ETV Bharat / state

ಬೆಂಗಳೂರಿನ ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಹಿಂಸಾಚಾರಕ್ಕೆ ಕಾಂಗ್ರೆಸ್ ಕುಮ್ಮಕ್ಕು: ಶೋಭಾ ಕರಂದ್ಲಾಜೆ - ಕಾವೇರಿ ನೀರಿನ ವಿಚಾರ

ಬೆಂಗಳೂರಿನಲ್ಲಿ ಕೆಲ ವರ್ಷಗಳ ಹಿಂದೆ ನಡೆದಿದ್ದ ಗಲಭೆ, ಕಾಂಗ್ರೆಸ್ ಸರ್ಕಾರದ ಭಾಗ್ಯಗಳ ಕುರಿತಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಾಸಮರ ನಡೆಸಿದರು.

Union Minister Shobha Karandlaje spoke to the media.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಧ್ಯಮದವರ ಜೊತೆ ಮಾತನಾಡಿದರು.
author img

By ETV Bharat Karnataka Team

Published : Oct 1, 2023, 4:04 PM IST

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ

ಚಿಕ್ಕಮಗಳೂರು: ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಕೇಸಲ್ಲಿ ಅವರದ್ದೇ ಶಾಸಕರಿಗೆ ಕಾಂಗ್ರೆಸ್ ಬೆಂಬಲ ಕೊಡ್ಲಿಲ್ಲ. ಕಾಂಗ್ರೆಸ್ ಶಾಸಕರ ಮನೆ ಸುಟ್ಟರೂ, ಯಾರೂ ಹೋಗಲಿಲ್ಲ. ಮೊದಲು ನಾವೇ ಹೋಗಿದ್ದು ಅಲ್ಲಿಗೆ. ಕಾಂಗ್ರೆಸ್ ಶಾಸಕರಿಗೆ ನೈತಿಕ ಬೆಂಬಲವನ್ನೂ ಕೊಡ್ಲಿಲ್ಲ. ಕೆ.ಜೆ.ಹಳ್ಳಿ, ಡಿ.ಜೆ. ಹಳ್ಳಿ, ಹುಬ್ಬಳ್ಳಿ ಕೇಸ್ ಆದ ಸಂದರ್ಭದಲ್ಲಿ ಕಾಂಗ್ರೆಸ್ ದೇಶದ್ರೋಹಿಗಳ ಪರ ನಿಂತು, ಅಲ್ಲಿ ತಪ್ಪು ಮಾಡಿದ್ದಾರೆಂದು ಕಾಂಗ್ರೆಸಿಗೆ ಇಂದು ಅರಿವಾಗ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ಮಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿಂದು ಮಾಧ್ಯಮವದರ ಜೊತೆಗೆ ಮಾತನಾಡಿದ ಅವರು, ಪೊಲೀಸ್ ಸ್ಟೇಷನ್, ಮನೆ, ವಾಹನ ಎಲ್ಲವನ್ನೂ ಸುಟ್ಟರು. ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಒಂದು ರೀತಿ ಸ್ಮಶಾನವಾಗಿತ್ತು. ಅದಕ್ಕೆ ಕಾಂಗ್ರೆಸ್ ಕುಮ್ಮಕ್ಕಿತ್ತು. ಸರ್ಕಾರಕ್ಕೆ ಕೆಟ್ಟ ಹೆಸರು ತರೋದ್ರ ಜೊತೆ ಒಂದು ಸಮುದಾಯದ ಓಲೈಕೆಗೆ ಮುಂದಾಗಿದ್ರು. ನ್ಯಾಯುತವಾದ ತನಿಖೆ ಮಾಡಿ, ತಪ್ಪು ಮಾಡಿದ್ದು ಯಾರೆಂದು ಗೊತ್ತಾಗುತ್ತೆ ಎಂದರು.

ಭ್ರಷ್ಟಾಚಾರದ ಕೂಪ: ಜನಕ್ಕೆ ಸಿದ್ದರಾಮಯ್ಯ ಸರ್ಕಾರ ಅಂದ್ರೆ ಯಡವಟ್ಟು ಸರ್ಕಾರ ಅನ್ನಿಸ್ತಿದೆ. ಯಾವ ಆಧಾರದಲ್ಲಿ ಎಲೆಕ್ಷನ್ ಗೆದ್ದಿದ್ರೋ ಅದಕ್ಕೆ ಉಲ್ಟಾ ಇದೆ. ಸರ್ಕಾರ ಹೊಸದಾಗಿ ಬಂದಿದ್ದು, ನಾಲ್ಕೈದು ತಿಂಗಳಾಗಿದೆ. ಐದು ತಿಂಗಳಲ್ಲಿ ಸರ್ಕಾರ ಬಹಳ ದೊಡ್ಡ ಯಡವಟ್ಟು ಮಾಡ್ಕೊಂಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಸರ್ಕಾರ ಸ್ವಜನ ಪಕ್ಷಪಾತದ ಉತ್ತುಂಗಕ್ಕೆ ಏರಿದೆ.

ಕಾವೇರಿ ವಿಚಾರದಲ್ಲಿ ಪೂರ್ತಿ ವಿಫಲ: ಕಾವೇರಿ ನೀರಿನ ವಿಚಾರದಲ್ಲಿ ಫೂರ್ತಿ ವಿಫಲವಾಗಿದೆ. ಕಾವೇರಿ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟಿಗೆ ಸರಿಯಾದ ಮಾಹಿತಿ ಕೊಡಲಿಲ್ಲ. ಕಣ್ಣೊರೆಸಲು ಮೀಟಿಂಗ್ ಕರೆದು ಮೊದಲೇ ನಿತ್ಯ 15 ಸಾವಿರ ಕ್ಯೂಸೆಕ್ ನೀರು ಬಿಟ್ರು. ಭಾಗ್ಯಗಳನ್ನ ಕೊಟ್ರು ಅರ್ಧ ಜನಕ್ಕಷ್ಟೆ ಭಾಗ್ಯ ಸಿಕ್ಕಿರೋದು. ದಿನಾಲೂ ಸರ್ವರ್ ಡೌನ್, ಫೆಲ್ಯೂರ್ ಅಂತ ನೆಪ ಹೇಳ್ತಿದ್ದಾರೆ. ಅವರದ್ದೇ ಶಾಸಕರು ಖುಷಿ ಇಲ್ಲ, ದಿನಕ್ಕೊಂದು ಹೇಳಿಕೆ ಕೊಡ್ತಿದ್ದಾರೆ.

ನಾಲ್ಕೇ ತಿಂಗಳಿಗೆ ಅಧಿಕಾರಿಗಳು ಬೇಸತ್ತಿದ್ದಾರೆ, ಅವರಿಗೆ ಖುಷಿ ಇಲ್ಲ. ಇದು ಇಂದಿನ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ, ಸಿಎಂ, ಡಿಸಿಎಂ, ಶಾಸಕರು, ಮಂತ್ರಿಗಳು ಏನು ಮಾಡ್ತಿದ್ದಾರೆ, ಜನ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಮಾಜಿ ಶಾಸಕರ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಮಾತನಾಡಿ, ನಮ್ಮ ಮುಖಂಡರು, ಮಾಜಿ ಶಾಸಕರನ್ನು ಆಮಿಷವೊಡ್ಡಿ ಸೆಳೆಯುತ್ತಿದ್ದಾರೆ. ಆಂತರಿಕವಾಗಿ ಕಾಂಗ್ರೆಸ್ ಸೇಫ್ ಇಲ್ಲ, ಆಂತರಿಕವಾಗಿ ಕಾಂಗ್ರೆಸ್ ಗಲಿ ಬಿಲಿಯಲ್ಲಿದ್ದಾರೆ. ಅವರಿಗೆ ಅಸುರಕ್ಷತೆ ಕಾಡ್ತಿದೆ, ಅದಕ್ಕೆ ಬಿಜೆಪಿಯನ್ನು ಕರೆದುಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳಿದರು.

ನರೇಂದ್ರ ಮೋದಿ ಅವರು ಪ್ರಪಂಚದಲ್ಲಿ ಭಾರತವನ್ನು ಅಗ್ರಸ್ಥಾನದಲ್ಲಿ ನಿಲ್ಲಿಸುವ ಕೆಲಸ ಮಾಡ್ತಿದ್ದಾರೆ. ಮೋದಿ ಜೊತೆ ಕೈಜೋಡಿಸಿ, 2024ಕ್ಕೆ ಅತ್ಯಧಿಕ ಮತಗಳ ಅಂತರದಲ್ಲಿ ಮೋದಿ ಗೆಲ್ಲಿಸೋಣ. ಶಾಸಕರು, ಎಂ.ಪಿ. ಅಧಿಕಾರ ಇರಬಹುದು-ಇಲ್ಲದಿರಬಹುದು ಆದರೆ, ದೇಶ ಉಳಿಯೋದು ಮುಖ್ಯ ಎಂದು ತಿಳಿಸಿದರು.

ಇದನ್ನೂಓದಿ: ಹಿರಿಯ ನಾಗರಿಕರ ಪಿಂಚಣಿ ಹೆಚ್ಚಳಕ್ಕೆ ಕ್ರಮ: ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.