ಚಿಕ್ಕಮಗಳೂರು : ಇಲ್ಲಿನ ದತ್ತಪೀಠದ ಹೋಮ ಮಂಟಪದಲ್ಲಿ ಮಾಂಸಾಹಾರ ಅಡುಗೆ ಮಾಡಿ ಸೇವಿಸಲಾಗಿದೆ. ಇಲ್ಲಿ ಹಿಂದೂ ಮತ್ತು ಮುಸ್ಲಿಂರ ಧಾರ್ಮಿಕ ಆಚರಣೆ ಜಾಗ ಎಂದು ಘೋಷಿಸಿ ಕೋರ್ಟ್ ಆದೇಶ ಈ ಹಿಂದೆ ನೀಡಿದೆ. ಹಿಂದೂಗಳಿಗಾಗಿ ಹೋಮ ಮಾಡಲು ಶೆಡ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದರೆ, ಬಂದ ಪ್ರವಾಸಿಗರ ಹೋಮಕ್ಕೆ ಮಾಡಿದ್ದ ಜಾಗದಲ್ಲಿ ಮಾಂಸಾಹಾರ ಮಾಡಿದ್ದಾರೆ ಎಂದು ಹಿಂದೂ ಸಂಘಟನೆಯ ಮುಖಂಡರು ಆರೋಪ ಮಾಡುತ್ತಿದ್ದಾರೆ.
ರಕ್ಷಣೆಗಾಗಿ ಅಧಿಕಾರಿಗಳನ್ನು ನೇಮಿಸಿದರೂ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ದೂರು ನೀಡಿದ ನಂತರ ಕಾಟಾಚಾರಕ್ಕೆ ಹೋಮ ಶಾಲೆಯ ಅಡ್ಡಲಾಗಿ ಯಾರು ಹೋಗದಂತೆ ಕಟ್ಟಲಾಗಿದೆ. ಆದರೆ, ಅಲ್ಲಿ ಮಾಂಸಾಹಾರ ಮಾಡಿದ ವಿಡಿಯೋಗಳು ಹರಿದಾಡುತ್ತಿವೆ ಎಂದು ಆರೋಪಿಸಿದ್ದಾರೆ.
ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಹೀಗೆ ಮುಂದುವರೆಯುತ್ತದೆ. ಪೊಲೀಸರು ಮತ್ತು ಜಿಲ್ಲಾಡಳಿತ ಸರಿಯಾದ ಕ್ರಮಜರುಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ನಾವೇ ಸರಿಯಾದ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ : ದತ್ತಪೀಠದಲ್ಲಿರುವ ಅನಗತ್ಯ ಗೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಿ : ಸಚಿವ ಸುನೀಲ್ ಕುಮಾರ್