ETV Bharat / state

ಅಕ್ರಮ ಗಾಂಜಾ ಮಾರಾಟ: 8 ಆರೋಪಿಗಳನ್ನು ಬಂಧಿಸಿದ ಸಿಇಎಸ್ ಪೊಲೀಸ್ - Illegal Marijuana sell in chikkamagalore

ಅಕ್ರಮವಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸಿಇಎಸ್ ಪೊಲೀಸರು ಯಶಸ್ವಿಯಾಗಿದ್ದಾರೆ.

Illegal marijuana selling in chikkamagalore

author img

By

Published : Jun 9, 2020, 3:59 PM IST

ಚಿಕ್ಕಮಗಳೂರು: ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ, ಸಿಇಎಸ್ ಪೊಲೀಸರು ದಾಳಿ ಮಾಡಿ, 8 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ತಮಿಳು ಕಾಲೋನಿಯಲ್ಲಿರುವ ಅಲಿ ಮಸೀದಿಗೆ ಹೋಗುವ ರಸ್ತೆಯಲ್ಲಿ, ಬೈಕ್ ಮೇಲೆ ಎಂಟು ಜನ ಆರೋಪಿಗಳು ಸುಮಾರು 1ಕೆ.ಜಿ 100 ಗ್ರಾಂ, ಒಣಗಿರುವ ಕಡ್ಡಿ, ಸೊಪ್ಪು ಹಾಗೂ ಬೀಜ ಮಿಶ್ರಿತ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರು ಎನ್ನಲಾಗ್ತಿದೆ.

ಮಾಹಿತಿ ಆಧರಿಸಿ ದಾಳಿ ಮಾಡಿದ ಸಿಇಎಸ್ ಪೊಲೀಸರು, ಎಂಟು ಜನ ಆರೋಪಿಗಳಾದ ಆಸಿಫ್, ಮಹಮ್ಮದ್ ಜಿಶಾನ್, ಸೈಯದ್ ಮುಬಾರಕ್, ಜೀವನ್, ಅಕ್ಷಯ್, ಅತಾವುಲ್ಲಾ ನವಾಬ್, ಷರೀಫ್, ಜೀವನ್, ಎಂಬುವರನ್ನು ಬಂಧಿಸಿ ಬೈಕ್ ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಚಿಕ್ಕಮಗಳೂರಿನ ಸಿಇಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.