ಶಂಕರದೇವರ ಮಠದ ಬಳಿ ಚಿರತೆ ದಾಳಿಗೆ ನಾಲ್ಕು ಕುರಿಗಳು ಸಾವನ್ನಪ್ಪಿವೆ.

ಕುರಿ ಸಾವು
author img

By

Published : Aug 5, 2019, 1:16 PM IST

ಚಿಕ್ಕಮಗಳೂರು: ಕುರಿಗಳ ಮೇಲೆ ಚಿರತೆ ದಾಳಿ ಮಾಡಿದ್ದು, ಚಿರತೆ ದಾಳಿಗೆ ನಾಲ್ಕು ಕುರಿಗಳು ಸಾವನ್ನಪ್ಪಿವೆ ಹಾಗೂ ಒಂದು ಕುರಿಯನ್ನು ಚಿರತೆ ಎಳೆದುಕೊಂಡು ಹೋಗಿದೆ.

ಚಿರತೆ ದಾಳಿ: ನಾಲ್ಕು ಕುರಿ ಸಾವು

ಚಿಕ್ಕಮಗಳೂರು ತಾಲೂಕಿನ ಜಡಗನಹಳ್ಳಿಯ ಶಂಕರದೇವರ ಮಠದ ಈ ಬಳಿ ನಿನ್ನೆ ರಾತ್ರಿ 12.30ಕ್ಕೆ ಈ ಘಟನೆ ನಡೆದಿದ್ದು, ಚಿರತೆ ದಾಳಿ ಕಂಡು ಜೀವ ಭಯದಿಂದ ಕುರಿಗಾಹಿಗಳು ಸ್ಥಳದಿಂದ ಓಡಿ ಹೋಗಿದ್ದಾಋಎ. ಓಡುವಾಗ ಬಿದ್ದು ಅವರಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ.

ಸುಮಾರು 70 ಸಾವಿರ ಬೆಲೆ ಬಾಳುವ ಕುರಿಗಳಾಗಿದ್ದು, ಈ ಭಾಗದಲ್ಲಿ ಕರಡಿ, ಚಿರತೆ ಇವೆ ಎಂದು ಅರಣ್ಯ ಇಲಾಖೆಗೆ ಮೊದಲೇ ಸ್ಥಳೀಯರು ತಿಳಿಸಿದ್ದರು. ಮೊದಲೇ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದ ಹಿನ್ನೆಲೆ ಅರಣ್ಯ ಇಲಾಖೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸತ್ತ ಕುರಿಗಳಿಗೆ ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿಕ್ಕಮಗಳೂರು ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:Kn_ckm_05_chirate dalli_av_7202347Body:
ಚಿಕ್ಕಮಗಳೂರು : -

ಚಿಕ್ಕಮಗಳೂರಿನಲ್ಲಿ ಚಿರತೆ ದಾಳಿ ಮಾಡಿದೆ.ಚಿರತೆ ದಾಳಿಗೆ ನಾಲ್ಕು ಕುರಿಗಳ ಸಾವನಪ್ಪಿದು ನಾಲ್ಕು ಕುರಿಯ ರಕ್ತ ಕುಡಿದು, ಒಂದನ್ನು ಚಿರತೆ ಎಳೆದುಕೊಂಡು ಹೋಗಿದೆ.ಚಿಕ್ಕಮಗಳೂರು ತಾಲೂಕಿನ ಜಡಗನಹಳ್ಳಿಯ ಶಂಕರದೇವರ ಮಠದ ಬಳಿ ಘಟನೆ ನಡೆದಿದ್ದು ನಿನ್ನೆ ರಾತ್ರಿ 12.30ಕ್ಕೆ ನಡೆದ ಘಟನೆಯಾಗಿದೆ. ಚಿರತೆ ದಾಳಿ ಕಂಡು ಜೀವ ಭಯದಿಂದ ಕುರಿಗಾಯಿಗಳು ಸ್ಥಳದಿಂದ ಓಡಿ ಹೋಗಿದ್ದು ಓಡುವಾಗ ಬಿದ್ದು ಅವರಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ. ಸುಮಾರು 70 ಸಾವಿರ ಬೆಲೆ ಬಾಳುವ ಈ ಕುರಿಗಳಾಗಿದ್ದು ಈ ಭಾಗದಲ್ಲಿ ಕರಡಿ, ಚಿರತೆ ಇವೆ ಎಂದೂ ಅರಣ್ಯ ಇಲಾಖೆಗೆ ಮೊದಲೇ ಸ್ಥಳೀಯರು ತಿಳಿಸಿದ್ದರು. ಮೊದಲೇ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಕ್ರಮಕೈಗೊಳ್ಳದ ಹಿನ್ನಲೆ ಅರಣ್ಯ ಇಲಾಖೆ ಬಗ್ಗೆ ಸ್ಥಳಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತ್ತ ಕುರಿಗಳಿಗೆ ಪರಿಹಾರ ನೀಡುವಂತೆ ಇಲಾಖೆಗೆ ಆಗ್ರಹ ವ್ಯಕ್ತಪಡಿಸಿತಿದ್ದು ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿ ಚಿಕ್ಕಮಗಳೂರು ಅರಣ್ಯ ಇಲಾಖೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ....

Conclusion:ರಾಜಕುಮಾರ್....
ಈಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.