ETV Bharat / state

ಗ್ರಾ.ಪಂ ಕಟ್ಟಡದೊಳಗೆ ಸಿಬ್ಬಂದಿ ಎಣ್ಣೆ ಪಾರ್ಟಿ?: ಪಂಚಾಯಿತಿಗೆ ಬೀಗ ಜಡಿದ ಸ್ಥಳೀಯರು - ಪಂಚಾಯಿತಿಯಲ್ಲೇ ಎಣ್ಣೆ ಪಾರ್ಟಿ

ತಡರಾತ್ರಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಮದ್ಯಪಾನ ಮಾಡಿ ಪಂಚಾಯಿತಿ ಆವರಣದಲ್ಲೇ ಮಲಗಿರುವುದು ಕಂಡುಬಂದಿದ್ದರಿಂದ ಯುವಕರು ಸೇರಿ ಪಂಚಾಯಿತಿಗೆ ಬೀಗ ಹಾಕಿದ್ದಾರೆ.

Gram panchayiti employees makes party inside hall
ಗ್ರಾಪಂ ಒಳಗೆ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿದ ಆರೋಪ..
author img

By

Published : Mar 8, 2021, 7:11 PM IST

ಚಿಕ್ಕಮಗಳೂರು: ಮಧ್ಯರಾತ್ರಿ ಗ್ರಾಮ ಪಂಚಾಯಿತಿ ಕಟ್ಟಡದಲ್ಲೇ ಎಣ್ಣೆ ಪಾರ್ಟಿ ಮಾಡಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಅಟೆಂಡರ್ ಅವಿನಾಶ್ ಹಾಗೂ ವಾಟರ್ ಮ್ಯಾನ್ ಎಣ್ಣೆ ಪಾರ್ಟಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗ್ರಾ.ಪಂ ಕಟ್ಟಡದೊಳಗೆ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿದ ಆರೋಪ

ತಡರಾತ್ರಿ ಪಂಚಾಯಿತಿ ಬಳಿ ತೆರಳಿದ್ದ ಸ್ಥಳೀಯರಿಗೆ ಪಂಚಾಯಿತಿ ಬಾಗಿಲಲ್ಲೇ ವಾಟರ್​​ ಮ್ಯಾನ್ ಅರುಣ್ ಪ್ರಜ್ಞೆ ಇಲ್ಲದಂತೆ ಮಲಗಿದ್ದು ಕಂಡುಬಂದಿದೆ. ಇದರಿಂದ ರೋಸಿಹೋದ ಸ್ಥಳೀಯರು ಪಂಚಾಯಿತಿಗೆ ಬೀಗ ಜಡಿದು, ಸಿಬ್ಬಂದಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ಯುವಕ ಯೋಗೇಶ್, ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಚಾರ ತಿಳಿಸಿದ್ದೇವೆ. ಈ ಬಗ್ಗೆ ಪರಿಶೀಲಿಸಿ ಸಿಬ್ಬಂದಿ ತಪ್ಪು ಎಸಗಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಜೋಡೆತ್ತಿನ ಗಾಡಿ ಸ್ಪರ್ಧೆ ವೇಳೆ ವ್ಯಕ್ತಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.