ETV Bharat / state

ಕೊರೊನಾ ಹಾಟ್​ಸ್ಪಾಟ್​ ಆಗ್ತಿವೆ ಚಿಕ್ಕಮಗಳೂರಿನ ಪ್ರವಾಸಿ ತಾಣಗಳು - ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾ ಹಾಟ್​ಸ್ಪಾಟ್​ ಆಗುತ್ತಿವೆ ಪ್ರವಾಸಿ ತಾಣಗಳು

ಜಿಲ್ಲೆಯ ಪ್ರವಾಸಿ ತಾಣಗಳೂ ಕೋವಿಡ್‌ ಅಪಾಯ ತಂದೊಡ್ಡುವ ಭೀತಿ ಉಂಟುಮಾಡಿವೆ. 2ನೇ ಅಲೆ ಕಡಿಮೆಯೇ ಆಗದ ಕಾಫಿನಾಡಲ್ಲಿ ಅನ್‍ಲಾಕ್ ಬಳಿಕ ಒಂದೇ ತಿಂಗಳಿಗೆ ಮುಳ್ಳಯ್ಯನಗಿರಿಗೆ 87 ಸಾವಿರ ಪ್ರವಾಸಿಗರು ಬಂದಿದ್ದಾರೆ.

ಕೊರೊನಾ ಹಾಟ್​ಸ್ಪಾಟ್​ ಆಗುತ್ತಿವೆ ಪ್ರವಾಸಿ ತಾಣಗಳು

author img

By

Published : Aug 6, 2021, 8:26 AM IST

Updated : Aug 6, 2021, 12:20 PM IST

ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಕಡಿಯಾಗಿದ್ರೂ ಕಾಫಿನಾಡಲ್ಲಿ ರೋಗದ ಉಪಟಳ ನಿಂತಿಲ್ಲ. ಪ್ರತಿನಿತ್ಯ ಅಂದಾಜು 100 ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಈ ಮಧ್ಯೆ 3ನೇ ಅಲೆಯ ಭೀತಿ ಎದುರಾಗಿದೆ.

ಕೇರಳದಲ್ಲಿ 3ನೇ ಅಲೆ ಕಾಲಿಟ್ಟಿದೆ. ಹೀಗಾಗಿ ಗಡಿ ಜಿಲ್ಲೆಯಲ್ಲೂ ಆತಂಕ ಮನೆ ಮಾಡಿದೆ. ಕೇರಳಕ್ಕೂ ಕಾಫಿನಾಡಿನ ಎನ್.ಆರ್.ಪುರಕ್ಕೂ ಅವಿನಾಭಾವ ಸಂಬಂಧವಿದೆ. ಯಾಕಂದ್ರೆ, ಎನ್.ಆರ್.ಪುರ ತಾಲೂಕಿನಲ್ಲಿ ಕೇರಳದವರು ಹೆಚ್ಚಾಗಿ ಶುಂಠಿ ಹಾಗೂ ರಬ್ಬರ್ ಬೆಳೆಯುತ್ತಾರೆ. ಇದರಿಂದಾಗಿ ಇಲ್ಲಿಂದ ಕೇರಳಕ್ಕೆ ಹೋಗುವವರ ಮತ್ತು ಬರುವವರ ಸಂಖ್ಯೆ ಕೂಡಾ ಜಾಸ್ತಿ ಇದೆ. ಹಾಗಾಗಿ, ಎನ್.ಆರ್.ಪುರ ತಾಲೂಕಿನಲ್ಲಿ ಕೊರೊನಾ ಕೇಸ್‍ಗಳು ಕ್ರಮೇಣ ಹೆಚ್ಚಾಗುತ್ತಿವೆ.

ಕೊರೊನಾ ಹಾಟ್​ಸ್ಪಾಟ್​ ಆಗ್ತಿವೆ ಚಿಕ್ಕಮಗಳೂರಿನ ಪ್ರವಾಸಿ ತಾಣಗಳು

ಕೇವಲ ಎನ್.ಆರ್.ಪುರ ಮಾತ್ರವಲ್ಲ, ಪಕ್ಕದ ಕೊಪ್ಪ ತಾಲೂಕಿಗೂ ಅದರ ಬಿಸಿ ತಟ್ಟಿದೆ. ಕೇರಳ ಹೋಗಿ ಬರುವವರು ಉಡುಪಿ-ಮಂಗಳೂರು ಮೂಲಕ ಕೊಪ್ಪ ದಾಟಿಯೇ ಎನ್.ಆರ್.ಪುರಕ್ಕೆ ಬರಬೇಕು. ಹಾಗಾಗಿ, ಈ ಭಾಗ ಡೇಂಜರ್ ಝೋನ್‍ನಲ್ಲಿದ್ದು, ಸೋಂಕಿತರನ್ನ ಮನೆಯಲ್ಲಿಯೇ ಕ್ವಾರಂಟೈನ್​ ಮಾಡಿದರೆ ಓಡಾಡುತ್ತಾರೆಂದು, ಈ ಎರಡು ತಾಲೂಕಲ್ಲಿ ಹೋಂ ಕ್ವಾರಂಟೈನ್ ರದ್ದು ಮಾಡಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್‍ಗೆ ಜಿಲ್ಲಾಡಳಿತ ಆದೇಶಿಸಿದೆ.

2ನೇ ಅಲೆ ಅನ್‍ಲಾಕ್ ಬಳಿಕ ಒಂದೇ ತಿಂಗಳಿಗೆ ಮುಳ್ಳಯ್ಯನಗಿರಿಗೆ 87 ಸಾವಿರ ಪ್ರವಾಸಿಗರು ಬಂದಿದ್ದಾರೆ. 2ನೇ ಅಲೆಯಲ್ಲಿ ಕಡೂರು-ತರೀಕೆರೆಯಲ್ಲಿ ಒಂದೇ ದಿನ 200-250 ಕೇಸ್‍ಗಳೂ ದಾಖಲಾಗಿದ್ದವು. ಸಾಲದ್ದಕ್ಕೆ ಶೃಂಗೇರಿ-ಹೊರನಾಡಿಗೆ ಬರ್ತಿರೋ ಪ್ರವಾಸಿಗರು ಹಾಗೂ ಭಕ್ತರ ಸಂಖ್ಯೆ ಹೆಚ್ಚಿರುವುದರಿಂದ ಜಿಲ್ಲೆ ಸದ್ಯಕ್ಕೆ ಡೇಂಜರ್ ಝೋನ್‍ನಲ್ಲಿದೆ.

ಇದನ್ನೂ ಓದಿ :ರಾಯಚೂರು: ರಿಮ್ಸ್​ನಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳು ಸೇರಿ ಐವರಿಗೆ ಕೋವಿಡ್​

Last Updated : Aug 6, 2021, 12:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.