ETV Bharat / state

ಮೂಡಿಗೆರೆಯಲ್ಲಿ 6 ದಿನಗಳಿಂದ ಸಂಪರ್ಕ ಕಳೆದುಕೊಂಡಿದ್ದ 10 ಜನರ ರಕ್ಷಣೆ: ಯೋಧರ ಸಾಹಸಕ್ಕೆ ಶ್ಲಾಘನೆ

ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯಲ್ಲಿ ಗುಡ್ಡ ಕುಸಿತದಿಂದಾಗಿ ಕಳೆದ 6 ದಿನಗಳಿಂದ ಸಂಪರ್ಕ ಕಳೆದುಕೊಂಡಿದ್ದ ಸುಮಾರು 10 ಜನರನ್ನು ಯೋಧರು ರಕ್ಷಣೆ ಮಾಡಿದ್ದಾರೆ.

ದುರ್ಗದಹಳ್ಳಿಯಲ್ಲಿ ಗುಡ್ಡ ಕುಸಿತ,
author img

By

Published : Aug 12, 2019, 8:31 PM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯಲ್ಲಿ ಗುಡ್ಡ ಕುಸಿತದಿಂದಾಗಿ ಕಳೆದ 6 ದಿನಗಳಿಂದ ಸಂಪರ್ಕ ಕಳೆದುಕೊಂಡಿದ್ದ ಸುಮಾರು 10 ಜನರನ್ನು ಯೋಧರು ರಕ್ಷಣೆ ಮಾಡಿದ್ದಾರೆ.

ಬೆಳಗ್ಗೆ ಕಾರ್ಯಾಚರಣೆ ನಡೆಸಿದ ಯೋಧರಿಗೆ ಸ್ಥಳೀಯರು ಸಾಥ್ ನೀಡಿದ್ದು, ರಸ್ತೆಯಲ್ಲಿ ಬಿದ್ದಿದ್ದ ಗಿಡ, ಮರ, ಮಣ್ಣು ಎಲ್ಲವನ್ನೂ ತೆರವು ಮಾಡಿ ಕೊನೆಗೂ ಗ್ರಾಮಕ್ಕೆ ತಲುಪಿ ಎಲ್ಲಾ ಜನರನ್ನು ರಕ್ಷಣೆ ಮಾಡಿದ್ದಾರೆ. ಇದರಲ್ಲಿ ಒಬ್ಬರು ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ನರಳುತ್ತಿದ್ದು, ಇನ್ನೋರ್ವ ವ್ಯಕ್ತಿ ಕ್ಯಾನ್ಸರ್ ಪೀಡಿತರಾಗಿದ್ದಾರೆ. ವಯಸ್ಸಾದ ಅಜ್ಜಿಯನ್ನು ಸುಮಾರು 5 ಕಿ.ಮೀ. ದೂರ ಚೇರ್ ಮೇಲೆ ಕೂರಿಸಿಕೊಂಡು ಹೆಗಲ ಮೇಲೆ ಹೊತ್ತು ತಂದಿದ್ದು ನಿಜಕ್ಕೂ ಶ್ಲಾಘನೀಯ.

ದುರ್ಗದಹಳ್ಳಿಯಲ್ಲಿ ಗುಡ್ಡ ಕುಸಿತ: 10 ಜನರ ರಕ್ಷಣೆ

ಯೋಧರಿಗೆ ಸ್ಥಳೀಯ ಯುವಕರು ಸಾಥ್ ನೀಡಿದ್ದು, ಯೋಧರಿಗೆ ನಾವು ಎಂದೆಂದಿಗೂ ಚಿರಋಣಿ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕಳಸ ಭಾಗದಲ್ಲಿ ಪ್ರವಾಸ ಮಾಡುತ್ತಿದ್ದ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹಾಗೂ ಜಿಲ್ಲಾ ಎಸ್ಪಿ ಹರೀಶ್ ಪಾಂಡೆ ಅವರನ್ನು ಸ್ಥಳೀಯ ಜನರು ಅಡ್ಡಗಟ್ಟಿ ತರಾಟೆಗೆ ತೆಗೆದುಕೊಂಡಿದ್ದು, ನಮ್ಮ ಗ್ರಾಮಗಳಿಗೂ ಭೇಟಿ ನೀಡಿ ಎಂದು ಮನವಿ ಮಾಡಿದ್ದಾರೆ.

Intro:Kn_Ckm_05_Deadbody found_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಇಂದೂ ಮತ್ತೋಂದು ದೇಹ ಪತ್ತೆಯಾಗಿದೆ. ನಿರಂತರ ಮಳೆಯ ಕಾರಣ ಹಾಗೂ ಗುಡ್ಡು ಕುಸಿತದಿಂದಾ ಹಲವಾರು ಜನರು ನೀರಿನಲ್ಲಿ ನಾಪತ್ತೆಯಾಗಿದ್ದರು.ಇದರಲ್ಲಿ ಕೆಲವರು ಪತ್ತೆಯಾದರೇ ಇನ್ನು ಕೆಲವರು ಪತ್ತೆಯಾಗಿಲ್ಲ.ಮೂಡಿಗೆರೆಯ ಕಿರುಗುಂದದ ಸಮೀಪ ವಿರುವ ಜಪಾವತಿಯ ಪಕ್ಕದ ಗದ್ದೆಯಲ್ಲಿ ಕೆಸರಿನಲ್ಲಿ ಮೃತ ದೇಹಪತ್ತೆಯಾಗಿದ್ದು ಪತ್ತೆಯಾದ ವ್ಯಕ್ತಿ ಸಕಲೇಶಪುರ ತಾಲೂಕಿನ ಕೊರಡಿ ಗ್ರಾಮದ ಪ್ರಕಾಶ್ ಎಂದೂ ಹೇಳಲಾಗುತ್ತಿದೆ. ಸ್ಥಳೀಯ ಜನರು ಕೆಸರಿನಲ್ಲಿ ಹೂತಿದ್ದ ದೇಹವನ್ನು ಮೇಲೆತ್ತಿದ್ದು ಸಂಬಧಪಟ್ಟ ಅಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತಂದಿದ್ದಾರೆ....

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.