ETV Bharat / state

ಸಮಸ್ಯೆಗಳ ಮಧ್ಯೆಯೂ ಸರ್ಕಾರ ಅಸಂಘಟಿತ ಕಾರ್ಮಿಕರ ಬಗ್ಗೆ ಯೋಚನೆ ಮಾಡಿದೆ: ಸಚಿವ ಅಂಗಾರ

ಕೊರೊನಾ ಬಿಕ್ಕಟ್ಟಿನ ಮಧ್ಯೆ ಸರ್ಕಾರ ಕಾರ್ಮಿಕರ ಹಿತ ಕಾಪಾಡಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಹೇಳಿದರು​. ಇದೇ ವೇಳೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ. ಎನ್. ಜೀವರಾಜ್ ಮಾತನಾಡಿ ಸರ್ಕಾರ ವಿಧಿಸಿರುವ ಲಾಕ್​ಡೌನ್​ಗಿಂತ ನಮಗೆ ನಾವೇ ಲಾಕ್​ಡೌನ್​ ಇರಿಸಿಕೊಳ್ಳುವುದು ಉತ್ತಮ ಎಂದರು.

author img

By

Published : May 19, 2021, 11:01 PM IST

Updated : May 20, 2021, 10:11 AM IST

angara and jevaraj
ಸಚಿವ ಅಂಗಾರ ಹಾಗೂ ಜೀವರಾಜ್​

ಚಿಕ್ಕಮಗಳೂರು: ಸರ್ಕಾರ ಹಲವಾರು ಸಮಸ್ಯೆಗಳ ಮಧ್ಯೆಯೂ ಅಸಂಘಟಿತ ಕಾರ್ಮಿಕರ ಬಗ್ಗೆ ಯೋಚನೆ ಮಾಡಿ ಸಹಾಯ ಧನ ನೀಡುವಂತಹ ಕೆಲಸ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಮಾತನಾಡಿದರು

ಈ ಕುರಿತು ಮಾತನಾಡಿದ ಅವರು, ಆಟೋ, ರಸ್ತೆ ಬದಿ ಬೀದಿ ವ್ಯಾಪಾರಿಗಳು, ನೇಕಾರರು, ಮಡಿವಾಳರು, ಟೈಲರ್, ಹೂ ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡುವ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬ ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಪಾಲನೆ ಮಾಡಿ ಎಂದು ಹೇಳಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ. ಎನ್ ಜೀವರಾಜ್ ಮಾತನಾಡಿ, ಜನಪರವಾದ ಪ್ಯಾಕೇಜ್​ನ್ನು ಮುಖ್ಯಮಂತ್ರಿ ನೀಡಲು ಮಾತ್ರ ಸಾಧ್ಯ. ಎಲ್ಲರ ಬಗ್ಗೆ ಯೋಚನೆ ಮಾಡಿ ಪ್ಯಾಕೇಜನ್ನು ನೀಡಿದ್ದಾರೆ. ಮುಖ್ಯ ಮಂತ್ರಿಗಳು ಅಧಿಕಾರಕ್ಕೆ ಬಂದ ಮೊದಲ ಹಾಗೂ 2ನೇ ವರ್ಷದಲ್ಲಿ ಪ್ರಕೃತಿ ವಿಕೋಪದ ಜೊತೆಗೆ ಕೊರೊನಾದ 2ನೇ ಅಲೆ ಬಂದಿದೆ. ರೈತರಿಗೆ ಹಾಗೂ ಸಮಸ್ಯೆಯಲ್ಲಿ ಇರುವಂತವರಿಗೆ ಹಲವಾರು ಸವಲತ್ತುಗಳನ್ನು ನೀಡಿದ್ದಾರೆ. ಜನರು ಸಹಕರಿಸಬೇಕು ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ. ಎನ್ ಜೀವರಾಜ್ ಮಾತನಾಡಿದರು

ನಾವು ಮನೆಯಲ್ಲಿ ಇರುವುದೇ ವೈರಸ್​ ತಡೆಗಟ್ಟಲು ಇರುವ ಔಷಧಿ. ಸರ್ಕಾರ ವಿಧಿಸಿರುವ ಲಾಕ್​ಡೌನ್​ಗಿಂತ ನಮಗೆ ನಾವೇ ಲಾಕ್​ಡೌನ್​ ಇರಿಸಿಕೊಳ್ಳುವುದು ಉತ್ತಮ ಎಂದು ಮನವಿ ಮಾಡಿದರು.

ಜನಸಾಮಾನ್ಯರಿಗೆ ಸ್ಪಂದನೆ:

ಇದೇ ವೇಳೆ ಮಾತನಾಡಿದ ವಿಧಾನ ಪರಿಷತ್​ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಮುಖ್ಯಮಂತ್ರಿಯವರು ಕೊರೊನಾ ಮೊದಲ ಅಲೆ ಬಂದಾಗಲೂ ಪ್ಯಾಕೇಜ್ ಘೋಷಣೆ ಮಾಡಿ, ಜನಸಾಮಾನ್ಯರಿಗೆ ಸ್ಪಂದಿಸಿದ್ದರು. ಈ ಬಾರಿ ಕೋವಿಡ್​ ಹೆಚ್ಚಾಗಿರುವ ಸಂದರ್ಭದಲ್ಲಿ 1,250 ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ. ಸಮಾಜದ ಕಟ್ಟ ಕಡೆಯ ಜನರನ್ನೂ ಸಿಎಂ ಗುರುತಿಸಿದ್ದಾರೆ. ಇದು ತಾತ್ಕಾಲಿಕ ಪ್ಯಾಕೇಜ್ ಆಗಿದ್ದು, ಕೆಲವೇ ದಿನದಲ್ಲಿ ಸಾಂಕ್ರಾಮಿಕವು ಮುಕ್ತಾಯ ಆಗಬೇಕು ಅಂತಿದ್ದರೆ ಸರ್ಕಾರದ ನಿಯಮಗಳನ್ನು ಪ್ರತಿಯೊಬ್ಬರೂ ತಪ್ಪದೇ ಪಾಲಿಸಬೇಕು ಎಂದರು.

ಓದಿ: ಸೋಂಕು ಇಳಿಮುಖ: ಕೋವಿಡ್​ ಪರೀಕ್ಷೆ ಕಡಿಮೆಗೊಳಿಸಿದ ಬಿಬಿಎಂಪಿ

Last Updated : May 20, 2021, 10:11 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.