ETV Bharat / state

ನೆರೆ ಪರಿಹಾರ ವಿಳಂಬ: ಆತ್ಮಹತ್ಯೆಗೆ ಶರಣಾಗಿದ್ದ ರೈತರ ಮನೆಗೆ ಹೆಚ್​​ಡಿಕೆ ಭೇಟಿ - HDK visits the farmer's

ಚಿಕ್ಕಮಗಳೂರಿನ ಕಳಸದ ಎಸ್.ಕೆ.ಮೇಗಲ್ ಮತ್ತು ಕಾರ್ಗದ್ದೆ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಮನೆಗಳಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದರು.

hdk-visits-the-farmers-home-to-commit-suicide
author img

By

Published : Oct 6, 2019, 4:40 PM IST

ಚಿಕ್ಕಮಗಳೂರು: ಜಿಲ್ಲೆಯ ಕಳಸದ ಎಸ್.ಕೆ.ಮೇಗಲ್ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ರೈತನ ಮನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ನೆರೆ ಪರಿಹಾರ ವಿಳಂಬದಿಂದ ಮನ ನೊಂದು ಮೂರು ದಿನಗಳ ಹಿಂದೆ ಚಂದ್ರೇಗೌಡ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು, ಚಂದ್ರೇಗೌಡ ಅವರ ಪತ್ನಿ ಹೇಮಾವತಿಗೆ ₹ 2 ಲಕ್ಷದ ಚೆಕ್ ವಿತರಿಸಿದರು. ತಹಶೀಲ್ದಾರ್​ಗೆ ಕರೆ ಮಾಡಿದ್ದೇನೆ. ನಾಳೆಯೊಳಗೆ ರಾಜ್ಯ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಲಿದೆ ಎಂದು ಭರವಸೆ ಕೊಟ್ಟರು.

ರೈತರ ಮನೆಗೆ ಹೆಚ್​​ಡಿಕೆ ಭೇಟಿ

ನಂತರ ಕಳಸದ ಕಾರ್ಗದ್ದೆ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ಮತ್ತೊಬ್ಬ ರೈತನ ಮನೆಗೆ ಭೇಟಿ ನೀಡಿದರು. 20 ದಿನದ ಹಿಂದೆ ಚನ್ನಪ್ಪಗೌಡ ಎಂಬವರು ಆತ್ಮಹತ್ಯೆಗೆ ಶರಣಾಗಿದ್ದರು. ಚನ್ನಪ್ಪಗೌಡ ಅವರ ಪತ್ನಿ ಸೀತಾರತ್ನಾಗೆ ಸಮಾಧಾನ ಹೇಳಿ ₹ 1 ಲಕ್ಷದ ಚೆಕ್ ವಿತರಿಸಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಧೈರ್ಯ ಹೇಳಿದರು.

ಚಂದೇಗೌಡ ಅವರ ಅರ್ಧ ಎಕರೆ ಭತ್ತದ ಗದ್ದೆ ಮತ್ತು ಅರ್ಧ ಎಕರೆ ಕಾಫಿ ತೋಟ ನೆರೆಯಿಂದ ಹಾಳಾಗಿತ್ತು. ತೋಟ ಸರಿಪಡಿಸಲು ಕೈ ಸಾಲ ಮಾಡಿಕೊಂಡಿದ್ದರು. ಆದರೆ, ಈವರೆಗೂ ಸರ್ಕಾರ ಯಾವುದೇ ನೆರೆ ಪರಿಹಾರ ವಿತರಿಸಿರಲಿಲ್ಲ. ಇದರಿಂದ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Intro:Kn_ckm_05_Hdk visit_av_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಶರಣಾದ ರೈತನ ಮನೆಗೆ ಮಾಜಿ ಸಿಎಂ ಹೆಚ್ ಡಿ ಕೆ ಭೇಟಿ ನೀಡಿದ್ದಾರೆ. ಕಳಸದ ಎಸ್.ಕೆ.ಮೇಗಲ್ ಗ್ರಾಮಕ್ಕೆ ಭೇಟಿ ನೀಡಿ ಆತ್ಮಹತ್ಯೆ ಶರಣಾದ ರೈತನ ಮನೆಗೆ ಭೇಟಿ ನೀಡಿ ಸಾಂತ್ವನವನ್ನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಮೂರು ದಿನದ ಹಿಂದೆ ಮನನೊಂದು ಎಸ್.ಕೆ.ಮೇಗಲ್ ಗ್ರಾಮದಲ್ಲಿ ಚಂದ್ರೇಗೌಡ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದರು. ರೈತನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಚಂದ್ರೇಗೌಡ ಪತ್ನಿ ಹೇಮಾವತಿ ಗೆ 2 ಲಕ್ಷ ಚೆಕ್ ವಿತರಿಸಿದರು. ನಂತರ
ತಹಶೀಲ್ದಾರ್ ಗೆ ಕರೆ ಮಾಡಿದ್ದೇನೆ, ನಾಳೆ ಸರ್ಕಾರದ ಪರಿಹಾರ ಹಣ ಬರುತ್ತೆ ಇಂದು ಭರವಸೆ ನೀಡಿದರು.ನಂತರ ಆತ್ಮಹತ್ಯೆಗೆ ಶರಣಾದ ಮತ್ತೊಬ್ಬ ರೈತನ ಮನೆಗೆ ಭೇಟಿ ನೀಡಿದರು. ಕಳಸದ ಕಾರ್ಗದ್ದೆ ಗ್ರಾಮಕ್ಕೆ ಭೇಟಿ ನೀಡಿದರು.ಕಳೆದ 20 ದಿನದ ಹಿಂದೆ ಮನನೊಂದು ಕಾರ್ಗದ್ದೆ ಗ್ರಾಮದಲ್ಲಿ ಚನ್ನಪ್ಪಗೌಡ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದರು. ಆ ರೈತನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಚನ್ನಪ್ಪ ಗೌಡ ಪತ್ನಿ ಸೀತಾರತ್ನಾ ಗೆ 1 ಲಕ್ಷದ ಚೆಕ್ ವಿತರಿಸಿದರು. 1 ಲಕ್ಷ ದ ಸ್ವಂತ ಖಾತೆಯ ಚೆಕ್ ವಿತರಣೆ ಮಾಡಿದ್ದು ನಾವು ನಿಮ್ಮ ಜೋತೆ ಇದ್ದೇವೆ ಎಂದೂ ಸಾಂತ್ವನ ತುಂಬಿದರು....

Conclusion:ರಾಜಕುಮಾರ್....
ಈಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.