ಚಿಕ್ಕಮಗಳೂರು: ದತ್ತಪೀಠ ಆಡಳಿತ ಮಂಡಳಿಯ ಏಕೈಕ ಮುಸ್ಲಿಂ ಸದಸ್ಯ ಸಯ್ಯದ್ ಮಹಮ್ಮದ್ ಬಾಷಾ ಅವರಿಗೆ ಗನ್‌ಮ್ಯಾನ್ ಹಾಗು ಅವರ ನಿವಾಸಕ್ಕೆ ಡಿ.ಎ.ಆರ್. ಸಿಬ್ಬಂದಿಯಿರುವ ತುಕಡಿ ನಿಯೋಜಿಸಲಾಗಿದೆ. ದತ್ತಪೀಠದಲ್ಲಿ ಪೂಜೆ ವಿಚಾರವಾಗಿ ಎರಡು ಧರ್ಮಗಳ ಮಧ್ಯೆ ಸಂಘರ್ಷ ಉಂಟಾಗಿದ್ದು, ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಸೈಯದ್ ಮಹ್ಮದ್ ಬಾಷಾ ಸೇರಿದಂತೆ ಇಬ್ಬರು ಅರ್ಚಕರಿಗೂ ಭದ್ರತೆ ನೀಡಲಾಗಿದೆ. ಇತ್ತೀಚೆಗೆ ದತ್ತಪೀಠಕ್ಕೆ ಇಬ್ಬರು ಹಿಂದೂ ಅರ್ಚಕರನ್ನು ಸರ್ಕಾರ ನೇಮಿಸಿತ್ತು.
ಇದನ್ನೂ ಓದಿ: ದತ್ತಪೀಠ: ಸರ್ಕಾರ ನೇಮಿಸಿದ ಸಮಿತಿಗೆ ಅಪಸ್ವರ