ಚಿಕ್ಕಮಗಳೂರು: ಕೊರೊನಾ ವೈರಸ್ ತಡೆಗಟ್ಟಲು ಪ್ರಧಾನಿ ಮೋದಿ ಜನತಾ ಕರ್ಫ್ಯೂಗೆ ಕರೆ ಕೊಟ್ಟಿರುವ ಹಿನ್ನಲೆಯಲ್ಲಿ ಕರ್ನಾಟಕದ ಸುಪ್ರಸಿದ್ಧ ಹೊರನಾಡು ದೇವಾಲಯ ಇಂದು ಬಂದ್ ಆಗಲಿದೆ ಎಂದು ಕ್ಷೇತ್ರದ ಧರ್ಮಕರ್ತ ಭೀಮೇಶ್ವರ ಜೋಶಿ ತಿಳಿಸಿದ್ದಾರೆ.
![Press release](https://etvbharatimages.akamaized.net/etvbharat/prod-images/kn-ckm-05-horanadu-av-7202347_21032020212351_2103f_1584806031_1052.jpg)
ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ದೇವಸ್ಥಾನದ ಆಡಳಿತ ಮಂಡಳಿಯೂ ಸಾಥ್ ನೀಡಿದ್ದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನ್ನಪೂರ್ಣೇಶ್ವರಿ ದರ್ಶನವನ್ನು ಮುಂದೂಡಲು ಮನವಿ ಮಾಡಲಾಗಿದೆ ಎಂದರು.
ಆದರೆ ಕ್ಷೇತ್ರದಲ್ಲಿ ನಿರಂತರ ಪೂಜೆ, ಹೋಮ-ಹವನ ನಡೆಯಲಿದ್ದು, ವೈರಸ್ ಕ್ಷೀಣಿಸಲು ದೇವರಲ್ಲಿ ವಿಶೇಷ ಪೂಜೆ, ಹಾಗೂ ಪ್ರಾರ್ಥನೆ ಮಾಡಲಾಗುವುದು ಎಂದಿದ್ದಾರೆ.