ಚಿಕ್ಕಮಗಳೂರು: ಸಚಿವ ಶ್ರೀ ರಾಮುಲು ನೇತೃತ್ವದಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು ಒಂದು ಉತ್ತಮ ಸಲಹೆ ನೀಡಿದ್ದಾರೆ.
ಗ್ರೀನ್ ಝೋನ್ ಹಣೆ ಪಟ್ಟಿ ಉಳಿಸಿಕೊಳ್ಳಲು ಕಠಿಣ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದ್ದು, ಬೇರೆ ರಾಜ್ಯಗಳಿಂದ ಬಂದವರ ಮಾಹಿತಿ ಕೊಟ್ಟವರಿಗೆ ಆಕರ್ಷಕ ಬಹುಮಾನ ನೀಡಬೇಕು. ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದವರ ಮಾಹಿತಿ ನೀಡಿದವರಿಗೆ 3000-4000 ರೂ. ಬಹುಮಾನ ನೀಡಿದರೆ ತಮ್ಮ ಊರುಗಳಿಗೆ ಬೇರೆ ಊರಿಂದ ಬಂದವರ ಮಾಹಿತಿ ಪಡೆಯಲು ಸಹಾಯವಾಗಲಿದೆ ಎಂದು ಪ್ರಕಾಶ ಸಲಹೆ ನೀಡಿದರು. ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.