ETV Bharat / state

ಕೂಲಿಗಾಗಿ ಊರು ಬಿಟ್ಟು ಬಂದಿದ್ದವರ ಮೇಲೆ ಕಾಡಾನೆ ದಾಳಿ: ಕಾಫಿನಾಡಲ್ಲಿ ದಂಪತಿ ಸ್ಥಿತಿ ಗಂಭೀರ

ಹಾಸನ ಜಿಲ್ಲೆಯಿಂದ ಕೂಲಿ ಕೆಲಸಕ್ಕಾಗಿ ಮೂಡಿಗೆರೆಗೆ ಬಂದಿದ್ದ ದಂಪತಿ ಮೇಲೆ ಕಾಡಾನೆ ದಾಳಿ - ದಂಪತಿಯನ್ನು ಆಸ್ಪತ್ರೆಗೆ ಸೇರಿಸಿದ ಜನ - ಭೈರನ ಸೆರೆಯ ನಂತರವೂ ಮಲೆನಾಡಿಗರಿಗೆ ಮುಗಿಯದ ಆನೆ ಕಾಟ.

Elephant Attack in Mudigere
ಕೂಲಿಗಾಗಿ ಊರು ಬಿಟ್ಟು ಬಂದಿದ್ದವರ ಮೇಲೆ ಕಾಡಾನೆ ದಾಳಿ
author img

By

Published : Dec 26, 2022, 10:27 AM IST

ಚಿಕ್ಕಮಗಳೂರು: ಕಾಫಿನಾಡಾದ ಚಿಕ್ಕಮಗಳೂರಿನಲ್ಲಿ ಮಾನವ ಪ್ರಾಣಿ ಸಂಘರ್ಷ ನಡೆಯುತ್ತಲೇ ಇರುತ್ತದೆ. ರಸ್ತೆ ಬದಿ ಆಶ್ರಯ ಪಡೆದಿದ್ದವರ ಮೇಲೆ ಕಾಡಾನೆ ದಾಳಿ ಮಾಡಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ದಂಪತಿ ಪಾರಾಗಿದ್ದಾರೆ. ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್​ನಲ್ಲಿ ನಡೆದಿದೆ.

ಕೂಲಿ ಕೆಲಸಕ್ಕೆಂದು ಹಾಸನ ಜಿಲ್ಲೆಯ ಹಗರೆಯಿಂದ ಮೂಡಿಗೆರೆಗೆ ಈ ದಂಪತಿ ಬಂದಿದ್ದರು. ಭಾನುವಾರ ರಾತ್ರಿ ಬಣಕಲ್​ನ ​ಪಶು ಆಸ್ಪತ್ರೆ ಬಳಿ ಮಲಗಿದ್ದಾಗ ಕಾಡಾನೆ ದಾಳಿ ಮಾಡಿದೆ. ನಾಗವಲ್ಲಿ ಹಾಗೂ ಗಂಡುಗುಸೆ ಎಂಬ ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೂಡಿಗೆರೆ ತಾಲ್ಲೂಕು ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಕಾಡಾನೆ ಹಾವಳಿ ನಿಯಂತ್ರಣ ಮಾಡದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮಗಳಿಗೆ ಬಂದು ಜೀವ ಭಯ ಸೃಷ್ಟಿಸುತ್ತಿರುವ ಕಾಡಾನೆಗಳ ಸ್ಥಳಾಂತರಕ್ಕೆ ಆಗ್ರಹಿಸುತ್ತಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಹರಸಾಹಸ ಪಟ್ಟು ಭೈರನ ಸೆರೆ: ಈ ಹಿಂದೆ ಮಲೆನಾಡಿನ ಜನರ ನಿದ್ದೆಗೆಡಿಸಿದ್ದ ಬೈರನನ್ನು ಬಂಧಿಸಲಾಗಿತ್ತು. ಕಾಡಾನೆ ಭೈರನ ದಾಳಿಗೆ ಮೂಡಿಗೆರೆ ತಾಲೂಕಲ್ಲಿ ಇಬ್ಬರು ಬಲಿ ಆಗಿದ್ದರು. ಇದರಿಂದ ಉದ್ರಿಕ್ತರಾಗಿದ್ದ ಜನರು ಅಂದು ಸ್ಥಳಕ್ಕೆ ಆಗಮಿಸಿದ್ದ ಶಾಸಕ ಎಂ ಪಿ ಕುಮಾರಸ್ವಾಮಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದರು.

ಇದರಿಂದ ಬೇಸತ್ತ ಶಾಸಕರು ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಜನರು ಕ್ಷೇತ್ರದಲ್ಲಿ ನನ್ನನ್ನು ಓಡಾಡಲು ಬಿಡುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ನಮ್ಮ ಪ್ರಾಣಕ್ಕೂ ಆಪತ್ತು ತಪ್ಪಿದ್ದಲ್ಲ ಎಂದು ಅಳಲು ತೋಡಿಕೊಂಡಿದ್ದರು.

ಈ ಘಟನೆ ಬಳಿಕ ಭೈರನನ್ನು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಸೆರೆಹಿಡಿದಿದ್ದರು. ಹೀಗೆ ನೆಮ್ಮದಿಯ ನಿಟ್ಟುಸಿರು ಬಟ್ಟ ರೈತರಿಗೆ ಮತ್ತೆ ಆನೆ ಹಾವಳಿ ಆರಂಭವಾಗಿದೆ. ತರಿಕೆರೆಯಲ್ಲಿ ಭಾನುವಾರ (ಡಿ. 25ರಂದು) ಜಮೀನು ಕಾಯುತ್ತಿದ್ದ ರೈತನ ಮೇಲೆ ಕಾಡಿನ ಆನೆ ದಾಳಿ ಮಾಡಿತ್ತು. ಆನೆ ದಾಳಿಗೆ 60 ವರ್ಷದ ರೈತ ಈರಪ್ಪ ಸಾವನ್ನಪ್ಪಿದ್ದಾರೆ.

ಈಗ ಮೂಡಿಗೆರೆ ತಾಲೂಕಿನ ಬಣಕಲ್​ನಲ್ಲಿ ಆನೆ ದಂಪತಿ ಮೇಲೆ ದಾಳಿ ಮಾಡಿದ್ದು, ಆನೆಯ ದಾಳಿಯಿಂದ ಗ್ರಾಮದ ಜನರು ಭಯದಲ್ಲೇ ವಾಸಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ಘಟನೆಗಳು ಮರುಕಳಿಸುತ್ತಿರುವುದರಿಂದ ಕಾಡು ಪ್ರಾಣಿಗಳು ಮತ್ತು ಮಾನವ ಸಂಘರ್ಷಕ್ಕೆ ಕೊನೆ ಇಲ್ಲವಾ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಇದನ್ನೂ ಓದಿ: ಕಾಡಾನೆ ದಾಳಿಗೆ ಚಿಕ್ಕಮಗಳೂರಲ್ಲಿ ರೈತ ಬಲಿ.. ಭೈರನ ಸೆರೆಯಿಂದ ನಿಟ್ಟುಸಿರು ಬಿಟ್ಟ ಜನರಿಗೆ ಮತ್ತೆ ಆತಂಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.