ಚಿಕ್ಕಮಗಳೂರು: ಇಲ್ಲಿನ ಮುತ್ತೋಡಿ ಅರಣ್ಯದಲ್ಲಿ ಸಫಾರಿಗೆ ಹೋದ ಪ್ರವಾಸಿಗರಿಗೆ ಗಜಪಡೆಯು ದರ್ಶನ ನೀಡಿವೆ. ಗಜಪಡೆಯನ್ನು ಕಂಡ ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ.
ಭಾನುವಾರದಂದು ಸಫಾರಿಗೆ ಕರೆದುಕೊಂಡು ಹೋದ ಟ್ಯಾಕ್ಸಿ ಚಾಲಕರು ಮೊಬೈಲ್‍ನಲ್ಲಿ ಈ ಅಪರೂಪದ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಸಾಮಾನ್ಯವಾಗಿ ಸಫಾರಿಗೆ ಹೋದವರಿಗೆ ನಾಲ್ಕೈದು ಆನೆಗಳು ಕಾಣ ಸಿಗುತ್ತವೆ. ಆದರೆ ಈ ಬಾರಿ ಮಾತ್ರ 10-15ಕ್ಕೂ ಹೆಚ್ಚು ಆನೆಗಳು ಜೊತೆಯಾಗಿ ಗಜಪಡೆ ರಸ್ತೆ ದಾಟುತ್ತಿರುವುದನ್ನು ಕಂಡ ಜನರು ಮನಸೋತಿದ್ದಾರೆ.
ಎಷ್ಟೋ ಬಾರಿ ಸಫಾರಿಗೆ ಹೋದವರಿಗೆ ಏನೂ ಕಾಣಸಿಗೋದಿಲ್ಲ. ಆದರೆ ನಿನ್ನೆ ಮಾತ್ರ ಒಂದೇ ಜಾಗದಲ್ಲಿ ಇಷ್ಟೊಂದು ಆನೆಗಳು ರೋಡ್ ಕ್ರಾಸ್ ಮಾಡಿರೋದು ಕಂಡು ಪ್ರವಾಸಿಗರು ಫುಲ್ ಎಂಜಾಯ್ ಮಾಡಿದ್ದಾರೆ.