ETV Bharat / state

ಮಳೆಯ ಅಬ್ಬರಕ್ಕೆ ಕಾಫಿನಾಡು ತತ್ತರ.. ಹೇಮಾವತಿ, ಭದ್ರಾ ನದಿ ತಟದಲ್ಲಿ ಪ್ರವಾಹ ಭೀತಿ! - ಚಿಕ್ಕಮಗಳೂರಿನಲ್ಲಿ ಮಳೆ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮದ ಸೇತುವೆ ಕೊಚ್ಚಿ ಹೋಗಿ, ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೊಪ್ಪ ತಾಲೂಕಿನ ಬೆಟ್ಟಮಕ್ಕಿ ಗಿರಿಜನ ಕಾಲೋನಿಯಲ್ಲಿ 15 ಗಿರಿಜನ ಕುಟುಂಬಗಳ ಸಂಪರ್ಕ ಕಡಿತಗೊಂಡಿದೆ.

ಮಳೆಯ ಅಬ್ಬರಕ್ಕೆ ಕಾಫಿನಾಡು ತತ್ತರ..
author img

By

Published : Aug 7, 2019, 6:43 PM IST

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಹೇಮಾವತಿ ತಟದಲ್ಲಿ ನೆರೆ ಭೀತಿ ಎದುರಾಗಿದ್ದು, ನದಿ ಉಕ್ಕಿ ಹರಿಯುತ್ತಿದೆ.

ಮೂಡಿಗೆರೆ ತಾಲೂಕಿನ ಹಂತೂರು ಗ್ರಾಮದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಜಲಾವೃತಗೊಂಡಿದ್ದ 9 ಜನರನ್ನು ರಕ್ಷಣೆ ಮಾಡಲಾಗಿದೆ. 4 ಪುರುಷರು, 3 ಮಹಿಳೆಯರು, ಇಬ್ಬರು ಮಕ್ಕಳನ್ನ ರಕ್ಷಣೆ ಮಾಡಲಾಗಿದೆ. ಮೂರು ರಾಸುಗಳನ್ನು ಸಹ ರಕ್ಷಿಸಲಾಗಿದೆ. ಹರೇ ರಾಮ ಹರೇ ಕೃಷ್ಣ ಆಶ್ರಮದಿಂದ ರಕ್ಷಣೆ ಕಾರ್ಯ ಮುಂದುವರಿದಿದ್ದು, 9 ಜನರಿಗೆ ಹಂತೂರು ಶಾಲೆಯಲ್ಲಿ ಆಶ್ರಯ ನೀಡಲಾಗಿದೆ. ಹೇಮಾವತಿ ನದಿಪಾತ್ರದ ಸಾವಿರಾರು ಎಕರೆ ಜಲಾವೃತವಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮದ ಸೇತುವೆ ಕೊಚ್ಚಿ ಹೋಗಿ, ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೊಪ್ಪ ತಾಲೂಕಿನ ಬೆಟ್ಟಮಕ್ಕಿ ಗಿರಿಜನ ಕಾಲೋನಿಯಲ್ಲಿ 15 ಗಿರಿಜನ ಕುಟುಂಬಗಳ ಸಂಪರ್ಕ ಕಡಿತಗೊಂಡಿದೆ. ಕಾಡಂಚಿನಲ್ಲಿ 15 ಗಿರಿಜನ ಕುಟುಂಬ ವಾಸವಾಗಿದ್ದರು. ಭಾರೀ ಮಳೆಗೆ ಗಿರಿಜನರು ಅತಂತ್ರರಾಗಿದ್ದಾರೆ. ಗ್ರಾಮದ ಹೊಲ-ಗದ್ದೆ, ತೋಟಗಳು ಸಂಪೂರ್ಣವಾಗಿ ಜಲಾವೃತವಾಗಿವೆ.

ಮಳೆಯ ಅಬ್ಬರಕ್ಕೆ ಕಾಫಿನಾಡು ತತ್ತರ..

ಉಕ್ಕಿ ಹರಿಯುತ್ತಿದ್ದಾಳೆ ಭದ್ರೆ :

ವರುಣನ ರೌದ್ರ ನರ್ತನಕ್ಕೆ ಭದ್ರೆಯ ಒಡಲು ಉಕ್ಕಿ ಹರಿಯುತ್ತಿದ್ದು, ಬಾಳೆಹೊನ್ನೂರಿನ ಬಳಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಧಾರಾಕಾರ ಮಳೆಯಿಂದಾಗಿ ಬಾಳೆಹೊನ್ನೂರು ಪಟ್ಟಣದಲ್ಲಿರುವ ಅಂಗಡಿ ಮುಗ್ಗಟ್ಟುಗಳಿಗೆ ನದಿಯ ನೀರು ನುಗ್ಗಿದ್ದು, ರಸ್ತೆಗಳಲ್ಲಿ ನೀರು ಹರಿಯುತ್ತಿದೆ. ಭದ್ರಾ ನದಿಯಲ್ಲಿ ನೀರಿನ ಹೊರ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ನದಿ ಪಾತ್ರದ ಜಮೀನುಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ನದಿ ಸಮೀಪವಿರುವ ಹೊಳೇವಾಗಿಲು ಗ್ರಾಮದ 5 ಕುಟುಂಬಗಳಿಗೆ ಸ್ಥಳಾಂತರ ಆಗುವಂತೆ ಅಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ.

Intro:Kn_Ckm_08_Bhadra river_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಧಾರಕಾರ ಮಳೆ ಮುಂದುವರೆದಿದ್ದು ವರುಣ ತನ್ನ ರೌದ್ರ ನರ್ತನಕ್ಕೆ ಬ್ರೇಕ್ ಹಾಕುವಂತಹ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.ಇದರಿಂದ ಭದ್ರೆಯ ಒಡಲು ಉಕ್ಕಿ ಹರಿಯುತ್ತಿದ್ದು ಬಾಳೆಹೊನ್ನೂರಿನ ಬಳಿ ಇರುವ ಭದ್ರೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಳೆ. ಬಾರೀ ಮಳೆಯಿಂದಾಗಿ ಬಾಳೆಹೊನ್ನೂರು ಪಟ್ಟಣದಲ್ಲಿರುವ ಅಂಗಡಿ ಮುಗ್ಗಟ್ಟುಗಳಿಗೆ ನದಿಯ ನೀರು ನುಗ್ಗಿದ್ದು ರಸ್ತೆಯಲ್ಲಿಯೇ ನೀರು ಹರಿಯಲು ಪ್ರಾರಂಭ ಮಾಡಿದೆ. ಭದ್ರಾ ನದಿಯಲ್ಲಿ ಹರಿವಿನ ಪ್ರಮಾಣ ಹೆಚ್ಚಳ ಆದ ಕಾರಣ ನದಿ ಪಾತ್ರದ ಜಮೀನುಗಳು ಸಂಪೂರ್ಣವಾಗಿ ಜಾಲವೃತವಾಗಿದ್ದು ನದಿ ಸಮೀಪವಿರುವ ಹೊಳೇವಾಗಿಲು ಗ್ರಾಮದ 5 ಕುಟುಂಬಗಳಿಗೆ ಸ್ಥಳಾಂತರ ಆಗುವಂತೆ ಅಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ...

Conclusion:ರಾಜಕುಮಾರ್....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2025 Ushodaya Enterprises Pvt. Ltd., All Rights Reserved.