ಚಿಕ್ಕಮಗಳೂರು: ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಹೆದ್ದಾರಿಯಲ್ಲಿ ದರೋಡೆ ಮಾಡಲು ಯತ್ನಿಸುತ್ತಿದ್ದ ನಾಲ್ವರ ತಂಡವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಬಳಿ ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ 2 ರಿವಾಲ್ವರ್, 30 ಬುಲೆಟ್ಸ್, ಡ್ರ್ಯಾಗನ್, ಬೈಕ್ ವಶಕ್ಕೆ ಪಡೆಯಲಾಗಿದೆ.
ಜಾರ್ಖಂಡ್ ಮೂಲದ ಅಜಯ್ ಸಿಂಗ್, ಮಂಡ್ಯದ ಶಿವಕುಮಾರ್, ಹಾಸನದ ಕುಮಾರಸ್ವಾಮಿ, ಮೂಡಿಗೆರೆಯ ಶಿವಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.
ಉತ್ತರ ಪ್ರದೇಶದಿಂದ ಈ ಗ್ಯಾಂಗ್ ರಿವಾಲ್ವರ್ ಖರೀದಿಸಿದ್ದು, ಜೂಜು ಅಡ್ಡೆಗಳೇ ಇವರ ಟಾರ್ಗೆಟ್ ಆಗಿದ್ದವು. ಜೂಜಾಟದ ಸ್ಥಳಗಳಿಗೆ ಹೋಗಿ, ಗಾಳಿಯಲ್ಲಿ ಗುಂಡು ಹಾರಿಸಿ ಹಣ ದೋಚುತ್ತಿದ್ದರು. ಗ್ಯಾಂಗ್ ವಾರ್ ನಡೆಸುವುದಕ್ಕೂ ಈ ತಂಡ ಸ್ಕೆಚ್ ಹಾಕಿತ್ತು. ಈ ವೇಳೆ ಹಾಸನದ ಯಾಚನಹಳ್ಳಿ ಚೇತನ್ ಮೇಲೆ ಈ ತಂಡ ಫೈರ್ ಮಾಡಿತ್ತು ಎನ್ನಲಾಗ್ತಿದೆ.
ಇದನ್ನೂ ಓದಿ:ರಾಣೆಬೆನ್ನೂರಿನಲ್ಲಿ ಕಳ್ಳತನ: 423 ಗ್ರಾಂ ಬಂಗಾರ, 2.5 ಕೆ.ಜಿ ಬೆಳ್ಳಿ ಹೊತ್ತೊಯ್ದ ಖದೀಮರು!