ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಹಳ ದಿನಗಳ ನಂತರ ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಚಿಕ್ಕಮಗಳೂರಿನಲ್ಲಿ 19 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಎರಡು ಪ್ರಕರಣ ತಪ್ಪಾಗಿ ವರದಿ ಬಂದಿವೆ.
![Infection in Chikkamagaluru district after long time](https://etvbharatimages.akamaized.net/etvbharat/prod-images/kn-ckm-05-corona-av-7202347_11062020175547_1106f_02402_128.jpg)
16 ಜನ ಸೋಂಕಿತರು ಜಿಲ್ಲಾ ಕೋವೀಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆದರೆ ಇಂದು ಕಡೂರು ತಾಲೂಕಿನಲ್ಲಿ 15 ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿದ್ದು, ಸ್ಥಳೀಯರ ತಲೆಬಿಸಿ ಮಾಡಿದೆ.
![Infection in Chikkamagaluru district after long time](https://etvbharatimages.akamaized.net/etvbharat/prod-images/kn-ckm-05-corona-av-7202347_11062020175553_1106f_02402_704.jpg)
ಯುವಕ ವಾಸಿಸುತ್ತಿದ್ದ ಗ್ರಾಮದ ರಸ್ತೆಯನ್ನು ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ. ಈತನಿಗೆ ಸೋಂಕು ಹೇಗೆ ತಗುಲಿದೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ತನಿಖೆ ನಡೆಸಿದ್ದು, ಸೋಂಕಿತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.