ಚಿಕ್ಕಮಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಹಿನ್ನೆಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಮತ್ತೆ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಅಪಾಯವಿದ್ದರೂ ಮಿನಿ ಜಲಪಾತಗಳನ್ನು ವಾಹನ ಸವಾರರು ವೀಕ್ಷಣೆ ಮಾಡುತ್ತಿದ್ದಾರೆ. ಚಾರ್ಮಾಡಿ ಘಾಟ್ ದಕ್ಷಿಣ ಕನ್ನಡ ಚಿಕ್ಕಮಗಳೂರು ಸಂಪರ್ಕಿಸುವ ರಸ್ತೆಯಲ್ಲಿ ಜಲಪಾತಗಳ ಸ್ವರ್ಗವೇ ನಿರ್ಮಾಣವಾಗಿದೆ.
ಮಲೆನಾಡಿನಲ್ಲಿ ಬಿಡುವು ನೀಡಿ ಮಳೆ ಸುರಿಯುತ್ತಿದೆ. ಕೊಪ್ಪ ಭಾಗದ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ನಿರಂತರ ಮಳೆಗೆ ಜಯಪುರದಲ್ಲಿ ಅಂಗಡಿಯ ಗೋಡೆ ಕುಸಿತ ಉಂಟಾಗಿದೆ. ಕಟ್ಟಡ ಕುಸಿಯುವ ಭೀತಿಯಲ್ಲಿ ಮಾಲೀಕರಿದ್ದು, ಮಳೆಯಿಂದ ಜನ ಜೀವನದ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಎಸ್ ಕೆ ಬಾರ್ಡರ್ ಸಮೀಪ ಗುಡ್ಡ ಕುಸಿತ ಉಂಟಾಗಿದ್ದು, ಕಾರ್ಕಳ ಕುದುರೆಮುಖ ರಸ್ತೆ ಸಂಪರ್ಕ ಬಂದ್ ಆಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ಎಸ್ ಕೆ ಬಾರ್ಡರ್ನಲ್ಲಿ ಈ ದುರಂತ ನಡೆದಿದ್ದು, ರಸ್ತೆ ಸಂಚಾರದಲ್ಲಿ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಭದ್ರಾ ನದಿ ಹಾಗೂ ಹಳ್ಳಗಳ ಹರಿವು ಹೆಚ್ಚಳ ಆಗಿದ್ದು, ಮಹಲ್ಗೋಡು ಸೇತುವೆ ಮೇಲೆ ನೀರು ಹರಿಯಲು ಪ್ರಾರಂಭ ಮಾಡಿದೆ. ಅಲ್ಲದೆ ಬಾಳೆಹೊನ್ನೂರು-ಕಳಸ ಮಾರ್ಗದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.