ಚಿಕ್ಕಮಗಳೂರು: ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶ ಮತ್ತು ದಟ್ಟ ಕಾನನದ ನಡುವೆ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥ ಗೊಂಡಿದೆ.
ಚಿಕ್ಕಮಗಳೂರು ನಿಂದ ತರೀಕೆರೆ ಹೋಗುವ ಪ್ರದೇಶವಾದ ಮಲ್ಲೇನಹಳ್ಳಿ, ಹೊಸಪೇಟೆ, ತೊಗರಿಹಂಕಲ್, ಅರಳಗುಪ್ಪೆ, ಸಂತವೇರಿ ಘಾಟಿ ಪ್ರದೇಶದಲ್ಲಿಯೂ ಧಾರಾಕಾರ ಮಳೆಯಾಗುತ್ತಿದ್ದು, ನಿರಂತರ ಮಳೆ ಸುರಿಯುತ್ತಿರುವುದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.
ಮಲ್ಲೇನಹಳ್ಳಿ ಭಾಗದಲ್ಲಿ ಇಂದು ಸಂತೆ ನಡೆಯುತ್ತಿದ್ದು, ನಿರಂತರ ಮಳೆಯಿಂದ ಸಂತೆ ಭಾಗದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ. ನಿರಂತರ ಮಳೆಯ ಕಾರಣ ಗ್ರಾಮದಲ್ಲಿರುವ ಚರಂಡಿಗಳು ತುಂಬಿ ಉಕ್ಕಿ ಹರಿದು ರಸ್ತೆಗಳಿಗೆ ನೀರು ಹರಿದು ಬರುತ್ತಿದೆ. ನಿರಂತರ ಮಳೆಯ ಕಾರಣ ಸುತ್ತ ಮುತ್ತಲ ಗ್ರಾಮದಲ್ಲಿ ವಿದ್ಯುತ್ ಸಂಪರ್ಕದಲ್ಲಿಯೂ ವ್ಯತ್ಯಯ ಉಂಟಾಗಿದೆ.