ETV Bharat / state

ಮುಳ್ಳಯ್ಯನಗಿರಿಗೆ ರೋಪ್‌ವೇ: ತಜ್ಞರ ತಂಡದಿಂದ ಸ್ಥಳ ಪರಿಶೀಲನೆ

ಕರ್ನಾಟಕದ ಅತ್ಯಂತ ಎತ್ತರದ ಶಿಖರ ಮುಳ್ಳಯ್ಯನಗಿರಿಗೆ ರೋಪ್​ ವೇ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ತಜ್ಞರ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ.

ಮುಳ್ಳಯ್ಯನಗಿರಿ ಶಿಖರ
ಮುಳ್ಳಯ್ಯನಗಿರಿ ಶಿಖರ
author img

By

Published : Jul 18, 2023, 9:48 AM IST

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ರಾಜ್ಯದ ಅತ್ಯಂತ ಎತ್ತರ ಮತ್ತು ಅಪರೂಪದ ಸಸ್ಯ ಸಂಪತ್ತು ಹೊಂದಿರುವ ಪರ್ವತ ಪ್ರದೇಶವಾಗಿದೆ. ಪಶ್ಚಿಮಘಟ್ಟ ಶ್ರೇಣಿಯ ಈ ಶಿಖರಕ್ಕೆ ವರ್ಷಪೂರ್ತಿ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಮಳೆಗಾಲದಲ್ಲಿ ಪ್ರವಾಸಿಗರಿಗಿದು ನೆಚ್ಚಿನ ತಾಣ. ಇಲ್ಲಿನ ಸೌಂದರ್ಯರಾಶಿಗೆ ಮನಸೋಲದವರಿಲ್ಲ. ಅಪರೂಪದ ಶೋಲಾ ಅರಣ್ಯವನ್ನು ಹೊಂದಿರುವ ಪರ್ವತಕ್ಕೆ ಸರ್ಕಾರ ರೋಪ್‌ ವೇ ಮಾಡಲು ನಿರ್ಧರಿಸಿದೆ. ಹೊಸ ಯೋಜನೆಯಿಂದ ಪ್ರಕೃತಿ ಸೌಂದರ್ಯಕ್ಕೆ ಸಂಚಕಾರ ಉಂಟಾಗುವ ಬಗ್ಗೆ ಪರಿಸರಪ್ರೇಮಿಗಳ ಕಳವಳ ವ್ಯಕ್ತಪಡಿಸಿದ್ದಾರೆ. ಈ ನಡುವೆ ಸರ್ಕಾರ ತಜ್ಞರ ತಂಡವನ್ನು ಪರ್ವತಕ್ಕೆ ಕಳುಹಿಸಿದ್ದು ಸ್ಥಳ ಪರಿಶೀಲನೆ ನಡೆಸಿದೆ.

ಗಿರಿಶ್ರೇಣಿಯಲ್ಲಿ ತಜ್ಞರ ತಂಡ ಅಧ್ಯಯನ ನಡೆಸಿದ್ದು, ಐದು ಸ್ಥಳಗಳನ್ನು ಗುರುತಿಸಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ರೋಪ್ ವೇ ನಿರ್ಮಾಣ ಮಾಡುವ ಪ್ರಸ್ತಾಪವನ್ನು ಹಿಂದಿನ ಸರ್ಕಾರದ ರಾಜ್ಯ ಬಜೆಟ್‍ನಲ್ಲಿ ಮಾಡಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಯೋಜನೆ ಇದಾಗಿದ್ದು, ಪರ್ವತ ಮಾಲಾ ಯೋಜನೆಯಿಂದಲೂ ಅನುದಾನ ಪಡೆದು ರೋಪ್ ವೇ ನಿರ್ಮಿಸುವುದು ರಾಜ್ಯ ಸರ್ಕಾರದ ಉದ್ದೇಶ. ತಾಲ್ಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಬಾಬಾಬುಡನ್‍ಗಿರಿ ಮತ್ತು ದೇವೀರಮ್ಮನ ಬೆಟ್ಟಗಳ ಸಾಲುಗಳಿವೆ. ಅತ್ಯಪರೂಪ ಶೋಲಾ ಅರಣ್ಯ ಈ ಗಿರಿಶ್ರೇಣಿಯ ವೈಶಿಷ್ಟ್ಯ.

ಯಗಚಿ, ವೇದಾವತಿ ಸೇರಿ ಹಲವು ನದಿಗಳ ಉಗಮ ಸ್ಥಾನ ಕೂಡ ಇದೇ ಗುಡ್ಡಗಳು. ಝರಿ, ಜಲಪಾತಗಳು, ಹಸಿರ ಕಾನನದ ತಾಣ. ಹುಲಿ, ಚಿರತೆ, ಆನೆ, ಜಿಂಕೆ ಸೇರಿದಂತೆ ವನ್ಯಜೀವಿ ಸಂಕುಲದ ಆವಾಸ ಸ್ಥಾನವೂ ಹೌದು. ಇಂಥ ನೈಸರ್ಗಿಕ ಸುಂದರ ರಮಣೀಯ ತಾಣದಲ್ಲಿ ಪ್ರವಾಸಿಗರ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಒಳಗೊಂಡ ತಜ್ಞರ ತಂಡ, ಮುಳ್ಳಯ್ಯನಗಿರಿ ಪ್ರದೇಶಕ್ಕೆ ಭೇಟಿ ನೀಡಿ ಐದು ಸ್ಥಳಗಳನ್ನು ಗುರುತು ಮಾಡಿದೆ.

ಮುಳ್ಳಯ್ಯನಗಿರಿ, ಕವಿಕಲ್‍ಗಂಡಿ, ದತ್ತಪೀಠ ಟವರ್ ಪಾಯಿಂಟ್, ಮಾಣಿಕ್ಯಧಾರ ಸೇರಿದಂತೆ ಗಿರಿಯಿಂದ ಕೆಳಗೆ ಕಾಣಿಸುವ ತಿರುವು ರಸ್ತೆಯ ಜಂಕ್ಷನ್ ಸೇರಿ ಐದು ಕಡೆ ಸ್ಥಳ ಪರಿಶೀಲನೆ ನಡೆಸಿದೆ. ಕಾಶ್ಮೀರದಲ್ಲಿ ರೋಪ್ ವೇ ನಿರ್ಮಿಸಿರುವ ಪರಿಣಿತರು ಈ ತಂಡದಲ್ಲಿದ್ದರು. ಕಾಡು ಕಡಿಯದೇ ಜೀವ ವೈವಿಧ್ಯಕ್ಕೂ ಧಕ್ಕೆಯಾಗದಂತೆ ನಿರ್ಮಾಣ ಮಾಡುವುದು ಹೇಗೆ ಎಂಬುದನ್ನು ತಂಡ ಅಧ್ಯಯನ ನಡೆಸಿದೆ. ಆದರೆ ಯೋಜನೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರಪಂಚದಲ್ಲಿ ಅತ್ಯಂತ ಅಮೂಲ್ಯವಾದ ಸಸ್ಯಸಂಪತ್ತನ್ನು ಗಿರಿ ಪ್ರದೇಶ ಹೊಂದಿದೆ. ಸ್ವಚ್ಛಂದ ಗಾಳಿ, ಪ್ರಾಣಿ-ಪಕ್ಷಿಗಳ ಓಡಾಟಕ್ಕೆ ರೋಪ್ ವೇ ಅಡ್ಡಿಯಾಗಲಿದೆ. ಈ ಯೋಜನೆಯನ್ನು ಸರ್ಕಾರ ಕೈಬಿಡಬೇಕು ಇಲ್ಲದಿದ್ದರೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಹೆಬ್ಬಾಳ ಜಂಕ್ಷನ್ ಹೆಚ್ಚುವರಿ ಲೇನ್‌ನ ಡೌನ್ ರಾಂಪ್‌ ಅಡಿಪಾಯ ಬಹುತೇಕ ಪೂರ್ಣ: ಮುಂದಿನ ವಾರದಿಂದ ವಾಹನ ಸಂಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.