ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಮನೆ ಹಾಗೂ ಬದುಕನ್ನು ಕಳೆದುಕೊಂಡ ನಿರಾಶ್ರಿತರಿಗೆ ಮಾಲ್ಗುಡಿ ಡೇಸ್ ಚಿತ್ರ ತಂಡ ಇಂದು ನೆರವು ನೀಡಿದೆ.
ಚಿತ್ರೀಕರಣಕ್ಕಾಗಿ ಮಾತ್ರ ನಾವು ನಿಮ್ಮ ಊರಿಗೆ ಬರುವುದಿಲ್ಲ. ನಿಮ್ಮ ಕಷ್ಟದಲ್ಲೂ ನಾವು ಭಾಗಿಯಾಗುತ್ತೇವೆ ಎನ್ನುವ ಮೂಲಕ ನಿರಾಶ್ರಿತರಿಗೆ ಬೇಕಿರುವ ಅಗತ್ಯ ವಸ್ತುಗಳನ್ನು ಭದ್ರಾ ನದಿ ಪಾತ್ರದ ಗ್ರಾಮಗಳಿಗೆ, ಬಾಳೆಹೊನ್ನೂರಿನ ಬಂಡಿಮಠದ ಗ್ರಾಮಸ್ಥರಿಗೆ ವಿತರಿಸಿದರು.
ಮಲೆನಾಡು ಭಾಗದಲ್ಲಿ ಚಿತ್ರೀಕರಣ ವೇಳೆ ಸ್ಥಳೀಯರು ನೀಡಿದ ಸಹಾಯವನ್ನು ನಾವು ಮರೆತಿಲ್ಲ. ಈ ಹಿನ್ನೆಲೆಯಲ್ಲಿ ಜನರ ಕಷ್ಟದಲ್ಲಿ ನಾವು ಸಹ ಪಾಲುದಾರರು. ನೆರೆ ಸಂತ್ರಸ್ತರಿಗೆ 300 ಹಾಸಿಗೆಗಳು, 300 ಹೊದಿಕೆಗಳು, ಪುರುಷರ ಹಾಗೂ ಮಹಿಳೆಯರ ದಿನಬಳಕೆ ವಸ್ತುಗಳ ಮತ್ತು ಸಣ್ಣ ಮಕ್ಕಳ ಬಟ್ಟೆಗಳನ್ನು ವಿತರಿಸುತ್ತಿದ್ದೇವೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಇನ್ನು ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಸುಮಾರು ₹ 6 ಲಕ್ಷ ಚೆಕ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ. ಬಾಳೆಹೊನ್ನೂರು, ಕಳಸ, ಮೂಡಿಗೆರೆ, ಮಾಗುಂಡಿ ಗ್ರಾಮದ ನೆರೆ ಸಂತ್ರಸ್ತರ ಮನೆ, ಮನೆಗೆ ತೆರಳಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ ಚಿತ್ರತಂಡದ ಸದಸ್ಯರು ತಿಳಿಸಿದರು.