ETV Bharat / state

ಈಟಿವಿ ಭಾರತ ಫಲಶೃತಿ: ಕಂಗಾಲಾಗಿದ್ದ ರೈತನಿಗೆ ಪರಿಹಾರ ವಿತರಣೆ - ಈಟಿವಿ ಭಾರತ ಫಲಶೃತಿ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ರೈತನ ಬಾಳೆ ಬೆಳೆ ಮಳೆಗೆ ನೆಲ ಕಚ್ಚಿತ್ತು. ಈಟಿವಿ ಭಾರತ ಈ ಸಂಬಂಧ ಸುದ್ದಿ ಪ್ರಕಟಿಸಿದ ಬೆನ್ನಲ್ಲೇ ಸ್ಥಳಕ್ಕೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಂಡ ಭೇಟಿ ನೀಡಿ, ಪರಿಹಾರ ವಿತರಿಸಿದೆ.

Destroy the banana plantation in the rain
ಮಳೆಯಿಂದ ನಷ್ಟ ಹೊಂದಿದ ಬಾಳೆ ತೋಟದ ಮಾಲೀಕರಿಗೆ ಪರಿಹಾರ ವಿತರಣೆ
author img

By

Published : Aug 6, 2020, 8:49 PM IST

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕೆಂಬತ್ ಮಕ್ಕಿ ಎಂಬ ಗ್ರಾಮದ ರೈತ ರಾಜಣ್ಣ ಎಂಬುವವರಿಗೆ ಸೇರಿದ್ದ ಅಂದಾಜು 6 ಎಕರೆ ಬಾಳೆ ತೋಟ ಮಳೆಯಿಂದಾಗಿ ನಾಶವಾಗಿತ್ತು. ಈ ಕುರಿತು ಈ ಟಿವಿ ಭಾರತ ಸುದ್ದಿ ಪ್ರಕಟಿಸಿತ್ತು.

ತಕ್ಷಣವೇ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹೆಚ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸ್ಥಳದಲ್ಲಿಯೇ 27 ಸಾವಿರ ರೂ. ಮೊತ್ತದ ಪರಿಹಾರದ ಚೆಕ್ ವಿತರಿಸಿದರು.

Destroy the banana plantation in the rain
ಮಳೆಯಿಂದ ನಷ್ಟ ಹೊಂದಿದ ಬಾಳೆ ತೋಟದ ಮಾಲೀಕರಿಗೆ ಪರಿಹಾರ ವಿತರಣೆ

6 ಎಕರೆ ವಿಸ್ತೀರ್ಣದಲ್ಲಿ 9 ಸಾವಿರ ಬಾಳೆ ಗಿಡಗಳನ್ನು ರಾಜಣ್ಣ ಬೆಳೆಸಿದ್ದರು. ಧಾರಾಕಾರ ಮಳೆಗೆ ಬಾಳೆ ಗಿಡಗಳು ನೆಲಕಚ್ಚಿದ್ದವು. ಇದರಿಂದ ರೈತ ರಾಜಣ್ಣ ನಷ್ಟ ಅನುಭವಿಸಿದ್ದರು.

ಎನ್​ಡಿಆರ್​ಎಫ್ ಮಾರ್ಗಸೂಚಿಯನ್ವಯ ಹಾನಿಗೊಳಗಾದ ಜಾಗವನ್ನು ಎರಡು ಹೆಕ್ಟೇರ್ ವಿಸ್ತೀರ್ಣಕ್ಕೆ ಮಿತಿಗೊಳಿಸಿ 27 ಸಾವಿರ ರೂ. ಪರಿಹಾರದ ಚೆಕ್ ಸ್ಥಳದಲ್ಲಿಯೇ ರೈತ ರಾಜಣ್ಣನಿಗೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ವಿತರಣೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.