ETV Bharat / state

ಸಚಿವ ಅಂಗಾರ, ಶಾಸಕ ಎಂ.ಪಿ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ ಪ್ರವಾಹ ಸಂತ್ರಸ್ತರು

author img

By

Published : Jul 2, 2021, 10:38 PM IST

2019ರಲ್ಲಿ ಮಹಾಮಳೆಯಿಂದ ಮನೆ, ಆಸ್ತಿಯನ್ನು ಕಳೆದುಕೊಂಡಿದ್ದ ಸಂತ್ರಸ್ತರಿಗೆ ಮೂರು ವರ್ಷವಾದರೂ ಮನೆಕಟ್ಟಿ ಕೊಟ್ಟದ ಹಿನ್ನೆಲೆ ಇಂದು ಸಂತ್ರಸ್ತರು ಉಸ್ತುವಾರಿ ಸಚಿವ ಅಂಗಾರ, ಶಾಸಕ ಎಂ.ಪಿ ಕುಮಾರಸ್ವಾಮಿಗೆ ಕ್ಲಾಸ್​ ತೆಗೆದುಕೊಂಡರು.

Flood victims
ಸಚಿವ, ಶಾಸಕನ್ನು ತರಾಟೆಗೆ ತೆಗೆದುಕೊಂಡ ಪ್ರವಾಹ ಸಂತ್ರಸ್ತರು

ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆಗೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಅಂಗಾರ, ಶಾಸಕ ಎಂ.ಪಿ ಕುಮಾರಸ್ವಾಮಿಯನ್ನು ಸಂತ್ರಸ್ತರು ಕೆಲಕಾಲ ತರಾಟೆಗೆ ತೆಗೆದುಕೊಂಡರು.

2019 ರಲ್ಲಿ ಬಂದ ಮಹಾಮಳೆಯಿಂದ ಮನೆ, ಆಸ್ತಿಯನ್ನು ಈ ಭಾಗದ ಕೆಲ ಜನ ಕಳೆದುಕೊಂಡಿದ್ದರು. 5 ಮನೆಗಳು, 40 ಎಕರೆ ಜಮೀನು ನೀರಿನಲ್ಲಿ ಸಂಪೂರ್ಣವಾಗಿ ಕೊಚ್ಚಿ ಹೋಗಿತ್ತು. ಪ್ರವಾಹದ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು. ಆದರೆ ಪರ್ಯಾಯ ವ್ಯವಸ್ಥೆ ಮಾಡದ ಹಿನ್ನೆಲೆ ಈ ಭಾಗದ ಜನರು ಜನನಾಯಕರನ್ನು ತರಾಟೆ ತೆಗೆದುಕೊಂಡಿದ್ದಾರೆ.

ಮೂರು ವರ್ಷಗಳು ಕಳೆದರೂ ಇನ್ನೂ ಮನೆ ಕಟ್ಟಿ ಕೊಟ್ಟಿಲ್ಲ. ನಿಮ್ಮಿಂದ ಆಗುವುದಿಲ್ಲ ಅಂದ್ರೆ ಹೇಳಿ, ಭಿಕ್ಷೆ ಬೇಡಿ ಬದುಕುತ್ತೇವೆ ಎಂದು ಶಾಸಕರಿಗೆ ಕ್ಲಾಸ್​ ತೆಗೆದುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.