ETV Bharat / state

ಕೊಟ್ಟಿಗೆಯಲ್ಲಿದ್ದ ಹಸುಗಳು ರಾತ್ರೋರಾತ್ರಿ ಮಾಯ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - Chikmagalur cows theft News

ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುಗಳುನ್ನು ಕಳ್ಳರು ಹೊಡೆದುಕೊಂಡು ಹೋಗುತ್ತಿದ್ದಾರೆ.

ರಾತ್ರೋ ರಾತ್ರಿ ಕೊಟ್ಟಿಗೆಯಲ್ಲಿದ್ದ ಹಸುಗಳು ಮಾಯ

author img

By

Published : Aug 21, 2020, 10:47 AM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಒಂದು ಗ್ಯಾಂಗ್ ನಡುರಾತ್ರಿ ಕಳ್ಳತನಕ್ಕೆ ಇಳಿದಿದೆ. ಹೊತ್ತಲ್ಲದ ಹೊತ್ತಲ್ಲಿ ಓಡಾಡುವ ಖದೀಮರು, ಕ್ಷಣಮಾತ್ರದಲ್ಲಿ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಾರೆ.

ಹೌದು, ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುಗಳುನ್ನು ಕಳ್ಳರು ಹೊಡೆದುಕೊಂಡು ಹೋಗುತ್ತಿದ್ದಾರೆ. ಹಸು ಕದ್ದ ಸ್ಕಾರ್ಪಿಯೋ ವಾಹನವನ್ನು ಕರು ಹಿಂಬಾಲಿಸೋ ಕರುಣಾಜನಕ ದೃಶ್ಯ ಎಲ್ಲರನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ. ಇಂತಹ ಕಳ್ಳತನದ ಘಟನೆ ನಡೆದಿರೋದು ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದ ಕಾಂತರಾಜು ಎಂಬುವರ ಮನೆಯಲ್ಲಿ.

ಕೊಟ್ಟಿಗೆಯಲ್ಲಿದ್ದ ಹಸುಗಳು ಮಾಯ

ಗೋ ಸಾಕಣೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಬಂದಿರೋ ಈ ಕುಟುಂಬಕ್ಕೆ ಕಾಮಧೇನುಗಳೇ ಪ್ರತ್ಯಕ್ಷ ದೇವರು. ಎಮ್ಮೆಗಳನ್ನೇ ಹೆಚ್ಚಾಗಿ ಸಾಕುತ್ತಿದ್ದರಿಂದ ಕಾಂತರಾಜು ಎಮ್ಮೆ ಕಾಂತಣ್ಣ ಅಂತಾನೇ ಫೇಮಸ್ಸು. ತಮ್ಮ ಜೀವಕ್ಕಿಂತಲೂ ಹೆಚ್ಚು ಪ್ರೀತಿಯಿಂದ ಗೋವುಗಳನ್ನ ನೋಡಿಕೊಳ್ಳೋ ಎಮ್ಮೆ ಕಾಂತಣ್ಣಗೆ ಗೋವುಗಳೇ ಸರ್ವಸ್ವ. ಆದರೆ ದನಗಳ್ಳರಿಗೆ ಮಾತ್ರ ಇತ್ತೀಚೆಗೆ ಇವರು ಸಾಕಿರೋ ಹಸುಗಳೇ ಟಾರ್ಗೆಟ್ ಆಗಿವೆ. ಕಳೆದ 10 ತಿಂಗಳುಗಳಲ್ಲಿ ಬರೋಬ್ಬರಿ 7 ಹಸುಗಳನ್ನ ಇದೇ ರೀತಿಯಾಗಿ ಕಟುಕರು ಕದ್ದು ಕಣ್ಮರೆಯಾಗಿದ್ದಾರೆ.

ಸದ್ಯ ತನ್ನ ಅಮ್ಮನನ್ನ ಕಳೆದುಕೊಂಡು ತಬ್ಬಲಿಯಾಗಿರೋ ಕರು ಕಾಂತಣ್ಣನ ಅಕ್ಕರೆಯಲ್ಲೇ ದಿನ ದೂಡುವಂತಾಗಿದೆ. ಖದೀಮರ ಕೈಗೆ ಸಿಲುಕಿ ಕಣ್ಮರೆಯಾಗಿರೋ ಹಸುವಿನ ಅಗಲಿಕೆ ಕಾಡದಂತೆ ಸಾಧ್ಯವಾದಷ್ಟು ಕರುವಿನ ಜೊತೆ ಸಮಯ ಕಳೆಯುತ್ತಿದ್ದಾರೆ ಎಮ್ಮೆ ಕಾಂತಣ್ಣ. ಹಲವಾರು ವರ್ಷಗಳಿಂದ ಗೋ ಸಾಕಾಣೆಯನ್ನೇ ನಂಬಿಕೊಂಡು ಅವುಗಳನ್ನ ಪೋಷಿಸುತ್ತಿರುವ ಎಮ್ಮೆ ಕಾಂತಣ್ಣರ ಬಳಿ ಸದ್ಯ 44 ಎಮ್ಮೆ, 9 ಹಸು, 10ಕ್ಕೂ ಹೆಚ್ಚು ಕರುಗಳಿವೆ. ಕಳೆದ 10 ತಿಂಗಳಲ್ಲಿ 7 ಹಸುಗಳನ್ನ ಐನಾತಿ ಕಳ್ಳರು ಕದ್ದರೂ ಎಮ್ಮೆ ಕಾಂತಣ್ಣ ಮಾತ್ರ ಕಿಂಚಿತ್ತೂ ಕಂಗಾಲಾಗಿಲ್ಲ. ಈಗ ಹಸು ಕದ್ದಿರೋ ಕಳ್ಳರನ್ನ ಹಿಡಿದು ಕೊಟ್ಟರೆ ನಾನೇ 50 ಸಾವಿರ ರೂ. ಬಹುಮಾನ ಕೊಡುತ್ತೇನೆ ಎಂದು ತನ್ನ ಗೋ ಪ್ರೇಮವನ್ನ ಮೆರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.