ETV Bharat / state

ಪುಂಡಾನೆ ಕಾಟಕ್ಕೆ ಬೇಸತ್ತ ಜನ.. ಅರಣ್ಯ ಇಲಾಖೆಯ ಕಾರ್ಯತಂತ್ರವೂ ವಿಫಲ - ಹಾವೇರಿ ಟಸ್ಕರ್ ಸೆರೆಗೆ ಹಿನ್ನೆಡೆ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ, ಹೇರೂರು, ಹಿರೇಗದ್ದೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರೀಕರ ಭೀತಿಗೆ ಪುಂಡಾನೆ ಕಾರಣವಾಗಿದೆ.

ಅರಣ್ಯ ಇಲಾಖೆ  ಸಿಬ್ಬಂದಿ ಹಾಗೂ ಆನೆಗಳು
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಆನೆಗಳು
author img

By

Published : Aug 25, 2022, 8:48 PM IST

ಚಿಕ್ಕಮಗಳೂರು: ಬಯಲು ಸೀಮೆಯ ಜನರಿಗೆ ಕಾಟ ಕೊಟ್ಟು ಸೆರೆಯಾದ ಪುಂಡಾನೆ ಮಲೆನಾಡಿನ ಜನರ ನಿದ್ದೆಗೆಡಿಸಿದೆ. ಈ ಪುಂಡಾನೆಯನ್ನು ಸೆರೆ ಹಿಡಿಯಲು ಬೇರೆ ಆನೆಗಳು ಮಲೆನಾಡಿಗೆ ಬಂದರೂ ಅದು ಸೆರೆಯಾಗುತ್ತಿಲ್ಲ. ಸೂಕ್ಷ್ಮ ಪ್ರಾಣಿಯಾಗಿರುವ ಕಾಡಾನೆಯನ್ನು ಹನಿಟ್ರ್ಯಾಪ್ ಮಾಡಿಸಿ ಸೆರೆ ಹಿಡಿಯುವ ಅರಣ್ಯ ಇಲಾಖೆಯ ಕಾರ್ಯತಂತ್ರಕ್ಕೆ ಮಲೆನಾಡಿನಲ್ಲಿ ಹಿನ್ನಡೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ, ಹೇರೂರು, ಹಿರೇಗದ್ದೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರೀಕರ ಭೀತಿಗೆ ಕಾರಣವಾಗಿರುವ ಹಾವೇರಿ ಟಸ್ಕರ್ ಕಾಡಾನೆ ಹಿಡಿಯುವ ಕಾರ್ಯಾಚರಣೆಯನ್ನು ಕಳೆದ ನಾಲ್ಕು ದಿನಗಳಿಂದ ಪ್ರಾರಂಭಿಸಲಾಗಿತ್ತು. ಸಕ್ರೆಬೈಲ್ ಆನೆ ಶಿಬಿರದಿಂದ ಬಂದಿರುವ ಹೆಣ್ಣಾನೆ ಭಾನುಮತಿ ಮೂಲಕ ಹನಿಟ್ರ್ಯಾಪ್ ಮಾಡಿಸಿ ಸೆರೆ ಹಿಡಿಯಲು ಕೊಪ್ಪ ಡಿಸಿಎಫ್ಒ ನಿಲೇಶ್ ಶಿಂಧೆ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯತಂತ್ರ ರೂಪಿಸಿದ್ದರು.

ಹೆಣ್ಣಿನ ಮೋಹಕ್ಕೂ ಬೀಳದ ಪುಂಡ ಒಂಟಿ ಸಲಗವೊಂದು ಅರಣ್ಯಾಧಿಕಾರಿಗಳು ಹೈರಾಣುಗುವಂತೆ ಹಿಂಸೆ ಕೊಡುತ್ತಿದ್ದು, ಒಂಟಿ ಸಲಗವನ್ನ ಸೆರೆ ಹಿಡಿಯಲು ಅಧಿಕಾರಿಗಳು ಹರ ಸಾಹಸ ಪಡುತ್ತಿದ್ದಾರೆ. ಮಲೆನಾಡಿನ ಭಾಗದಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಪುಂಡಾನೆ ಕಾಟ ಕೊಡುತ್ತಿತ್ತು. ಇಡೀ ರಾತ್ರಿ ದಾಂಧಲೆ ಮಾಡಿ ಹಗಲಲ್ಲಿ ಸುತ್ತಲೂ ಪ್ರಪಾತವಿರುವ ಎತ್ತರದ ಜಾಗದಲ್ಲಿ ನಿಲ್ಲುತ್ತಿತ್ತು. ಇದರಿಂದ ಅಧಿಕಾರಿಗಳು ಹಾಗೂ ಸ್ಥಳಿಯರು ಹೈರಾಣಾಗಿದ್ದರು. ಈ ಪುಂಡಾನೆಯನ್ನ ಹಿಡಿಯಲು ಶಿವಮೊಗ್ಗದಿಂದ ಸಾಕಾನೆಗಳನ್ನ ಕರೆಸಿದ್ದರು. ಮೂರು ದಿನದಿಂದ ಕಾರ್ಯಾಚರಣೆ ನಡೆಸಿದರೂ ಒಂಟಿ ಸಲಗ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸುತ್ತಿದೆ.

ಪುಂಡಾನೆಯನ್ನು ಹಿಡಿಯಲು ಅರಣ್ಯ ಇಲಾಖೆ ಕಾರ್ಯತಂತ್ರ ಹೆಣೆದಿರುವುದು

ಉಪಯೋಗವಿಲ್ಲದ ಕಾರ್ಯಾಚರಣೆ: 11 ಮಾವುತರು, ಐದು ಸಾಕಾನೆಗಳು, ಅಧಿಕಾರಿಗಳು ಸೇರಿ 25 ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಆನೆ ಸೆರೆಯಾಗಿಲ್ಲ. ಒಂದೆಡೆ ಆನೆ ಸೆರೆಯಾಗುತ್ತಿಲ್ಲ. ಮತ್ತೊಂದೆಡೆ ಹಗಲಲ್ಲಿ ದಾಂಧಲೆ ನಡೆಸುತ್ತಿರೋ ಒಂಟಿ ಸಲಗ ಮೇಗುಂದ ಹೋಬಳಿಯ ಗುಡ್ಡದ ಎತ್ತರಕ್ಕೆ ಹೋಗಿ ನಿಲ್ಲುತ್ತಿದೆ. ಸುತ್ತಲೂ ಪ್ರಪಾತವಿದ್ದು, ಬೆದರಿಸಿದರೆ ಬಿದ್ದು ಪ್ರಾಣ ಕಳೆದುಕೊಳ್ಳಬಹುದು ಎಂದು ಅಧಿಕಾರಿಗಳು ಆನೆಯನ್ನ ಬೆದರಿಸಲು ಮುಂದಾಗದೆ ಸೆರೆ ಹಿಡಿಯಲು ಮುಂದಾಗಿದ್ದಾರೆ. ಆದರೆ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಸಾಕು ಹೆಣ್ಣಾನೆ ಭಾನುಮತಿ ಮೂಲಕ ಒಂಟಿ ಸಲಗಕ್ಕೆ ಹನಿಟ್ರ್ಯಾಪ್ ಮೂಲಕ ಸೆರೆ ಹಿಡಿಯಲು ಮುಂದಾದರೂ ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಮೂರು ದಿನದಿಂದ ಉಪಯೋಗವಿಲ್ಲದ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹಾವೇರಿ ಟಸ್ಕರ್ ಸೆರೆಗೆ ಹಿನ್ನೆಡೆ: ಹಾವೇರಿಯಲ್ಲಿ ಸೆರೆ ಹಿಡಿದಿದ್ದ ಈ ಪುಂಡಾನೆಗೆ ಹಾವೇರಿ ಟಸ್ಕರ್ ಕೊರಳಿಗೆ ರೇಡಿಯೋ ಕಾಲರ್ ಇದ್ದು, ಅದು ಇರುವ ನಿಖರ ಜಾಗ ತಿಳಿದಿದ್ದರೂ ಅಧಿಕಾರಿಗಳೂ ಏನೂ ಮಾಡದ ಸ್ಥಿತಿಯಲ್ಲಿದ್ದು, ಪುಂಡಾನೆ ಮುಂದೆ ಅಸಹಾಯಕರಾಗಿದ್ದಾರೆ. ಈ ಹಿಂದೆ ಹಾವೇರಿಯಲ್ಲಿ ದಾಂಧಲೆ ನಡೆಸಿ ರೈತರ ನಿದ್ದೆಗೆಡಿಸಿದ್ದ ಹಾವೇರಿ ಟಸ್ಕರ್ ಕಾಡಾನೆಯನ್ನು ಮೋಹಕ್ಕೆ ಒಳಪಡಿಸಿ ಸೆರೆ ಹಿಡಿಯಲು ನೆರವಾಗಿತ್ತು. ಸೂಕ್ಷ್ಮ ಪ್ರಾಣಿಯಾಗಿರುವ ಕಾಡಾನೆ ಭಾನುಮತಿಯ ಹನಿಟ್ರ್ಯಾಪ್ ತಂತ್ರಕ್ಕೆ ಬೀಳುತ್ತಿಲ್ಲ. ಇದರಿಂದ ಆನೆ ಹಿಡಿಯುವ ಕಾರ್ಯಾಚರಣೆ ತಡವಾಗಿದೆ. ಇದರ ಜೊತೆಗೆ ಮಲೆನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಲೂ ಹಾವೇರಿ ಟಸ್ಕರ್ ಸೆರೆಗೆ ಹಿನ್ನೆಡೆ ಉಂಟಾಗುತ್ತಿದೆ.

ಇದನ್ನೂ ಓದಿ: ಕೋಳಿಗಳ ಕಳೇಬರಕ್ಕೆ ಪಶುವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.