ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ಅಭಯಾರಣ್ಯದ ಭದ್ರಾ ಹಿನ್ನೀರಿನ ಬಳಿ 4 ಹುಲಿಗಳು ಪ್ರತ್ಯಕ್ಷವಾಗಿವೆ. ಭದ್ರಾ ಹಿನ್ನೀರಿನ ಬಳಿ ತಾಯಿ ಹುಲಿಯೊಂದಿಗೆ ಮೂರು ಮರಿಗಳು ನಡೆದುಕೊಂಡು ಹೋಗುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ನಾಲ್ಕು ಹುಲಿಗಳನ್ನು ಒಟ್ಟೊಟ್ಟಿಗೆ ಕಂಡ ಜನತೆ ಭಯಭೀತರಾಗಿದ್ದು, ಬಳಿಕ ದಟ್ಟ ಅರಣ್ಯದೊಳಗೆ ಹುಲಿಗಳು ಮರೆಯಾಗಿವೆ. ತಾಯಿ ಹುಲಿಯನ್ನು ಮೂರು ಮರಿಗಳು ಹಿಂಬಾಲಿಸಿ ಕಾಡಿನೊಳಗೆ ತೆರಳಿರುವ ದೃಶ್ಯ ಸೆರೆಯಾಗಿದೆ.