ಚಿಕ್ಕಮಗಳೂರು : ಆಟವಾಡುತ್ತಿದ್ದ ವೇಳೆ ಆಯತಪ್ಪಿ ನೀರಿನ ಟ್ಯಾಂಕ್‌ಗೆ ಬಿದ್ದು ಏಳು ವರ್ಷದ ಬಾಲಕಿ ಮೃತಪಟ್ಟ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಇಂದ್ರಾವತಿ ಎಸ್ಟೇಟ್ನಲ್ಲಿ ನಡೆದಿದೆ.
ಗೀತಾ ಹಾಗೂ ಶೇಷಪ್ಪ ದಂಪತಿಯ ಪುತ್ರಿ ಪ್ರಾರ್ಥನಾ (7) ಮೃತ ಬಾಲಕಿ. ಮನೆ ಎದುರಿಗೆ ಆಟವಾಡುತ್ತಿದ್ದ ಪ್ರಾರ್ಥನಾ ಅಲ್ಲೇ ಸಮೀಪದಲ್ಲಿದ್ದ ನೀರಿನ ಟ್ಯಾಂಕ್‌ಗೆ ಆಯತಪ್ಪಿ ಬಿದ್ದು ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕುದಿಯುವ ನೀರಿನ ತೊಟ್ಟಿಗೆ ಬಿದ್ದು ಕಂದಮ್ಮ ಸಾವು
ಬಾಲಕಿಯ ಮೃತದೇಹ ಕಂಡು ಪೋಷಕರು ಹಾಗೂ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.