ETV Bharat / state

ಕಾಫಿ ಪಲ್ಪರ್ ತ್ಯಾಜ್ಯದಿಂದ ಕಲುಷಿತಗೊಳ್ಳುತ್ತಿರುವ ಜೀವನಾಡಿ ಹೇಮಾವತಿ.. ಕ್ರಮಕ್ಕೆ ಸ್ಥಳೀಯರ ಒತ್ತಾಯ - Drinking water is a health problem

ಹೇಮಾವತಿ ನದಿಗೆ ಕಾಫಿ ಪಲ್ಪರ್ ತ್ಯಾಜ್ಯ ಬಿಡುಗಡೆ ಮಾಡುತ್ತಿರುವ ಕಾಫಿ ಬೆಳೆಗಾರರು - ಕಲುಷಿತಗೊಳ್ಳುತ್ತಿರುವ ನದಿ - ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಒತ್ತಾಯ.

Hemavati the river of life is getting polluted
ಕಾಫಿ ಪಲ್ಪರ್ ತ್ಯಾಜ್ಯ ಬಿಡುಗಡೆ: ಕಲುಷಿತಗೊಳ್ಳುತ್ತಿರುವ ಜೀವ ನದಿ ಹೇಮಾವತಿ!
author img

By

Published : Jan 29, 2023, 10:47 PM IST

Updated : Jan 30, 2023, 10:12 PM IST

ಕಾಫಿ ಪಲ್ಪರ್ ತ್ಯಾಜ್ಯದಿಂದ ಹೇಮಾವತಿ ಕಲುಷಿತ

ಚಿಕ್ಕಮಗಳೂರು: ಹೇಮಾವತಿ ಅದು ಕೇವಲ ಒಂದು ನದಿಯಲ್ಲ. ಲಕ್ಷಾಂತರ ಜನರ ಜೀವನಾಡಿ. ರೈತರ ಪಾಲಿನ ದೇವತೆ, ಮಲೆನಾಡ ಬೆಟ್ಟಗಳ ಮಧ್ಯೆ ಹುಟ್ಟುವ ಹೇಮಾವತಿ ಹಾಸನ ಜಿಲ್ಲೆಯ ಜೀವದಾತೆ. ಮಳೆಗಾಲದಲ್ಲಿ ಭೋರ್ಗರೆಯುವ ಈಕೆ ಬೇಸಿಗೆಯಲ್ಲೂ ನಿರಂತರವಾಗಿ ಹರಿಯುತ್ತಾಳೆ. ಕಾಫಿನಾಡ ಬೆಟ್ಟದಲ್ಲಿ ಹುಟ್ಟುವ ಈ ಮನೆಮಗಳು ಹಾಸನ, ಮೈಸೂರು, ಮಂಡ್ಯ, ಬೆಂಗಳೂರುವರೆಗೂ ಹರಿಯುತ್ತಾಳೆ. ಆದರೆ, ಹೇಮಾವತಿ ಉಗಮ ಸ್ಥಾನದಲ್ಲೇ ನದಿ ನೀರು ಸಂಪೂರ್ಣ ಕಲುಷಿತಗೊಳ್ಳುತ್ತಿದ್ದು, ಜಲಚರಗಳ ಜೀವಕ್ಕೆ ಕುತ್ತು ಬಂದಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪ ಹುಟ್ಟುವ ಈ ನೆಲದ ಜೀವನಾಡಿ ಹೇಮಾವತಿ ನದಿ ಮಳೆಗಾಲದಲ್ಲಿ ಅಬ್ಬರಿಸಿ ಎದುರಿಗೆ ಸಿಕ್ಕ ವಸ್ತುಗಳು, ಹೊಲ, ಗದ್ದೆ, ತೋಟಗಳಲ್ಲಿ ಹರಿಯುತ್ತಾಳೆ. ಆದರೆ ಕೆಲವರ ಸ್ವಾರ್ಥಕ್ಕೆ ನದಿ ನೀರು ಕಲುಷಿತಗೊಳ್ಳುತ್ತಿದೆ. ಮೂಡಿಗೆರೆ-ಸಖಲೇಶಪುರ ಭಾಗದ ಕಾಫಿ ಬೆಳೆಗಾರರು ಕಾಫಿಯನ್ನು ಪಲ್ಪರಿಂಗ್ ಮಾಡಿ ಪಲ್ಪರಿಂಗ್‍ನ ತ್ಯಾಜ್ಯದ ನೀರನ್ನು ಹೇಮಾವತಿ ಒಡಲಿಗೆ ಬಿಡುತ್ತಿದ್ದಾರೆ.

ನದಿಯ ಬಳಿ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ: ಮಳೆಗಾಲದಲ್ಲಿ ಮಣ್ಣು ಮಿಶ್ರಿತ ಕೆಂಪು ನೀರು ಹರಿದರೆ, ಬೇಸಿಗೆಯಲ್ಲಿ ಶುಭ್ರವಾಗಿ ಹರಿಯುತ್ತಾಳೆ. ಆದರೆ, ಕಾಫಿ ತೋಟದ ಮಾಲೀಕರು ಕಾಫಿ ಪಲ್ಪರಿಂಗ್ ನೀರನ್ನ ನೇರವಾಗಿ ಹೇಮಾವತಿ ಒಡಲು ಸೇರಿಸುತ್ತಿರುವುದರಿಂದ ಸ್ವಚ್ಛವಾಗಿ ಹರಿಯುವ ನದಿಯು ಕೆಲವು ಕಡೆಗಳಲ್ಲಿ ಕಪ್ಪು ಬಣ್ಣಕ್ಕೆ ತಿರುಗಿದೆ. ಇದರಿಂದ ನದಿ ನೀರು ದುರ್ವಾಸನೆ ಬೀರುತ್ತಿದ್ದು, ನದಿಯ ಬಳಿ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಬಂದಿದೆ ಎನ್ನುವುದು ಸ್ಥಳೀಯರ ಆರೋಪ. ಕಾಫಿ ಪಲ್ಪರ್ ಮಾಡಿದ ನೀರನ್ನು ಇಂಗು ಗುಂಡಿ ಮೂಲಕ ಇಂಗಿಸಬೇಕು ಮತ್ತು ಅಧಿಕಾರಿಗಳು ಇತ್ತ ಸೂಕ್ತ ಗಮನ ಹರಿಸಬೇಕೆಂದು ಜನರು ಆಗ್ರಹಿಸಿದ್ದಾರೆ.

ಇಡೀ ಹಾಸನ ಜಿಲ್ಲೆಗೆ ಹೇಮಾವತಿ ನದಿ ಆಸರೆ: ಹೇಮಾವತಿ ನದಿ ಗೊರೂರು ಮೂಲಕ ಕೆ.ಆರ್.ಎಸ್. ಡ್ಯಾಂ ಸೇರಿ ಮೈಸೂರು-ಮಂಡ್ಯ-ಬೆಂಗಳೂರು ದಾಟಿ ತಮಿಳುನಾಡಿಗೂ ಹರಿಯುತ್ತದೆ. ಆದರೆ ನದಿ ನೀರು ಹೀಗೆ ಕಲುಷಿತಗೊಂಡರೇ ಅದನ್ನ ಬಳಸುವ ಜನಸಾಮಾನ್ಯರ ಆರೋಗ್ಯದ ಕಥೆ ಏನು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಇಡೀ ಹಾಸನ ಜಿಲ್ಲೆಗೆ ಹೇಮಾವತಿ ನದಿ ಆಸರೆಯಾಗಿದ್ದು, ನದಿಯ ನೀರನ್ನು ಜನ-ಜಾನುವಾರುಗಳು, ಬೆಳೆಗಳಿಗೆ ಬಳಸಲಾಗುತ್ತದೆ. ಇದರಿಂದ ಜಲಚರಗಳ ಜೀವಕ್ಕೆ ಕುತ್ತಾಗಿದ್ದು, ಈ ನೀರನ್ನು ಸೇವಿಸುವ ಜಾನುವಾರುಗಳು ರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ. ಹೇಮಾವತಿ ನದಿ ನೀರನ್ನು ಅನೇಕ ಕಡೆ ಕುಡಿಯುವ ನೀರಿನ ಯೋಜನೆಗಳಿಗೆ ಬಳಸಿದ್ದು ಈ ನೀರನ್ನು ಸೇವಿಸಿದರೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ.

ಬೇಜವಾಬ್ದಾರಿ ವರ್ತನೆಗೆ ಅಧಿಕಾರಿಗಳು ಬಿಸಿ ಮುಟ್ಟಿಸಬೇಕಿದೆ: ಕೆಮಿಕಲ್ಸ್ ಮಿಶ್ರಿತ ನೀರಿನಿಂದ ಹಾನಿ ಸಂಭವಿಸುವುದಕ್ಕೂ ಮೊದಲು ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಈ ನದಿಯೇ ಸಂಪೂರ್ಣ ಕಲುಷಿತಗೊಂಡರು ಆಶ್ಚರ್ಯವಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಲೆನಾಡ ಬಹುತೇಕ ಕಾಫಿಬೆಳೆಗಾರರು ಕೂಡ ಹೇಮಾವತಿ ನದಿಯನ್ನೇ ನೆಚ್ಚಿಕೊಂಡಿದ್ದಾರೆ.

ಬೆಳೆಗಾರರು ಕಾಫಿಯ ಪಲ್ಪರಿಂಗ್‍ಗೆ ಬಳಸುವ ನೀರು ಕೂಡ ಇದೇ ಹೇಮಾವತಿಯದ್ದು. ಆದರೆ, ಪಲ್ಪರಿಂಗ್ ಬಳಿಕ ಆ ನೀರನ್ನು ಮತ್ತದೇ ಹೇಮಾವತಿ ನದಿಗೆ ಬಿಡುತ್ತಿರುವ ಕೆಲ ಬೆಳೆಗಾರರ ಈ ಬೇಜವಾಬ್ದಾರಿ ವರ್ತನೆಗೆ ಅಧಿಕಾರಿಗಳು ಬಿಸಿ ಮುಟ್ಟಿಸಬೇಕಿದೆ. ಇಲ್ಲವಾದರೆ, ನಾಡಿನ ಜೀವಜಲ ಜನ-ಜಾನುವಾರುಗಳ ಪಾಲಿಗೆ ವಿಷಜಲವಾಗಿ ಮಾರ್ಪಟ್ಟಿದೆ.

ನೀರನ್ನು ಕುಡಿದರೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ: ಈ ಕುರಿತು ಸ್ಥಳೀಯ ನಯನ ಎಂಬವರು ಮಾತನಾಡಿ, ಹೇಮಾವತಿ ನದಿಗೆ ಕಾಫಿ ಪಲ್ಪರ್​ ನೀರನ್ನು ಬಹಳ ಜನ ಕಾಫಿ ಬೆಳೆಗಾರರು ಬಿಡುತ್ತಿದ್ದಾರೆ. ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ, ಕಾಫಿ ಬೆಲೆ ಕಡಿಮೆ ಇತ್ತು, ಪಲ್ಪರ್​ಗೆ ಹೆಚ್ಚು ಬೆಲೆ ಇರಲಿಲ್ಲ. ಈ ಬಾರಿ ಪಲ್ಪರ್​ ಹಾಕಿರುವ ಬೆಳೆಗೆ ಬೆಲೆ ಹೆಚ್ಚಿದೆ, ಇದಕ್ಕಾಗಿ ಬಹುತೇಕ ಬೆಳೆಗಾರರು ರೋಬಸ್ಟಾ ಮತ್ತು ಅರೇಬಿಕಾ ಎರಡಕ್ಕೂ ಕಾಫಿ ಪಲ್ಪರಿಂಗ್​ ಮಾಡುತ್ತಿದ್ದಾರೆ. ಅ ನೀರನ್ನು ಬೆಳೆಗಾರರು ಜನಗಳ ಮತ್ತು ಅಧಿಕಾರಿಗಳ ಕಣ್ತಪ್ಪಿಸಿ ನದಿಗೆ ಬಿಡುತ್ತಿದ್ದಾರೆ. ಇದರಿಂದ ಜಲಚರಗಳು ಸಾಯುತ್ತಿವೆ, ಇದನ್ನು ಜನರು ಕುಡಿಯುವುದಕ್ಕೂ ಬಳಸುತ್ತಾರೆ. ಈ ನೀರನ್ನು ಕುಡಿದರೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಚಿಕ್ಕಮಗಳೂರು: ವಿಧಾನಸಭಾ ಚುನಾವಣೆ ಬಹಿಷ್ಕಾರದ ಕೂಗು..ಬ್ಯಾನರ್​ ಅಳವಡಿಕೆ

Last Updated : Jan 30, 2023, 10:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.