ETV Bharat / state

ಕೊಪ್ಪ: ತೋಟದಲ್ಲಿ ಜನರನ್ನು ಬೆಚ್ಚಿಬೀಳಿಸಿದ್ದ ಬೃಹತ್​​​​​​ ಕಾಳಿಂಗ!

ತೋಟದಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿ ಮಾಡಿದ್ದ 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿಯುವಲ್ಲಿ ಸ್ನೇಕ್ ಹರೀಂದ್ರ ಯಶಸ್ವಿಯಾಗಿದ್ದು, ಅರಣ್ಯಾಧಿಕಾರಿಗಳ ಸಮ್ಮುಖದಲ್ಲೇ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.

author img

By

Published : Sep 16, 2019, 5:13 PM IST

ಕಾಳಿಂಗ ಸರ್ಪ ಸೆರೆ

ಚಿಕ್ಕಮಗಳೂರು: ಹಲವಾರು ದಿನಗಳಿಂದ ಜನರಲ್ಲಿ ಆತಂಕ ಸೃಷ್ಟಿ ಮಾಡಿದ್ದ ಕಾಳಿಂಗ ಸರ್ಪವನ್ನು ಹಿಡಿಯುವಲ್ಲಿ ಸ್ನೇಕ್ ಹರೀಂದ್ರ ಯಶಸ್ವಿಯಾಗಿದ್ದಾರೆ.

ಜಿಲ್ಲೆಯ ಕೊಪ್ಪ ತಾಲೂಕಿನ ಗಡಿಕಲ್ಲು ಗ್ರಾಮದ ಗಣೇಶ್ ಎಂಬುವರ ತೋಟದಲ್ಲಿ ಹಲವಾರು ದಿನಗಳಿಂದ ಕಾಳಿಂಗ ಸರ್ಪ ಕಾಣಿಸಿಕೊಳ್ಳುತ್ತಿತ್ತು. ಇದನ್ನು ಕಂಡ ಮಾಲೀಕರು ಹಾಗೂ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಹಾವನ್ನು ನೋಡಿ ಬೆಚ್ಚಿದ್ದರು. ಇದರಿಂದಾಗಿ ತೋಟದಲ್ಲಿ ಓಡಾಡುವುದಕ್ಕೂ ಜನರು ಭಯಭೀತರಾಗಿದ್ದರು.

ಕಾಳಿಂಗನ ಸೆರೆ ಹಿಡಿದ ಸ್ನೇಕ್ ಹರೀಂದ್ರ

ಇಂದು ಮತ್ತೆ ತೋಟದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡ ಕೂಡಲೇ ಗಣೇಶ್, ಕುದುರೆಗುಂಡಿಯ ಸ್ನೇಕ್ ಹರೀಂದ್ರ ಅವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಹರೀಂದ್ರ ಅರ್ಧ ಗಂಟೆಯಲ್ಲೇ 13 ಅಡಿ ಉದ್ದವಿದ್ದ ಸರ್ಪ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಸ್ನೇಕ್ ಹರೀಂದ್ರ ಅರಣ್ಯಾಧಿಕಾರಿಗಳ ಸಮ್ಮುಖದಲ್ಲೇ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು. ಹಾವು ಸೆರೆಯಿಂದ ತೋಟದ ಮಾಲೀಕರು, ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Intro:Kn_Ckm_01_Kalinga sarpa_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗಡಿಕಲ್ಲು ಗ್ರಾಮದ ಗಣೇಶ್ ಎಂಬುವರ ತೋಟದಲ್ಲಿ ಹಲವಾರು ದಿನಗಳಿಂದಾ ಬೃಹತ್ ಗಾತ್ರದ ಕಾಳಿಂಗ ಸರ್ಪ ಓಡಾಡುತ್ತಿತ್ತು. ಇದನ್ನು ನೋಡಿ ತೋಟದ ಮಾಲೀಕರು ಹಾಗೂ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ನೋಡಿ ಬೆಚ್ಚಿ ಬಿದ್ದಿದ್ದರು. ಈ ಕಾಳಿಂಗ ಸರ್ಪದಿಂದಾ ತೋಟದಲ್ಲಿ ಓಡಾಡುವುದಕ್ಕೂ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಇಂದೂ ಮತ್ತೆ ತೋಟದಲ್ಲಿ ಈ ಕಾಳಿಂಗ ಸರ್ಪ ಕಾಣಿಸಿಕೊಂಡ ಕೂಡಲೇ ಕುದುರೆಗುಂಡಿಯ ಸ್ನೇಕ್ ಹರೀಂದ್ರ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ.ಕೂಡಲೇ ಸ್ಥಳಕ್ಕೇ ಆಗಮಿಸಿದ ಸ್ನೇಕ್ ಹರೀಂದ್ರ ಅವರು ಸತತ ಅರ್ಧ ಗಂಟೆಗೂ ಅಧಿಕ ಕಾಲ ಕಾರ್ಯಚರಣೆ ನಡೆಸಿ ಈ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಕಾರ್ಯಚರಣೆಯ ಮಧ್ಯೆ ಈ ಕಾಳಿಂಗ ಹಲವಾರು ಬಾರೀ ಸ್ನೇಕ್ ಹರೀಂದ್ರ ಅವರ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಿದ್ದು ಕೊನೆಗೂ ಈ ಕಾಳಿಂಗ ಹಿಡಿಯುವಲ್ಲಿ ಸ್ನೇಕ್ ಹರೀಂದ್ರ ಯಶಸ್ವಿಯಾಗಿದ್ದಾರೆ.ಈ ಕಾಳಿಂಗ ಬರೋ ಬರೀ 13 ಅಡಿಗೂ ಅಧಿಕ ಉದ್ದವಾಗಿದ್ದು ಸ್ನೇಕ್ ಹರೀಂದ್ರ ಅವರು ಇಲ್ಲಿಯವರೆಗೂ 288 ಕ್ಕೂ ಅಧಿಕ ಕಾಳಿಂಗ ಸರ್ಪ ಹಿಡಿದಿದ್ದಾರೆ. ಕಾಳಿಂಗ ಸರ್ಪ ಹಿಡಿದ ಕೂಡಲೇ ತೋಟದ ಮಾಲೀಕರು ಹಾಗೂ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳೀಯ ಅರಣ್ಯಕ್ಕೆ ಈ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಬಿಟ್ಟಿದ್ದಾರೆ....

Conclusion:ರಾಜಕುಮಾರ್....
ಈ ಟಿವಿ ಭಾರತ್...
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.