ಚಿಕ್ಕಮಗಳೂರು: ಮಳೆ ನಿಂತ ಎರಡು ದಿನಗಳ ಬಳಿಕ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರದ ವರ್ತೇಕಲ್ ಗಣಪತಿ ದೇವಸ್ಥಾನದ ಬಳಿ ಭೂ ಕುಸಿತ ಉಂಟಾಗಿದೆ. ಇದು ಪರಿಸರದಲ್ಲಿ ನಮ್ಮಿಂದಾಗುವ ಸಣ್ಣ ಬದಲಾವಣೆಯೂ ಅಪಾಯವನ್ನು ತಂದೊಡ್ಡಬಹುದು ಎಂಬುದಕ್ಕೆ ಉತ್ತಮ ನಿದರ್ಶನದಂತಿದೆ.
ಮುಗಿಲೆತ್ತರದ ಮರಗಳ ಮನೆ. ದಟ್ಟ ಹಸಿರು ಆಗಸವನ್ನು ಚುಂಬಿಸುವ ನೋಟ. ಚಿಮ್ಮುವ ವರ್ತೇ ನೀರು. ಇಂಥ ಸುಂದರ ಪರಿಸರದ ಶಿಖರದ ಮೇಲೆ ಈ ಗಣಪತಿ ದೇವಾಲಯವಿದ್ದು, ಕೆಳಗಿನ ರಸ್ತೆಯಿಂದ ಗುಡ್ಡದ ಮೇಲೇರಿ ಗಣೇಶನ ದರ್ಶನ ಪಡೆಯಲು ಕಿರಿದಾದ ಕಾಲು ದಾರಿ ಕೂಡ ಇತ್ತು. ಕೆಲ ತಿಂಗಳ ಹಿಂದೆ ಗಣಪತಿ ದೇಗುಲವನ್ನೂ ನವೀಕರಣಗೊಳಿಸಲಾಗಿತ್ತು.
ಇದ್ದ ಕಾಲುದಾರಿಯನ್ನು ಹಾದಿಯನ್ನು ಸೂಕ್ತ ರೀತಿಯಲ್ಲಿ ಕಡಿದು, ಕಲ್ಲು ಸಿಮೆಂಟ್ ಬಳಸಿ ಸುಂದರ ಮೆಟ್ಟಿಲುಗಳನ್ನು ನಿರ್ಮಿಸಲಾಯಿತು. ಕೆಲವೊಮ್ಮೆ ಅತಿವೃಷ್ಟಿ, ಅನಾವೃಷ್ಟಿ, ಯಂತ್ರಗಳ ಕಾರ್ಯ ಹೆಚ್ಚುತ್ತಿದ್ದಂತೆ ಮಣ್ಣಿನ ಪದರ ಸಡಿಲಗೊಳ್ಳುತ್ತಾ ಭೂ ಕುಸಿತಗಳು ಹೆಚ್ಚಾಗುತ್ತಿವೆ. ಗಣಪತಿ ದೇವಾಲಯದ ಆವರಣದಲ್ಲಿ ಈ ಹಿಂದೆಯೂ ಭೂ ಕುಸಿತ ಉಂಟಾಗಿತ್ತು.
ಇದನ್ನೂ ಓದಿ:ಚಿಕ್ಕೋಡಿ ಭಾಗದ ನದಿಗಳಲ್ಲಿ ನೀರಿನ ಮಟ್ಟ ಇಳಿಕೆ: ನಾಲ್ಕು ಸೇತುವೆಗಳು ಸಂಚಾರಕ್ಕೆ ಮುಕ್ತ