ಚಿಕ್ಕಮಗಳೂರು: ಜಿಲ್ಲೆಗೆ ಆಗಮಿಸಿದ ನೂತನ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅವರು ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ಶ್ರೀ ಅವಧೂತ ವಿನಯ್ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿದ್ದು, ಆಶೀರ್ವಾದ ಪಡೆದರು.
ಈ ವೇಳೆ ವಿನಯ್ ಗುರೂಜಿ ಅವರು ಸಹ ನೂತನ ಸಚಿವರನ್ನು ವಿನಯ ಪೂರ್ವಕವಾಗಿ ಬರಮಾಡಿಕೊಂಡರು.
ಸಚಿವ ಭೇಟಿ ನೀಡಿದಾಗ ಆಶ್ರಮದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ದೇವರ ತಲೆಯ ಮೇಲಿಂದ ಹೂವು ಪ್ರಸಾದದ ರೂಪದಲ್ಲಿ ಕೆಳಗೆ ಬಿದ್ದಿದ್ದು, ಆ ಹೂವನ್ನು ಆರಗ ಜ್ಞಾನೇಂದ್ರ ಅವರ ಕೊರಳಿಗೆ ವಿನಯ್ ಗುರೂಜಿಯವರು ಹಾಕಿದರು.