ಚಿಕ್ಕಮಗಳೂರು: ದತ್ತಜಯಂತಿ ಕಾರ್ಯಕ್ರಮದ ಹಿನ್ನಲೆ ಭಕ್ತಾಧಿಗಳಿಗೆ ಕೆಲವು ನಿರ್ಬಂಧ ಹೇರಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದನ್ನು ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್. ದೇವರಾಜ್ ಖಂಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಟಿ. ರವಿ ಅವರು ಹಿಂದಿನ ಸರ್ಕಾರ ಇದ್ದಾಗ ಈ ಸರ್ಕಾರಗಳು ಹಿಂದೂ ವಿರೋಧಿ ಎಂದು ಭಾಷಣ ಮಾಡುತ್ತಿದ್ದರು. ಇವತ್ತು ನೀವು ಯಾರ ವಿರೋಧಿ ಎಂದು ಸ್ವಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಸರ್ಕಾರದ ಪ್ರತಿನಿಧಿಗಳು ಹೇಳದೆ ಒಂದು ಹುಲ್ಲು ಕಡ್ಡಿಯೂ ಅಲುಗಾಡೋದಿಲ್ಲ. ಆದ್ರೆ ಇವತ್ತು ಭಕ್ತಾಧಿಗಳು ಹಾಗೂ ಹಿಂದೂಗಳು ಇವರ ಬಗ್ಗೆ ಅರಿಯಬೇಕಿದೆ ಎಂದರು.
ಮದ್ಯದ ಅಂಗಡಿ ಎರಡು ಮೂರು ದಿನ ಬಂದ್ ಮಾಡಿರೋದು ಅರ್ಥ ಹೀನವಾಗಿದೆ. ವರ್ಷದಲ್ಲಿ 20 ರಿಂದ 25 ದಿನ ಮದ್ಯ ಅಂಗಡಿ ಬಂದ್ ಮಾಡಿದರೆ, ಅವರು ತೆರಿಗೆ ಆದ್ರೂ ಕಟ್ಟೋದು ಹೇಗೆ ಎಂದು ದೇವರಾಜ್ ಪ್ರಶ್ನಿಸಿದರು. ಇನ್ನು ದತ್ತ ಪೀಠದಲ್ಲಿ ಹಿಂದೂ ಆರ್ಚಕರ ನೇಮಕದ ಕುರಿತು ಹಲವರ ಬಗ್ಗೆ ಸಿ ಟಿ ರವಿ ಮಾತನಾಡಿದ್ದರು. ಈ ಸಮಸ್ಯೆಗೆ ಪೂರಕವಾಗಿ ಪರಿಹಾರ ಕಂಡುಕೊಳ್ಳಬೇಕು. ಹಿಂದೂ ಹಾಗೂ ಮುಸ್ಲಿಂ ಇಬ್ಬರ ನಡುವೆ ಸೌಹರ್ದತೆಯಿಂದ ಇಲ್ಲಿನ ಸಮಸ್ಯೆ ಬಗೆಹರಿದ ಬಳಿಕ ದತ್ತಪೀಠಕ್ಕೆ ದಲಿತ ಆರ್ಚಕರನ್ನು ನೇಮಕ ಮಾಡಲು ನೀವು ಸಿದ್ಧರಿದ್ದೀರಾ ಎಂದು ಪ್ರಶ್ನಿಸಿದರು.