ಚಿಕ್ಕಮಗಳೂರು : ಕೆಸರುಗದ್ದೆಯಲ್ಲಿ ಓಡುವ ಸಂದರ್ಭ ಸಚಿವ ಸಿ.ಟಿ.ರವಿ ಬಿದ್ದು ಗಾಯಗೊಂಡಿದ್ದಾರೆ.
ನಗರದಲ್ಲಿ ನಡೆಯುತ್ತಿರುವ ಜಿಲ್ಲಾ ಉತ್ಸವ ಕಾರ್ಯಕ್ರಮ ಇಂದು ಉದ್ಘಾಟನೆಗೊಂಡಿದೆ. ಸಿ.ಟಿ.ರವಿ ಅವರು ಕೆಸರುಗದ್ದೆಯಲ್ಲಿ ಓಡುವಾಗ ಆಯತಪ್ಪಿ ಬಿದ್ದ ಪರಿಣಾಮ ಬಲಗಾಲಿನ ಉಗುರು ಕಿತ್ತು ರಕ್ತ ಸುರಿದಿದೆ. ಇದನ್ನು ಲೆಕ್ಕಿಸದೆ ಗುರಿ ಮುಟ್ಟುವವರೆಗೂ ಅವರು ಓಡಿದ್ದಾರೆ.
ನಂತರ ಹಗ್ಗಜಗ್ಗಾಟದಲ್ಲಿ ಭಾಗವಹಿಸಿದ ಅವರು, ತಮ್ಮ ತಂಡ ಗೆಲುವಿನ ಗುರಿ ಮುಟ್ಟುವುದಕ್ಕೆ ಸಹಾಯ ಮಾಡಿದರು. ಸ್ಥಳದಲ್ಲೇ ಇದ್ದ ವೈದ್ಯರು ಸಚಿವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು.