ETV Bharat / state

ಚಿಕ್ಕಮಗಳೂರು : ನೆರೆಪೀಡಿತ ಪ್ರದೇಶಗಳಲ್ಲಿಯೂ ಜೀಪ್​​ ರ್ಯಾಲಿ.. - jeep rally

ಕೆಸರುಮಯ ರಸ್ತೆಯಲ್ಲಿ ನಡೆದ ಜೀಪ್​ ರ‍್ಯಾಲಿಯ ಸಾಹಸಮಯ ದೃಶ್ಯವನ್ನ ಸ್ಥಳೀಯರು ಕಣ್ತುಂಬಿಕೊಂಡರು. ರ‍್ಯಾಲಿಯಲ್ಲಿ ಭಾಗವಹಿಸಿದ ಕೆಲ ಜೀಪ್​ಗಳು ಕೆಸರಿನಲ್ಲಿ ಸಿಲುಕಿಕೊಂಡಿದ್ದು, ಟ್ಯಾಕ್ಟರ್‌ನ ಮೂಲಕ ಹೊರ ತೆಗೆಯಲಾಯಿತು..

Jeep Rally in chikkamagalore
ನೆರೆಪೀಡಿತ ಪ್ರದೇಶಗಳಲ್ಲಿ ಜೀಪ್​​ ರ್ಯಾಲಿ.
author img

By

Published : Sep 13, 2020, 4:36 PM IST

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ನೆರೆಪೀಡಿತ ಪ್ರದೇಶಗಳಾದ ದುರ್ಗದಹಳ್ಳಿ, ಮೈದಾಡಿ, ಮಧುಗುಂಡಿ, ಹಲಗಡಕ, ಗೌಡನಕೂಡಿಗೆ, ಬಲಿಗೆ, ತೋಟದಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಜೀಪ್ ರ‍್ಯಾಲಿ ನಡೆಯಿತು.

ನೆರೆಪೀಡಿತ ಪ್ರದೇಶಗಳಲ್ಲಿಯೂ ಜೀಪ್​​ ರ್ಯಾಲಿ

ಕೆಸರುಮಯ ರಸ್ತೆಯಲ್ಲಿ ನಡೆದ ಜೀಪ್​ ರ‍್ಯಾಲಿಯ ಸಾಹಸಮಯ ದೃಶ್ಯವನ್ನ ಸ್ಥಳೀಯರು ಕಣ್ತುಂಬಿಕೊಂಡರು. ರ‍್ಯಾಲಿಯಲ್ಲಿ ಭಾಗವಹಿಸಿದ ಕೆಲ ಜೀಪ್​ಗಳು ಕೆಸರಿನಲ್ಲಿ ಸಿಲುಕಿಕೊಂಡಿದ್ದು, ಟ್ಯಾಕ್ಟರ್‌ನ ಮೂಲಕ ಹೊರ ತೆಗೆಯಲಾಯಿತು.

ಮಂಗಳೂರು, ಬೆಂಗಳೂರು, ಹಾಸನ, ಚಿಕ್ಕಮಗಳೂರು, ಸಕಲೇಶಪುರ, ಮಡಿಕೇರಿ ಮೊದಲಾದ ಕಡೆಗಳಿಂದ ಸುಮಾರು 40ಕ್ಕೂ ಹೆಚ್ಚು ವಾಹನಗಳು ಭಾಗವಹಿಸಿದ್ದವು. ಕಡಿದಾದ ದುರ್ಗಮ ಹಾದಿಗಳನ್ನು ಲೆಕ್ಕಿಸದೆ ಮುನ್ನುಗ್ಗುತ್ತಿದ್ದ ವಾಹನ ಸವಾರರ ಗುಂಡಿಗೆ ನೋಡಿ ಸಾರ್ವಜನಿಕರು ಆಶ್ಚರ್ಯಗೊಂಡರು. ಕಳೆದ ವರ್ಷವಷ್ಟೇ ನೆರೆಯಿಂದ ಹಲವೆಡೆ ಗುಡ್ಡ ಕುಸಿದು ಹಾನಿಯಾಗಿದ್ದ ಪ್ರದೇಶದಲ್ಲಿ ಜೀಪ್ ರ‍್ಯಾಲಿ ನಡೆಸಿದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.