ಚಿಕ್ಕಮಗಳೂರು: ಬೆಳಗಾವಿಯಲ್ಲಿ ಎಂ.ಇ.ಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಅವಹೇಳನಕಾರಿ ಪೋಸ್ಟ್ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಅವರಿಗೆ (ಎಂ.ಇ.ಎಸ್) ಅದೇ ಜೀವಾಳ. ಪದೇ-ಪದೇ ಅಂತಹ ಕೆಲಸ ಮಾಡುತ್ತಿದ್ದಾರೆ. ಹಾಗೇ ಮಾಡಿಯೇ ಆ ಸಂಘಟನೆ ಮೂಲೆ ಗುಂಪಾಗಿದ್ದು, ಮಹಾರಾಷ್ಟ್ರದಲ್ಲಿಯೂ ಇಲ್ಲ ಎಂದರು.
ಭಾಷೆ ಬಗ್ಗೆ ಭಾವೋದ್ವೇಗ ಉಂಟು ಮಾಡಿ ಚುನಾವಣೆ ಗೆಲ್ಲಬಹುದು, ರಾಜಕಾರಣ ಮಾಡಬಹುದು ಎಂದು ಭಾವಿಸಿದ್ದಾರೆ. ಎಂ.ಇ.ಎಸ್ಗೆ ಜನತೆ ಇತಿಶ್ರೀ ಹಾಡಿದ್ದಾರೆ. ಬೆಳಗಾವಿ ಕಾರ್ಪೊರೇಷನ್ ಬಿಜೆಪಿ ಹಿಡಿತಕ್ಕೆ ಬಂದಿದೆ. ಜನರು ಎಂಇಎಸ್ ಮೂಲೆ ಗುಂಪು ಮಾಡಿದ್ದಾರೆ ಎಂದರು.
ಐದಾರು ದಿನದಲ್ಲಿ ಅಪ್ಪು ಸಮಾಧಿ ದರ್ಶನಕ್ಕೆ ಅವಕಾಶ: ಐದಾರು ದಿನದಲ್ಲಿ ಪುನೀತ್ ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು. ಐದಾರು ದಿನದಲ್ಲಿ ಎಲ್ಲಾ ಕೆಲಸ ಮುಗಿಸುತ್ತೇವೆ. ಕುಟುಂಬದವರಿಂದ ಎಲ್ಲಾ ವಿಧಿ-ವಿಧಾನ ಮುಗಿಯಬೇಕು. ಇಲ್ಲವಾದರೆ, ಅಭಿಮಾನಿಗಳು ಮುಗಿಬೀಳುತ್ತಾರೆ. ಮಣ್ಣನ್ನೂ ಎತ್ತಿಕೊಂಡು ಹೋಗ್ತಾರೆ. ಕುಟುಂಬದವರನ್ನು ಕೇಳಿ, ಬೇಲಿ ಹಾಕಿ ಆಮೇಲೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡುವುದಾಗಿ ಸಚಿವರು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: MES ಪುಂಡರಿಗೆ ಬೆಳಗಾವಿ ಪೊಲೀಸರ ಮೂಗುದಾರ.. ಧರಣಿಗಷ್ಟೇ ಸೀಮಿತವಾದ 'ಕರಾಳ ದಿನ'..